32 C
Mysore
Monday, March 30, 2020
Home All News ಕರೋನಾ ವೈರಸ್ ಭೀತಿ…ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ‌ ತಾತ್ಕಾಲಿಕ ಬಂದ್…

ಕರೋನಾ ವೈರಸ್ ಭೀತಿ…ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ‌ ತಾತ್ಕಾಲಿಕ ಬಂದ್…

ದೇಶದಾದ್ಯಂತ ಇದೀಗ ಕರೋನ ವೈರಸ್ ದೇ ಮಾತು.ಕರ್ನಾಟಕಕ್ಕೂ ಭೀತಿ ತಪ್ಪಿಲ್ಲ. ಭಯಾನಕ ರೋಗ ತಡೆಗಟ್ಟಲು ಸಾಕಷ್ಟು ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುತ್ತಿದೆ.ಪ್ರವಾಸಿಗರು ಬರುವ ಸ್ಥಳಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.ಕರೋನಾ ವೈರಸ್ ಭೀತಿ‌ ಆಶ್ರಮಗಳಿಗೂ ತಟ್ಟಿದೆ.ಮೈಸೂರು- ಊಟಿ ರಸ್ತೆಯಲ್ಲಿರುವ ಮೈಸೂರಿನ ಅವಧೂತ ದತ್ತಪೀಠದಲ್ಲಿಯೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಆಶ್ರಮವನ್ನ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ಗಣಪತಿ ಶ್ರೀಗಳು ಸಂದೇಶ ರವಾನಿಸಿದ್ದಾರೆ.ಆಶ್ರಮಕ್ಕೆ ಭಕ್ತರು ಬಾರದಂತೆ ಸಂದೇಶ ನೀಡಿದ್ದಾರೆ.
ಆಶ್ರಮದ ಆವರಣ ಮಾಸ್ಕ್‌‌ ಮಯವಾಗಿದೆ.
ಸ್ವತಃ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರೂ ಸಹ ಮಾಸ್ಕ್‌ ಧಾರಣೆ ಮಾಡಿದ್ದಾರೆ.ಮಾಸ್ಕ್ ಧರಿಸಿಯೇ ದರ್ಶನ ನೀಡುತ್ತಿದ್ದಾರೆ.ಆಶ್ರಮಕ್ಕೆ ಬರುವ ಭಕ್ತರಿಗೂ ಉಚಿತವಾಗಿ ಮಾಸ್ಕ್ ವಿತರಣೆ ಮಾಡುತ್ತಿದ್ದಾರೆ.
ಶುಕವನ, ಕಿಷ್ಕಿಂಧ ಮೂಲಿಕಾ ಬೋನ್ಸಾಯಿ ಗಾರ್ಡನ್, ವಿಶ್ವಂ ವಸ್ತು ಸಂಗ್ರಹಾಲಯ ಸೋಮವಾರದಿಂದ ಬಂದ್ ಮಾಡಲಾಗುತ್ತದೆ.೨೦ ದಿನಗಳ ಕಾಲ ಆಶ್ರಮ‌ ಬಂದ್ ಆಗಲಿದೆ.
ಕರೊನಾ ವೈರಸ್ ಹರಡದಂತೆ ಮುಂಜಾಗ್ರತೆ ವಹಿಸಲು ಕ್ರಮವಹಿಸಲಾಗಿದೆ.
ಈ ಸಂಬಂಧ ಆಶ್ರಮದ ವೆಬ್‌ಸೈಟ್‌ನಲ್ಲಿ ಕನ್ನಡ, ಇಂಗ್ಲಿಷ್, ತೆಲುಗು ಭಾಷೆಯಲ್ಲಿ ಪ್ರಕಟಣೆ ನೀಡಲಾಗಿದೆ.ಗಿಳಿವಿಂಡು, ಬೋನ್ಸಾಯ್ ಗಿಡಗಳನ್ನು ನೋಡಲು ಬರುವವರು ಬಹುತೇಕರು ವಿದೇಶಿಗರು.
ಈ ಹಿನ್ನೆಲೆಯಲ್ಲಿ ತಾತ್ಕಾಲಿಕ ಬಂದ್ ಮಾಡಲು ಕ್ರಮ ಕೈಗೊಂಡಿದ್ದಾರೆ.ಶುಭಾಶಯಗಳನ್ನ ವಿನಿಮಯ ಮಾಡುವಾಗ ತಬ್ಬಿಕೊಳ್ಳದಂತೆ ಮನವಿ ಮಾಡಿದ್ದಾರೆ.ಬಿಸಿ ನೀರು ಕುಡಿಯುವಂತೆ ಸಲಹೆ ನೀಡಿದ್ದಾರೆ.ಪಕ್ಷಿಗಳ ಹಾಗೂ ಇಲ್ಲಿಗೆ ಭೇಟಿ ನೀಡುವ ಭಕ್ತರ ಸುರಕ್ಷತೆಗಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.ಸೋಮವಾರದಿಂದತಾತ್ಕಾಲಿಕವಾಗಿ ಆಶ್ರಮ ಬಂದ್ ಆಗಲಿದೆ…

LEAVE A REPLY

Please enter your comment!
Please enter your name here

- Advertisment -

Most Popular

ಮೈಸೂರು ಲಾಕ್ ಡೌನ್…ಮನೆಗೇ ಬರುತ್ತೆ ಕಡಿಮೆ ದರದ ಪ್ರಾವಿಷನ್…ಯೋಜನೆ ತಂದ್ರು ಶಾಸಕ ರಾಮದಾಸ್…

ಕೊರೊನಾ ವೈರಸ್ ನಿಂದ ಘೋಷಿಸಿದ ಲಾಕ್ ಡೌನ್ ಸಖತ್‌ಎಫೆಕ್ಟ್ ಆಗಿದೆ.ಮನೆಯಿಂದ ಹೊರಗೆ ಬರಬಾರದೆಂಬ ನಿಯಮ ಕೆಲವರಿಗಂತೂ ಸಂಕಷ್ಟ ತಂದಿದೆ.ದಿನಸಿ ಸಾಮಾನು ತರಲೂ ಕಷ್ಟವಾಗುತ್ತಿದೆ.ಹೊರಗೆ ಬಂದರೆ ಪೊಲೀಸರ ಕರೊನಾ ಹೆದರಿಕೆ ಮನೆಯಲ್ಲಿದ್ದರೆ...

ಜಿಲ್ಲಾಡಳಿತದಿಂದ ಕೊರೊನ ಜಾಗೃತಿ ಭರ್ಜರಿ…ಎಪಿಎಂಸಿಕಾರ್ಮಿಕರಿಗೆ ಇಲ್ಲ ಸೇಫ್ಟಿ…

ಇದೊಂದು ವಿಪರ್ಯಾಸದ ಸಂಗತಿ ಅಂದರೆ ತಪ್ಪಿಲ್ಲ.ಇಡೀ ಜಗತ್ತೇ ಕೊರೊನಾ ಹೆಸರೇಳಿದರೆ ಬೆಚ್ಚಿಬೀಳುತ್ತಿದೆ.ಮೈಸೂರಿನಲ್ಲಂತೂ ಭರ್ಜರಿಯಾಗಿ ಜಾಗೃತಿ ಮೂಡಿಸಲಾಗುತ್ತಿದೆ.ಆದರೆ ಎಪಿಎಂಸಿ ಆವರಣವನ್ನ ಸ್ವಚ್ಛಗೊಳಿಸುವ ಪೌರಕಾರ್ಮಿಕರ ಸೇಫ್ಟಿ ಬಗ್ಗೆ ತಲೆಯೇ ಕೊಡಿಸಿಕೊಂಡಿಲ್ಲ.ಇಲ್ಲಿನ ಪೌರಕಾರ್ಮಿಕರು ಸಂಪೂರ್ಣವಾಗಿ...

ಮನೆಯಿಂದ ಹೊರಬಂದರೆ ಕರೊನಾ…ಒಳಗಿದ್ದರೆ ನಗೀನಾ…ಹುಣಸೂರು ಜನತೆಗೆ ಹಾವಿನ ಕಾಟ…

ಕೊರೊನಾ ವೈರಸ್ ಮನುಕುಲಕ್ಕೆ ಭೀತಿ ಹುಟ್ಟಿಸಿದೆ.ಗೃಹಬಂಧನವೇ ಮುಕ್ತಿಗೆ ದಾರಿ.ಮನೆಯಲ್ಲಿದ್ದರೆ ಮಾತ್ರ ಸೇಫ್.ಹುಣಸೂರಿನ‌ ಶಬ್ಬೀರ್ ನಗರದ ನಿವಾಸಿಗಳಿಗೆ ಮನೆಯೂ ಸೇಫಾಗಿಲ್ಲ ಯಾಕೆ ಗೊತ್ತಾ…? ಹಾವುಗಳ ಕಾಟ.ನಿನ್ನೆ ರಾತ್ರಿಯಂತೂ ಎರಡು ಹಾವುಗಳ ಓಡಾಟ...

ಅಸಮರ್ಥ ಅಧಿಕಾರಿಗಳನ್ನ ವರ್ಗಾವಣೆ ಮಾಡಿ…ಹಳ್ಳಿಹಕ್ಕಿ ಕಿಡಿ…

ಕೊರೊನಾ ವೈರಸ್ ವಿಚಾರದಲ್ಲಿ ಹಳ್ಳಿಹಕ್ಕಿ ವಿಶ್ವನಾಥ್ ಮೌನ ಮುರಿದಿದ್ದಾರೆ.ಇಷ್ಟು ದಿನ ಮೌನವಹಿಸಿದ್ದ ವಿಶ್ವನಾಥ್ ವಿಡಿಯೋ ಮೂಲಕ ಮುಖ್ಯಮಂತ್ರಿಗಳಿಗೆ ಸಂದೇಶ ರವಾನೆ ಮಾಡಿದ್ದಾರೆ.ಸಮರ್ಥ ಅಧಿಕಾರಿಗಳನ್ನ‌ ಮೈಸೂರಿಗೆ ವರ್ಗಾಯಿಸಿ.ಅಸಮರ್ಥ ಅಧಿಕಾರಿಗಳನ್ನ ಎತ್ತಂಗಡಿ ಮಾಡಿ...

Recent Comments