32 C
Mysore
Monday, March 30, 2020
Home All News ಕೊರೊನಾ ಭೀತಿ…ಮೈಸೂರು ಲಾಕ್ ಡೌನ್…ಜನಜೀವನ ಅಸ್ತವ್ಯಸ್ಥ…

ಕೊರೊನಾ ಭೀತಿ…ಮೈಸೂರು ಲಾಕ್ ಡೌನ್…ಜನಜೀವನ ಅಸ್ತವ್ಯಸ್ಥ…

ಕೊರೊನಾ ವೈರಸ್ ನಿರ್ಮೂಲನೆಗಾಗಿ ಸರ್ಕಾರ ತಡವಾಗಿಯಾದರೂ ದಿಟ್ಟ ಕೈಗೊಂಡಿದೆ.ಮೈಸೂರು ಜಿಲ್ಲೆ ಸೇರಿದಂತೆ ೯ ಜಿಲ್ಲೆಯಲ್ಲಿ ಲಾಕ್ ಡೌನ್ ಘೋಷಿಸಿದೆ.ಮಾರ್ಚ್ ೩೧ ರವರೆಗೆ

ಲಾಕ್ ಡೌನ್ ಜಾರಿಯಲ್ಲಿರುತ್ತದೆ.ಮನೆಯಿಂದ ಯಾರೂ ಹೊರಬಾರದಂತೆ ಕಟ್ಟಪ್ಪಣೆ ಮಾಡಿದೆ.ಮನೆಯಿಂದ ಹೊರಬಂದಲ್ಲಿ ಎರಡು ವರ್ಷ ಜೈಲು ಶಿಕ್ಷೆ ಯನ್ನೂ‌ ಸಹ ಪ್ರಕಟಿಸಿದೆ. ಲಾಕ್ ಡೌನ್ ಪರಿಣಾಮ‌ ಸಾರಿಗೆ ವ್ಯವಸ್ಥೆಗೆ ಕಡಿವಾಣ ಹಾಕಿದೆ

.೨೨ ರಂದು ಜನತಾ ಕರ್ಫ್ಯೂ ಮೂಲಕ ವೈರಸ್ ಗಂಭೀರತೆಯನ್ನ ನಾಗರೀಕರಿಗೆ ತಿಳಿ ಹೇಳಲಾಗಿತ್ತು.ಸಾರ್ವಜನಿಕರಿಂದ ದೊರೆತ ಬೆಂಬಲ ಮೆಚ್ಚುಗೆಗೆ ಪಾತ್ರವೂ ಆಯ್ತು.ಆದರೆ ಎರಡನೇ ಪ್ರಕರಣ

ಪಾಸಿಟಿವ್ ಬಂದ ನಂತರ ಜಿಲ್ಲಾಡಳಿತ ಮತ್ತಷ್ಟು ಎಚ್ಚರ ವಹಿಸಿತು.ಕೊರೋನಾ ಹರಡುವಿಕೆಯನ್ನ ತಡೆಗಟ್ಟಲು ಖಡಕ್ ಆದೇಶಕ್ಕೆ ಮುಂದಾಯಿತು.ಸರ್ಕಾರದ ಆದೇಶದಂತೆ ಲಾಕ್ ಡೌನ್ ಘೋಷಿಸಲಾಯಿತು.ಮೊದಲ ದಿನದ ಲಾಕ್ ಡೌನ್ ನಲ್ಲಿ ಪ್ರಾರಂಭದಲ್ಲಿ ಜನತೆ ಸ್ಪಂದಿಸದಾದಾಗ ಪೊಲೀಸರ ಮೂಲಕ ಬಲವಂತವಾಗಿ ನಿಯಮಗಳನ್ನ ಪಾಲಿಸುವಂತೆ ಹೇರಲಾಯಿತು.ಬೆಳಿಗ್ಗೆ ೧೦ ಗಂಟೆಯವರೆಗೂ ರಸ್ತೆಗಳಲ್ಲಿ ಕಾಣಿಸಿಕೊಂಡ ಸಾರ್ವಜನಿಕರು ನಂತರ ಮನೆಗಳನ್ನ ಸೇರಿಕೊಂಡರು.ತುರ್ತು ವಿಚಾರದಲ್ಲಿ ಮಾತ್ರ ಮನೆಯಿಂದ ಹೊರಬರಲು ಅವಕಾಶ ಕೊಡಲಾಗಿದೆ.ಅಗತ್ಯ ವಸ್ತುಗಳನ್ನ ಖರೀದಿಸಲು ಮಾತ್ರ ಅವಕಾಶ ಕಲ್ಪಿಸಲಾಗಿತ್ತು.ಇದರಿಂದ ಕೆಲ ಮಂದಿ ರಸ್ತೆಗಳಲ್ಲಿ ಓಡಾಡಿದ್ದನ್ನ ಹೊರತುಪಡಿಸಿದರೆ ಬಹುತೇಕ ಲಾಕ್ ಡೌನ್ ಯಶಸ್ವಿಯಾಯಿತು…

LEAVE A REPLY

Please enter your comment!
Please enter your name here

- Advertisment -

Most Popular

ಮೈಸೂರು ಲಾಕ್ ಡೌನ್…ಮನೆಗೇ ಬರುತ್ತೆ ಕಡಿಮೆ ದರದ ಪ್ರಾವಿಷನ್…ಯೋಜನೆ ತಂದ್ರು ಶಾಸಕ ರಾಮದಾಸ್…

ಕೊರೊನಾ ವೈರಸ್ ನಿಂದ ಘೋಷಿಸಿದ ಲಾಕ್ ಡೌನ್ ಸಖತ್‌ಎಫೆಕ್ಟ್ ಆಗಿದೆ.ಮನೆಯಿಂದ ಹೊರಗೆ ಬರಬಾರದೆಂಬ ನಿಯಮ ಕೆಲವರಿಗಂತೂ ಸಂಕಷ್ಟ ತಂದಿದೆ.ದಿನಸಿ ಸಾಮಾನು ತರಲೂ ಕಷ್ಟವಾಗುತ್ತಿದೆ.ಹೊರಗೆ ಬಂದರೆ ಪೊಲೀಸರ ಕರೊನಾ ಹೆದರಿಕೆ ಮನೆಯಲ್ಲಿದ್ದರೆ...

ಜಿಲ್ಲಾಡಳಿತದಿಂದ ಕೊರೊನ ಜಾಗೃತಿ ಭರ್ಜರಿ…ಎಪಿಎಂಸಿಕಾರ್ಮಿಕರಿಗೆ ಇಲ್ಲ ಸೇಫ್ಟಿ…

ಇದೊಂದು ವಿಪರ್ಯಾಸದ ಸಂಗತಿ ಅಂದರೆ ತಪ್ಪಿಲ್ಲ.ಇಡೀ ಜಗತ್ತೇ ಕೊರೊನಾ ಹೆಸರೇಳಿದರೆ ಬೆಚ್ಚಿಬೀಳುತ್ತಿದೆ.ಮೈಸೂರಿನಲ್ಲಂತೂ ಭರ್ಜರಿಯಾಗಿ ಜಾಗೃತಿ ಮೂಡಿಸಲಾಗುತ್ತಿದೆ.ಆದರೆ ಎಪಿಎಂಸಿ ಆವರಣವನ್ನ ಸ್ವಚ್ಛಗೊಳಿಸುವ ಪೌರಕಾರ್ಮಿಕರ ಸೇಫ್ಟಿ ಬಗ್ಗೆ ತಲೆಯೇ ಕೊಡಿಸಿಕೊಂಡಿಲ್ಲ.ಇಲ್ಲಿನ ಪೌರಕಾರ್ಮಿಕರು ಸಂಪೂರ್ಣವಾಗಿ...

ಮನೆಯಿಂದ ಹೊರಬಂದರೆ ಕರೊನಾ…ಒಳಗಿದ್ದರೆ ನಗೀನಾ…ಹುಣಸೂರು ಜನತೆಗೆ ಹಾವಿನ ಕಾಟ…

ಕೊರೊನಾ ವೈರಸ್ ಮನುಕುಲಕ್ಕೆ ಭೀತಿ ಹುಟ್ಟಿಸಿದೆ.ಗೃಹಬಂಧನವೇ ಮುಕ್ತಿಗೆ ದಾರಿ.ಮನೆಯಲ್ಲಿದ್ದರೆ ಮಾತ್ರ ಸೇಫ್.ಹುಣಸೂರಿನ‌ ಶಬ್ಬೀರ್ ನಗರದ ನಿವಾಸಿಗಳಿಗೆ ಮನೆಯೂ ಸೇಫಾಗಿಲ್ಲ ಯಾಕೆ ಗೊತ್ತಾ…? ಹಾವುಗಳ ಕಾಟ.ನಿನ್ನೆ ರಾತ್ರಿಯಂತೂ ಎರಡು ಹಾವುಗಳ ಓಡಾಟ...

ಅಸಮರ್ಥ ಅಧಿಕಾರಿಗಳನ್ನ ವರ್ಗಾವಣೆ ಮಾಡಿ…ಹಳ್ಳಿಹಕ್ಕಿ ಕಿಡಿ…

ಕೊರೊನಾ ವೈರಸ್ ವಿಚಾರದಲ್ಲಿ ಹಳ್ಳಿಹಕ್ಕಿ ವಿಶ್ವನಾಥ್ ಮೌನ ಮುರಿದಿದ್ದಾರೆ.ಇಷ್ಟು ದಿನ ಮೌನವಹಿಸಿದ್ದ ವಿಶ್ವನಾಥ್ ವಿಡಿಯೋ ಮೂಲಕ ಮುಖ್ಯಮಂತ್ರಿಗಳಿಗೆ ಸಂದೇಶ ರವಾನೆ ಮಾಡಿದ್ದಾರೆ.ಸಮರ್ಥ ಅಧಿಕಾರಿಗಳನ್ನ‌ ಮೈಸೂರಿಗೆ ವರ್ಗಾಯಿಸಿ.ಅಸಮರ್ಥ ಅಧಿಕಾರಿಗಳನ್ನ ಎತ್ತಂಗಡಿ ಮಾಡಿ...

Recent Comments