32 C
Mysore
Monday, March 30, 2020
Home All News ಕೊರೊನಾ ತಲ್ಲಣ…ಪತ್ರಿಕಾ ವಿತರಕರ ಮೇಲೂ ಪರಿಣಾಮ…

ಕೊರೊನಾ ತಲ್ಲಣ…ಪತ್ರಿಕಾ ವಿತರಕರ ಮೇಲೂ ಪರಿಣಾಮ…

ಕೊರೊನಾ ವೈರಸ್ ಭೀತಿ ಪತ್ರಿಕಾ ವಿತರಕರ ಮೇಲೂ ಭಾರಿ ಪರಿಣಾಮ ಬೀರಿದೆ.ಕೆಲವು ಮಾಧ್ಯಮಗಳು ಪತ್ರಿಕೆ ಹಂಚುವ ಬಗ್ಗೆ ಮಾಡಿದ ಸುದ್ದಿಗಳು ವಿತರಕರಿಗೆ ಬೇಸರ ತರಿಸಿದೆ.ಪತ್ರಿಕೆಗಳಿಂದಲೂ ವೈರಸ್

ಹರಡುತ್ತದೆ ಇದರಿಂದ ಅಂತರ ಕಾಯ್ದುಕೊಳ್ಳುವಂತೆ ಬಂದ ಸುದ್ದಿಯಿಂದ ವಿತರಕರನ್ನ ಕೀಳಾಗಿ ನಡೆಸಿಕೊಳ್ಳುತ್ತಿದ್ದಾರೆಂಬ ದೂರುಗಳು ಹಾಗೂ ಆರೋಪ ಬಂದ ಹಿನ್ನಲೆ ಇಂದಿನಿಂದ ದಿನಪತ್ರಿಕೆಗಳನ್ನ ವಿತರಿಸದಿರಲು ವಿತರಕರು ನಿರ್ಧರಿಸಿದರು.ಇದರಿಂದ ಸಾರ್ವಜನಿಕರಿಗೆ ಪೇಪರ್ ಗಳು ತಲುಪುವುದಿಲ್ಲ ಎಂಬ ಮಾಹಿತಿ ಖಚಿತವಾದಾಗ ಶಾಸಕ ಎಸ್.ಎ.ರಾಮದಾಸ್ ಮಧ್ಯ ಪ್ರವೇಶಿಸಿ ವಿತರಕರನ್ನ ಮನ ಒಲಿಸುವ ಕಾರ್ಯಕ್ಕೆ ಮುಂದಾದರು.ಇಂದು ಮುಂಜಾನೆ ದೇವರಾಜ ಮಾರುಕಟ್ಟೆ ಮುಂಭಾಗ ಇರುವ ಚಿಕ್ಕಗಡಿಯಾರದ ಮುಂದೆ ಪತ್ರಿಕಾ ವಿತರಕರು ಹಾಗೂ ಏಜೆಂಟ್ ಗಳ ಜೊತೆ ಚರ್ಚಿಸಿ ಸೂಕ್ತ ರಕ್ಷಣೆ ನೀಡುವ ಭರವಸೆ ಕೊಟ್ಟರು.ಪತ್ರಿಕಾ ವಿತರಕರಿಗೆ ಜಿಲ್ಲಾಡಳಿತದಿಂದ ಗುರುತಿನ‌ ಚೀಟಿ ವಿತರಿಸಬೇಕು ಹಾಗೂ ಪತ್ರಿಕೆಗಳ ವಿತರಣೆಯಿಂದ ಯಾವುದೇ ಪರಿಣಾಮ ಆಗುವುದಿಲ್ಲ ಎಂಬ ಮಾಹಿತಿ ಜನರಿಗೆ ತಲುಪುವಂತೆ ಮಾಡಬೇಕೆಂದು ವಿತರಕರು ಒತ್ತಾಯಿಸಿದರು.ಎಲ್ಲಾ ಸಮಸ್ಯೆಗಳನ್ನ ಬಗೆ ಹರಿಸುವುದಾಗಿ ಶಾಸಕರಾಮದಾಸ್ ವಿತರಕರಿಗೆ ಆಶ್ವಾಸನೆ ಕೊಟ್ಟರು.ಹಾಗಿದ್ದೂ ಇಂದು
ಪತ್ರಿಕೆಗಳನ್ನ ವಿತರಿಸಲು ನಿರಾಕರಿಸಿದರು.
ರಕ್ಷಣೆ ಒದಗಿಸಿದ್ರೆ ಮಾತ್ರ ವಿತರಿಸಲು ಸಿದ್ದವೆಂದ ವಿತರಕರು ಪಟ್ಟು ಹಿಡಿದರು.ಸುಮಾರು ಎರಡು ಗಂಟೆಗಳ ಕಾಲ ಚರ್ಚೆ ನಡೆಯಿತು.ಎರಡು ದಿನಗಳ ನಂತರ ವಿತರಕರು ತಮ್ಮ‌ಅಂತಿಮ ತೀರ್ಮಾನ ಪ್ರಕಟಿಸುವುದಾಗಿ ಎಚ್ಚರಿಕೆ ನೀಡಿದರು…

LEAVE A REPLY

Please enter your comment!
Please enter your name here

- Advertisment -

Most Popular

ಮೈಸೂರು ಲಾಕ್ ಡೌನ್…ಮನೆಗೇ ಬರುತ್ತೆ ಕಡಿಮೆ ದರದ ಪ್ರಾವಿಷನ್…ಯೋಜನೆ ತಂದ್ರು ಶಾಸಕ ರಾಮದಾಸ್…

ಕೊರೊನಾ ವೈರಸ್ ನಿಂದ ಘೋಷಿಸಿದ ಲಾಕ್ ಡೌನ್ ಸಖತ್‌ಎಫೆಕ್ಟ್ ಆಗಿದೆ.ಮನೆಯಿಂದ ಹೊರಗೆ ಬರಬಾರದೆಂಬ ನಿಯಮ ಕೆಲವರಿಗಂತೂ ಸಂಕಷ್ಟ ತಂದಿದೆ.ದಿನಸಿ ಸಾಮಾನು ತರಲೂ ಕಷ್ಟವಾಗುತ್ತಿದೆ.ಹೊರಗೆ ಬಂದರೆ ಪೊಲೀಸರ ಕರೊನಾ ಹೆದರಿಕೆ ಮನೆಯಲ್ಲಿದ್ದರೆ...

ಜಿಲ್ಲಾಡಳಿತದಿಂದ ಕೊರೊನ ಜಾಗೃತಿ ಭರ್ಜರಿ…ಎಪಿಎಂಸಿಕಾರ್ಮಿಕರಿಗೆ ಇಲ್ಲ ಸೇಫ್ಟಿ…

ಇದೊಂದು ವಿಪರ್ಯಾಸದ ಸಂಗತಿ ಅಂದರೆ ತಪ್ಪಿಲ್ಲ.ಇಡೀ ಜಗತ್ತೇ ಕೊರೊನಾ ಹೆಸರೇಳಿದರೆ ಬೆಚ್ಚಿಬೀಳುತ್ತಿದೆ.ಮೈಸೂರಿನಲ್ಲಂತೂ ಭರ್ಜರಿಯಾಗಿ ಜಾಗೃತಿ ಮೂಡಿಸಲಾಗುತ್ತಿದೆ.ಆದರೆ ಎಪಿಎಂಸಿ ಆವರಣವನ್ನ ಸ್ವಚ್ಛಗೊಳಿಸುವ ಪೌರಕಾರ್ಮಿಕರ ಸೇಫ್ಟಿ ಬಗ್ಗೆ ತಲೆಯೇ ಕೊಡಿಸಿಕೊಂಡಿಲ್ಲ.ಇಲ್ಲಿನ ಪೌರಕಾರ್ಮಿಕರು ಸಂಪೂರ್ಣವಾಗಿ...

ಮನೆಯಿಂದ ಹೊರಬಂದರೆ ಕರೊನಾ…ಒಳಗಿದ್ದರೆ ನಗೀನಾ…ಹುಣಸೂರು ಜನತೆಗೆ ಹಾವಿನ ಕಾಟ…

ಕೊರೊನಾ ವೈರಸ್ ಮನುಕುಲಕ್ಕೆ ಭೀತಿ ಹುಟ್ಟಿಸಿದೆ.ಗೃಹಬಂಧನವೇ ಮುಕ್ತಿಗೆ ದಾರಿ.ಮನೆಯಲ್ಲಿದ್ದರೆ ಮಾತ್ರ ಸೇಫ್.ಹುಣಸೂರಿನ‌ ಶಬ್ಬೀರ್ ನಗರದ ನಿವಾಸಿಗಳಿಗೆ ಮನೆಯೂ ಸೇಫಾಗಿಲ್ಲ ಯಾಕೆ ಗೊತ್ತಾ…? ಹಾವುಗಳ ಕಾಟ.ನಿನ್ನೆ ರಾತ್ರಿಯಂತೂ ಎರಡು ಹಾವುಗಳ ಓಡಾಟ...

ಅಸಮರ್ಥ ಅಧಿಕಾರಿಗಳನ್ನ ವರ್ಗಾವಣೆ ಮಾಡಿ…ಹಳ್ಳಿಹಕ್ಕಿ ಕಿಡಿ…

ಕೊರೊನಾ ವೈರಸ್ ವಿಚಾರದಲ್ಲಿ ಹಳ್ಳಿಹಕ್ಕಿ ವಿಶ್ವನಾಥ್ ಮೌನ ಮುರಿದಿದ್ದಾರೆ.ಇಷ್ಟು ದಿನ ಮೌನವಹಿಸಿದ್ದ ವಿಶ್ವನಾಥ್ ವಿಡಿಯೋ ಮೂಲಕ ಮುಖ್ಯಮಂತ್ರಿಗಳಿಗೆ ಸಂದೇಶ ರವಾನೆ ಮಾಡಿದ್ದಾರೆ.ಸಮರ್ಥ ಅಧಿಕಾರಿಗಳನ್ನ‌ ಮೈಸೂರಿಗೆ ವರ್ಗಾಯಿಸಿ.ಅಸಮರ್ಥ ಅಧಿಕಾರಿಗಳನ್ನ ಎತ್ತಂಗಡಿ ಮಾಡಿ...

Recent Comments