32 C
Mysore
Monday, March 30, 2020
Home All News ಬಗೆಹರಿಯದ ಸಪ್ತದೇವಾಲಯದ ಸಮಸ್ಯೆ…ಮುಂದುವರೆದ ಗ್ರಾಮಸ್ಥರ ಆಕ್ರೋಷ…

ಬಗೆಹರಿಯದ ಸಪ್ತದೇವಾಲಯದ ಸಮಸ್ಯೆ…ಮುಂದುವರೆದ ಗ್ರಾಮಸ್ಥರ ಆಕ್ರೋಷ…

ನಂಜನಗೂಡು ತಾಲೂಕು ತಗಡೂರು ಗ್ರಾಮದ ಸಪ್ತದೇವಾಲಯದ ಸಮಸ್ಯೆ ಇನ್ನೂ ಬಗೆಹರಿದಿಲ್ಲ.ಅರ್ಚಕರು ಹಾಗೂ ಟ್ರಸ್ಟ್ ನಡುವೆ ಸಂಘರ್ಷ ಮುಂದುವರೆದಿದೆ.
ದೇವಾಲಯದ ಮುಂದೆ ನಿನ್ನೆ ಹೈಡ್ರಾಮಾ ನಡೆದಿದೆ.ದೇವಸ್ಥಾನದ ಬಾಗಿಲ ಮುಂದೆ ನಿಂತ ಗ್ರಾಮದ ಮಹಿಳೆಯರು
ಅರ್ಚಕರ ವಿರುದ್ದ ತೀವ್ರ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಟ್ರಸ್ಟ್ ಹಾಗೂ ಗ್ರಾಮಸ್ಥರು ಅರ್ಚಕರಿಗೆ ಲೆಕ್ಕ ನೀಡುವಂತೆ ಪಟ್ಟುಹಿಡಿದು ದೇವಸ್ಥಾನದ ಬಾಗಿಲಿಗೆ ಅಡ್ಡ ನಿಂತು ಒತ್ತಡ ಹೇರಿದ್ದಾರೆ.ಈ ವೇಳೆ
ಅರ್ಚಕರ ಬೆಂಬಲಿಗರು ಹಾಗೂ ಟ್ರಸ್ಟ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ.
ದೇವಸ್ಥಾನಕ್ಕೆ ಸಂಪ್ರದಾಯವಾಗಿ ಕೊಡುವ ತಾಳಿಯನ್ನ ಅರ್ಚಕರು ಲಪಟಾಯಿಸಿದ ಆರೋಪ ಗ್ರಾಮಸ್ಥರು ಮಾಡಿದ್ದಾರೆ.
ಹುಂಡಿ ಇಡಲು ಗ್ರಾಮಸ್ಥರು ಒತ್ತಾಯಿಸಿದರೆ ಅರ್ಚಕರು ವಿರೋಧಿಸುತ್ತಿದ್ದಾರೆಂದು ಆರೋಪ ಬಂದಿದೆ. ದೇವಸ್ಥಾನಕ್ಕೆ ಬರುವ ಆದಾಯವನ್ನ ಅರ್ಚಕರು ಸ್ವಾಹ ಮಾಡುತ್ತಿದ್ದಾರೆಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟ್ರಸ್ಟ್ ರಚನೆ ವಿರುದ್ದ ಅರತಚಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಶಿವರಾತ್ರಿ ಮುನ್ನ ದಿನ ಜಿಲ್ಲಾಡಳಿತ ದೇವಸ್ಥಾನಕ್ಕೆ ಬೀಗ ಜಡಿದಿದೆ.
ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದಲ್ಲಿ ಬಿಗುವಿನ ವಾತಾವರಣ ಇದೆ.
ಮುನ್ನೆಚ್ಚರಿಕೆ ಕ್ರಮವಾಗಿ ದೇವಸ್ಥಾನದ ಬಳಿ ಪೊಲೀಸ್ ನಿಯೂಜನೆ ಮಾಡಲಾಗಿದೆ…

LEAVE A REPLY

Please enter your comment!
Please enter your name here

- Advertisment -

Most Popular

ಮೈಸೂರು ಲಾಕ್ ಡೌನ್…ಮನೆಗೇ ಬರುತ್ತೆ ಕಡಿಮೆ ದರದ ಪ್ರಾವಿಷನ್…ಯೋಜನೆ ತಂದ್ರು ಶಾಸಕ ರಾಮದಾಸ್…

ಕೊರೊನಾ ವೈರಸ್ ನಿಂದ ಘೋಷಿಸಿದ ಲಾಕ್ ಡೌನ್ ಸಖತ್‌ಎಫೆಕ್ಟ್ ಆಗಿದೆ.ಮನೆಯಿಂದ ಹೊರಗೆ ಬರಬಾರದೆಂಬ ನಿಯಮ ಕೆಲವರಿಗಂತೂ ಸಂಕಷ್ಟ ತಂದಿದೆ.ದಿನಸಿ ಸಾಮಾನು ತರಲೂ ಕಷ್ಟವಾಗುತ್ತಿದೆ.ಹೊರಗೆ ಬಂದರೆ ಪೊಲೀಸರ ಕರೊನಾ ಹೆದರಿಕೆ ಮನೆಯಲ್ಲಿದ್ದರೆ...

ಜಿಲ್ಲಾಡಳಿತದಿಂದ ಕೊರೊನ ಜಾಗೃತಿ ಭರ್ಜರಿ…ಎಪಿಎಂಸಿಕಾರ್ಮಿಕರಿಗೆ ಇಲ್ಲ ಸೇಫ್ಟಿ…

ಇದೊಂದು ವಿಪರ್ಯಾಸದ ಸಂಗತಿ ಅಂದರೆ ತಪ್ಪಿಲ್ಲ.ಇಡೀ ಜಗತ್ತೇ ಕೊರೊನಾ ಹೆಸರೇಳಿದರೆ ಬೆಚ್ಚಿಬೀಳುತ್ತಿದೆ.ಮೈಸೂರಿನಲ್ಲಂತೂ ಭರ್ಜರಿಯಾಗಿ ಜಾಗೃತಿ ಮೂಡಿಸಲಾಗುತ್ತಿದೆ.ಆದರೆ ಎಪಿಎಂಸಿ ಆವರಣವನ್ನ ಸ್ವಚ್ಛಗೊಳಿಸುವ ಪೌರಕಾರ್ಮಿಕರ ಸೇಫ್ಟಿ ಬಗ್ಗೆ ತಲೆಯೇ ಕೊಡಿಸಿಕೊಂಡಿಲ್ಲ.ಇಲ್ಲಿನ ಪೌರಕಾರ್ಮಿಕರು ಸಂಪೂರ್ಣವಾಗಿ...

ಮನೆಯಿಂದ ಹೊರಬಂದರೆ ಕರೊನಾ…ಒಳಗಿದ್ದರೆ ನಗೀನಾ…ಹುಣಸೂರು ಜನತೆಗೆ ಹಾವಿನ ಕಾಟ…

ಕೊರೊನಾ ವೈರಸ್ ಮನುಕುಲಕ್ಕೆ ಭೀತಿ ಹುಟ್ಟಿಸಿದೆ.ಗೃಹಬಂಧನವೇ ಮುಕ್ತಿಗೆ ದಾರಿ.ಮನೆಯಲ್ಲಿದ್ದರೆ ಮಾತ್ರ ಸೇಫ್.ಹುಣಸೂರಿನ‌ ಶಬ್ಬೀರ್ ನಗರದ ನಿವಾಸಿಗಳಿಗೆ ಮನೆಯೂ ಸೇಫಾಗಿಲ್ಲ ಯಾಕೆ ಗೊತ್ತಾ…? ಹಾವುಗಳ ಕಾಟ.ನಿನ್ನೆ ರಾತ್ರಿಯಂತೂ ಎರಡು ಹಾವುಗಳ ಓಡಾಟ...

ಅಸಮರ್ಥ ಅಧಿಕಾರಿಗಳನ್ನ ವರ್ಗಾವಣೆ ಮಾಡಿ…ಹಳ್ಳಿಹಕ್ಕಿ ಕಿಡಿ…

ಕೊರೊನಾ ವೈರಸ್ ವಿಚಾರದಲ್ಲಿ ಹಳ್ಳಿಹಕ್ಕಿ ವಿಶ್ವನಾಥ್ ಮೌನ ಮುರಿದಿದ್ದಾರೆ.ಇಷ್ಟು ದಿನ ಮೌನವಹಿಸಿದ್ದ ವಿಶ್ವನಾಥ್ ವಿಡಿಯೋ ಮೂಲಕ ಮುಖ್ಯಮಂತ್ರಿಗಳಿಗೆ ಸಂದೇಶ ರವಾನೆ ಮಾಡಿದ್ದಾರೆ.ಸಮರ್ಥ ಅಧಿಕಾರಿಗಳನ್ನ‌ ಮೈಸೂರಿಗೆ ವರ್ಗಾಯಿಸಿ.ಅಸಮರ್ಥ ಅಧಿಕಾರಿಗಳನ್ನ ಎತ್ತಂಗಡಿ ಮಾಡಿ...

Recent Comments