32 C
Mysore
Monday, March 30, 2020
Home All News ಕೊರೊನಾ ರಜೆ ಎಫೆಕ್ಟ್…ಪ್ರವಾಸಕ್ಕೆ ಬಂದ ಹುಡುಗೀರ ಆವಾಜ್ ನೋಡಿ…

ಕೊರೊನಾ ರಜೆ ಎಫೆಕ್ಟ್…ಪ್ರವಾಸಕ್ಕೆ ಬಂದ ಹುಡುಗೀರ ಆವಾಜ್ ನೋಡಿ…

ಕೊರೊನಾ ಭೀತಿ ದೇಶಾದ್ಯಂತ ಹಬ್ಬಿದೆ.ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ವೈರಸ್ ಸೋಂಕು ತಗುಲಬಾರದೆಂಬ ದೃಷ್ಟಿಯಿಂದ ವಿಧ್ಯಾರ್ಥಿಗಳಿಗೆ ರಜೆ ಘೋಷಿಸಿದರೆ ಇಬ್ಬರು ಹುಡುಗಿಯರು ಏನು ಮಾಡಿದ್ದಾರೆ ಗೊತ್ತಾ…?

ಸಕಲೇಶಪುರ ಪ್ರವಾಸಕ್ಕೆ ಬಂದ ಯುವತಿಯರು ಫುಲ್ ಟೈಟ್ ಆಗಿ ನಡೆಸಿದ ರಂಪಾಟಕ್ಕೆ ಪೊಲೀಸರೇ ಬೇಸ್ತು ಬಿದ್ದಿದ್ದಾರೆ.ಕುಡಿದ ಅಮಲಿನಲ್ಲಿ ಯುವತಿಯರ ಆಟಾಟೋಪ ಮೊಬೈಲ್ ವಿಡಿಯೋದಲ್ಲಿಬಸೆರೆಯಾಗಿದ್ದು ಫುಲ್ ವೈರಲ್ ಆಗಿದೆ.
ಕೊರೊನಾ ರಜೆ ಹಿನ್ನೆಲೆಯಲ್ಲಿ ಸಕಲೇಶಪುರ ಪ್ರವಾಸಕ್ಕೆ ಬಂದ ಯುವತಿಯರು
ನಡು ರಾತ್ರಿ ಬಯಲಿನಲ್ಲಿ ಅಮಲೇರಿಸಿಕೊಂಡು ಕುಣಿಯುತ್ತಿದ್ದರು.ಕುಡಿದ ಮತ್ತಿನಲ್ಲಿದ್ದ
ಯುವತಿಯರನ್ನ ಸ್ಥಳೀಯರು ಕರೆತಂದು ಸಕಲೇಶಪುರ ನಗರ ಪೊಲೀಸರಿಗೊಪ್ಪಿಸಿದ್ದಾರೆ.ಠಾಣೆಗೆ ಬಂದ ಯುವತಿಯರ ವರ್ತನೆ ಪೊಲೀಸರಿಗೂ ಸುಸ್ತು ಮಾಡಿದೆ.ಏನು ಹೊಡಿತೀರಾ, ಹೊಡೆಯೋಕೆ ಧೈರ್ಯ ಇದ್ಯಾ ಧೈರ್ಯ ಇದ್ದರೆ ಮುಟ್ಟಿ ಎಂದು ಅವಾಜ್ ಹಾಕಿದ್ದಾರೆ.
ನಿಮ್ಮ ಪೋಷಕರಿಗೆ ಫೋನ್ ಮಾಡಿ ಎಂದಿದ್ದಕ್ಕೆ ಮಾಡಲ್ಲ ಏನಿವಾಗ ಎಂದು ರಫ್ ಆಗಿ ಮಾತನಾಡಿದ್ದಾರೆ.
ನಮ್ಮ ಅಪ್ಪ ಅಮ್ಮನೇ ಹೊಡೆಯಲ್ಲ ನೀವ್ಯಾರು ಹೊಡೆಯೊಕೆ ತಾಕತ್ತಿದ್ದರೆ ಮೈ ಮುಟ್ಟಿ ನೋಡೋಣ ಎಂದು ಸವಾಲೆಸೆದಿದ್ದಾರೆ.
ಯುವತಿಯರನ್ನ ಸುಧಾರಿಸುವಲ್ಲಿ ಪೊಲೀಸರು ಸುಸ್ತು ಹೊಡೆದಿದ್ದಾರೆ.ಕೊನೆಗ ಟೈಟ್ ಆಗಿದ್ದ ಯುವತಿ ರನ್ನ ಪೊಲೀಸರು ಪೋಷಕರಿಗೊಪ್ಪಿಸಿ ಕೈ ತೊಳೆದುಕೊಂಡಿದ್ದಾರೆ…

LEAVE A REPLY

Please enter your comment!
Please enter your name here

- Advertisment -

Most Popular

ಜಿಲ್ಲಾಡಳಿತದಿಂದ ಕೊರೊನ ಜಾಗೃತಿ ಭರ್ಜರಿ…ಎಪಿಎಂಸಿಕಾರ್ಮಿಕರಿಗೆ ಇಲ್ಲ ಸೇಫ್ಟಿ…

ಇದೊಂದು ವಿಪರ್ಯಾಸದ ಸಂಗತಿ ಅಂದರೆ ತಪ್ಪಿಲ್ಲ.ಇಡೀ ಜಗತ್ತೇ ಕೊರೊನಾ ಹೆಸರೇಳಿದರೆ ಬೆಚ್ಚಿಬೀಳುತ್ತಿದೆ.ಮೈಸೂರಿನಲ್ಲಂತೂ ಭರ್ಜರಿಯಾಗಿ ಜಾಗೃತಿ ಮೂಡಿಸಲಾಗುತ್ತಿದೆ.ಆದರೆ ಎಪಿಎಂಸಿ ಆವರಣವನ್ನ ಸ್ವಚ್ಛಗೊಳಿಸುವ ಪೌರಕಾರ್ಮಿಕರ ಸೇಫ್ಟಿ ಬಗ್ಗೆ ತಲೆಯೇ ಕೊಡಿಸಿಕೊಂಡಿಲ್ಲ.ಇಲ್ಲಿನ ಪೌರಕಾರ್ಮಿಕರು ಸಂಪೂರ್ಣವಾಗಿ...

ಮನೆಯಿಂದ ಹೊರಬಂದರೆ ಕರೊನಾ…ಒಳಗಿದ್ದರೆ ನಗೀನಾ…ಹುಣಸೂರು ಜನತೆಗೆ ಹಾವಿನ ಕಾಟ…

ಕೊರೊನಾ ವೈರಸ್ ಮನುಕುಲಕ್ಕೆ ಭೀತಿ ಹುಟ್ಟಿಸಿದೆ.ಗೃಹಬಂಧನವೇ ಮುಕ್ತಿಗೆ ದಾರಿ.ಮನೆಯಲ್ಲಿದ್ದರೆ ಮಾತ್ರ ಸೇಫ್.ಹುಣಸೂರಿನ‌ ಶಬ್ಬೀರ್ ನಗರದ ನಿವಾಸಿಗಳಿಗೆ ಮನೆಯೂ ಸೇಫಾಗಿಲ್ಲ ಯಾಕೆ ಗೊತ್ತಾ…? ಹಾವುಗಳ ಕಾಟ.ನಿನ್ನೆ ರಾತ್ರಿಯಂತೂ ಎರಡು ಹಾವುಗಳ ಓಡಾಟ...

ಅಸಮರ್ಥ ಅಧಿಕಾರಿಗಳನ್ನ ವರ್ಗಾವಣೆ ಮಾಡಿ…ಹಳ್ಳಿಹಕ್ಕಿ ಕಿಡಿ…

ಕೊರೊನಾ ವೈರಸ್ ವಿಚಾರದಲ್ಲಿ ಹಳ್ಳಿಹಕ್ಕಿ ವಿಶ್ವನಾಥ್ ಮೌನ ಮುರಿದಿದ್ದಾರೆ.ಇಷ್ಟು ದಿನ ಮೌನವಹಿಸಿದ್ದ ವಿಶ್ವನಾಥ್ ವಿಡಿಯೋ ಮೂಲಕ ಮುಖ್ಯಮಂತ್ರಿಗಳಿಗೆ ಸಂದೇಶ ರವಾನೆ ಮಾಡಿದ್ದಾರೆ.ಸಮರ್ಥ ಅಧಿಕಾರಿಗಳನ್ನ‌ ಮೈಸೂರಿಗೆ ವರ್ಗಾಯಿಸಿ.ಅಸಮರ್ಥ ಅಧಿಕಾರಿಗಳನ್ನ ಎತ್ತಂಗಡಿ ಮಾಡಿ...

ಕೊರೊನಾ ಪಾಸಿಟಿವ್‌ ೧೨ ಕ್ಕೆ ಏರಿಕೆ…ಆತಂಕವೂ ಹೆಚ್ಚಾಗುತ್ತಿದೆ…

ಮೈಸೂರು ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಪಟ್ಟಿ ಬೆಳೆಯುತ್ತಿದೆ.ಒಂದು ವಾರದ ಅಂತರದಲ್ಲಿ ೯ ಮಂದಿ ಸೋಂಕಿತರು ಪಟ್ಟಿಗೆ ಸೇರಿದ್ದಾರೆ. ಜೊತೆಗೆ ಕ್ವಾರೆಂಟೈನ್ ಗೆ ಒಳಗಾದವರ ಸಂಖ್ಯೆಯೂ ಗಣನೀಯವಾಗಿ ಏರುತ್ತಿದೆ.ಸೋಂಕಿತರ...

Recent Comments