32 C
Mysore
Friday, January 15, 2021
Home All News ತುಕ್ಕು ಹಿಡಿಯುತ್ತಿದೆ ಶವಸಾಗಿಸುವ ವಾಹನ ಮುಕ್ತಿ…ಬಳಸಿಕೊಳ್ಳಲು ಅಧಿಕಾರಿಗಳಿಗೆ ಇಲ್ಲ ಇಚ್ಛಾಶಕ್ತಿ…

ತುಕ್ಕು ಹಿಡಿಯುತ್ತಿದೆ ಶವಸಾಗಿಸುವ ವಾಹನ ಮುಕ್ತಿ…ಬಳಸಿಕೊಳ್ಳಲು ಅಧಿಕಾರಿಗಳಿಗೆ ಇಲ್ಲ ಇಚ್ಛಾಶಕ್ತಿ…

ಬಡಜನತಗೆ ಉಪಯೋಗವಾಗಲೆಂದು ಮಾಜಿ ವಿಧಾನಪರಿಷತ್ ಸದಸ್ಯ ಗೋ.ಮಧುಸೂದನ್ ಕೊಡುಗೆ ನೀಡಿದ ಶವಸಾಗಿಸುವ ಮುಕ್ತಿ ವಾಹನ ಮೂಲೆಗೆ ಸೇರಿದೆ.ನಂಜನಗೂಡು ನಗರಸಭೆ ಆವರಣದಲ್ಲಿ ತುಕ್ಕು ಹಿಡಿಯುತ್ತಾ ಅನಾಥವಾಗಿ ನಿಂತಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಮುಕ್ತಿ ವಾಹನ.ಕಳೆದ ಮೂರು ವರ್ಷಗಳಿಂದ ನಿಷ್ಕ್ರಿಯವಾಗಿರುವ ವಾಹನದತ್ತ ತಿರುಗಿನೋಡುವವರೂ ಇಲ್ಲದಂತಾಗಿದೆ.ಮಾಜಿ ವಿಧಾನಪರಿಷತ್ ಸದಸ್ಯ ಗೋ.ಮಧುಸೂಧನ್ ರವರು ಶಾಸಕರ ಅನುದಾನದಲ್ಲಿ

೨ ಕೋಟಿ‌ ವೆಚ್ಚದಲ್ಲಿ ತಮ್ಮ ಕ್ಷೇತ್ರ ವ್ಯಾಪ್ತಿಗೆ ಹತ್ತು ವಾಹನಗಳನ್ನ ಕೊಡುಗೆಯಾಗಿ ಕೊಟ್ಟಿದ್ದರು.೨೦೧೫ ರಲ್ಲಿ ಕೊಟ್ಟ ವಾಹನಗಳ ಪೈಕಿ ನಂಜನಗೂಡು,ರಾಮನಗರದಲ್ಲಿರುವ ವಾಹನಗಳು ಸ್ಥಗಿತಗೊಂಡಿವೆ.
ಬಡವರ್ಗದ ಜನತೆಗೆ ಅನುಕೂಲವಾಗಲೆಂದು ಕೊಟ್ಟ ವಾಹನ ಧೂಳು ಹಿಡಿಯುತ್ತಾ ನಿಂತಿದೆ.ಶವಸಾಗಿಸಬೇಕಾದರೆ ಸಾವಿರಾರು‌ ರೂಪಾಯಿಗಳನ್ನ ಖರ್ಚು ಮಾಡಬೇಕು.ಬಡಜನತೆಗೆ ಇದನ್ನ ಭರಿಸುವುದು ಕಷ್ಟ.ಈ ಸಮಸ್ಯೆಯನ್ನ ಮನಗಂಡ ಗೋ.ಮಧುಸೂಧನ್ ೧೦ ವಾಹನಗಳನ್ನ ತಮ್ಮ‌ ಅನುದಾನದಲ್ಲಿ ಕೊಡಿಸಿದ್ದರು.ನಂಜನಗೂಡು ಹಾಗೂ ರಾಮನಗರದಲ್ಲಿನ ವಾಹನಗಳು ಮೂಲೆ ಸೇರಿ ಮೂರು ವರ್ಷಗಳು ಕಳೆದಿದೆ.ಆದರೂ ಸದುಪಯೋಗ ಪಡಿಸಿಕೊಳ್ಳಲು ಅಧಿಕಾರಿಗಳು ಉದಾಸೀನ ತೋರಿದ್ದಾರೆ.ಈ ವಿಚಾರ ಗೋ.ಮಧುಸೂಧನ್ ರವರ ಗಮನಕ್ಕೆ ಬಂದಿದೆ.ಸಂಭಂಧ ಪಟ್ಟ ಅಧಿಕಾರಿಗಳ ಜೊತೆ ಮಾತನಾಡುವುದಾಗಿ ತಿಳಿಸಿದ್ದಾರೆ…

1 COMMENT

LEAVE A REPLY

Please enter your comment!
Please enter your name here

- Advertisment -

Most Popular

ಗ್ರಾ.ಪಂ.ಚುನಾವಣೆಯಲ್ಲಿ ಪತ್ನಿಗೆ ಸೋಲು…ಪತಿ ಸೂಸೈಡ್…

ಇತ್ತೀಚೆಗೆ ನಡೆದ ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಪತ್ನಿ ಸೋತ ಹಿನ್ನಲೆ ಪತಿರಾಯ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕು...

ಮಗನ ಕೊಲೆ ಮುಚ್ಚಿ ಹಾಕಲು ತಂದೆಯನ್ನೂ ಕೊಲೆ ಮಾಡಿದ ದುಷ್ಕರ್ಮಿಗಳು ಅಂದರ್…

ಮಗನ ಕೊಲೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ತಂದೆಯನ್ನೂ ಕೊಲೆ ಮಾಡಿದ ಹಂತಕರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.ಮೈಸೂರಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಡಕಳ್ಳಿ ಗ್ರಾಮದಲ್ಲಿ ಘಟನೆ...

ಕಾರ್ಯಕರ್ತನ ಟೀ ಅಂಗಡಿಯಲ್ಲಿ ಲೆಮನ್ ಟೀ ಸವಿದ ಹೆಚ್ಡಿಕೆ…

ತಮ್ಮ ಕಾರ್ಯಕರ್ತನ ಟೀ ಅಂಗಡಿಯಲ್ಲಿ ಸ್ಪೆಷಲ್ ಲೆಮನ್ ಮಡಿಕೆ ಟೀ ಕುಡಿದ ಮಾಜಿ ಸಿಎಂ ಕುಮಾರಸ್ವಾಮಿ ಮತ್ತೊಮ್ಮೆ ಸರಳತೆ ಮೆರೆದಿದ್ದಾರೆ. ಇಂದು ಕಾರ್ಯಕ್ರಮದ ನಿಮಿತ್ತ...

ಏಷಿಯನ್ ಪೈಂಟ್ಸ್ ವಿರುದ್ದ ರೈತರ ಪ್ರತಿಭಟನೆ…ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಸಭೆ…

ಕಳೆದ 42 ದಿನಗಳಿಂದ ಮೈಸೂರಿನ ಏಷಿಯನ್‌ ಪೇಂಟ್ಸ್‌ ಕಾರ್ಖಾನೆ ಬಳಿ ಪ್ರತಿಭಟನೆಯಲ್ಲಿ ತೊಡಗಿರುವ ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಇಂದು ಬೆಂಗಳೂರಿನಲ್ಲಿ ಬೃಹತ್‌ ಮತ್ತು...

Recent Comments