32 C
Mysore
Monday, March 30, 2020
Home All News ಕೊರೊನಾ ಭೀತಿ ಹಿನ್ನಲೆ ಲಾಕ್ ಡೌನ್…ಗುತ್ತಿಗೆದಾರ ಡೊಂಟ್ ಕೇರ್…

ಕೊರೊನಾ ಭೀತಿ ಹಿನ್ನಲೆ ಲಾಕ್ ಡೌನ್…ಗುತ್ತಿಗೆದಾರ ಡೊಂಟ್ ಕೇರ್…

ಸಾರ್ವಜನಿಕರ ಹಿತದೃಷ್ಠಿಯಿಂದ ಕೊರೊನಾ ವೈರಸ್ ಹರಡುವಿಕೆಯನ್ನ ತಡೆಗಟ್ಟಲು ಮೈಸೂರು ಜಿಲ್ಲೆಯಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ.ಆದರೆ ಟಿ.ನರಸೀಪುರದಲ್ಲಿ ರಸ್ತೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರನಿಗೆ ಇದ್ಯಾವುದರ ಪರಿವೆಯೂ ಇಲ್ಲದಂತೆ ಕಾಣುತ್ತಿದೆ. ಕರೋನಾ ಭೀತಿ ತನಗೆ ಅನ್ವಯಿಸುವುದೇ ಇಲ್ಲವೇನೋ ಎಂಬಂತೆ ಕಾಮಗಾರಿ ನಡೆಸುತ್ತಿದ್ದಾನೆ.
ಲಾಕ್ ಡೌನ್ ಘೋಷಣೆ ಈ ಕಾರ್ಮಿಕರಿಗೆ ಅನ್ವಯಿಸುವುದಿಲ್ಲವೇ ಎಂಬ ಪ್ರಶ್ನೆ ಉದ್ಭವವಾಗಿದೆ.
ರಾಜಾರೋಷವಾಗಿ ಕಾಮಗಾರಿ ನಡೆಯುತ್ತಿದ್ದರೂ ಪುರಸಭಾ ಅಧಿಕಾರಿಗಳೂ ಸಹ ಕ್ಯಾರೆ ಎನ್ನದೆ ಜಾಣಕುರುಡರಂತೆ ವರ್ತಿಸಿದ್ದಾರೆ.
ಟಿ ನರಸೀಪುರ ಪಟ್ಟಣದ ವಾರ್ಡ್ ನಂಬರ್ 19 ರಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುತ್ತಿದೆ.
ಸರ್ಕಾರಿ ಆದೇಶಕ್ಕೆ ಸಡ್ಡು ಹೊಡೆದು
ಸುಮಾರು ಮೂವತ್ತಕ್ಕೂ ಹೆಚ್ಚು ಕಾರ್ಮಿಕರು ಕಾಂಕ್ರೀಟ್ ರಸ್ತೆ ಕಾಮಗಾರಿಯಲ್ಲಿ ಮುಳುಗಿದ್ದಾರೆ.
ಕೊರೋನಾ ವೈರಸ್ ತಡೆಗಟ್ಟಲು ಎಲ್ಲಾ ಕಡೆ ಲಾಕ್ ಡೌನ್ ನಿಯಮ
ಪಾಲಿಸುತ್ತಿದ್ದರೆ
ಪುರಸಭಾ ಅಧಿಕಾರಿಗಳ ಕಣ್ಣಿಗೆ ಈ ಕಾಮಗಾರಿ ಮಾತ್ರ ಕಾಣಿಸಿಲ್ಲ.ಅಲ್ಲದೆ ಕಾರ್ಮಿಕರಿಗೆ ಮಾಸ್ಕ್ ಸಹ ನೀಡಿಲ್ಲ ಕಾಮಗಾರಿಯ ಗುತ್ತಿಗೆದಾರ.
ಇಡೀ ರಾಜ್ಯ ಕೊರೋನಾ ವೈರಸ್ ಭೀತಿಯಿಂದ ತಲ್ಕಣ ಗೊಂಡಿದ್ರೂ ಇಲ್ಲಿ ಮಾತ್ರ ರಾಜಾರೋಷವಾಗಿ ಕಾರ್ಮಿಕರು ಕಾಮಗಾರಿಯಲ್ಲಿ ತಲ್ಲೀನರಾಗಿದ್ದಾರೆ.ವಾಹನಗಳಲ್ಲಿ ಬರುವ ವ್ಯಕ್ತಿಗಳಿಗೆ ಲಾಠಿ ರುಚಿ ತೋರಿಸುತ್ತಿರುವ ಪೊಲೀಸರಿಗೂ ಈ ದೃಶ್ಯಗಳು ಕಣ್ಣಿಗೆ ಬೀಳದಿರುವುದು ವಿಪರ್ಯಾಸ…

LEAVE A REPLY

Please enter your comment!
Please enter your name here

- Advertisment -

Most Popular

ಜಿಲ್ಲಾಡಳಿತದಿಂದ ಕೊರೊನ ಜಾಗೃತಿ ಭರ್ಜರಿ…ಎಪಿಎಂಸಿಕಾರ್ಮಿಕರಿಗೆ ಇಲ್ಲ ಸೇಫ್ಟಿ…

ಇದೊಂದು ವಿಪರ್ಯಾಸದ ಸಂಗತಿ ಅಂದರೆ ತಪ್ಪಿಲ್ಲ.ಇಡೀ ಜಗತ್ತೇ ಕೊರೊನಾ ಹೆಸರೇಳಿದರೆ ಬೆಚ್ಚಿಬೀಳುತ್ತಿದೆ.ಮೈಸೂರಿನಲ್ಲಂತೂ ಭರ್ಜರಿಯಾಗಿ ಜಾಗೃತಿ ಮೂಡಿಸಲಾಗುತ್ತಿದೆ.ಆದರೆ ಎಪಿಎಂಸಿ ಆವರಣವನ್ನ ಸ್ವಚ್ಛಗೊಳಿಸುವ ಪೌರಕಾರ್ಮಿಕರ ಸೇಫ್ಟಿ ಬಗ್ಗೆ ತಲೆಯೇ ಕೊಡಿಸಿಕೊಂಡಿಲ್ಲ.ಇಲ್ಲಿನ ಪೌರಕಾರ್ಮಿಕರು ಸಂಪೂರ್ಣವಾಗಿ...

ಮನೆಯಿಂದ ಹೊರಬಂದರೆ ಕರೊನಾ…ಒಳಗಿದ್ದರೆ ನಗೀನಾ…ಹುಣಸೂರು ಜನತೆಗೆ ಹಾವಿನ ಕಾಟ…

ಕೊರೊನಾ ವೈರಸ್ ಮನುಕುಲಕ್ಕೆ ಭೀತಿ ಹುಟ್ಟಿಸಿದೆ.ಗೃಹಬಂಧನವೇ ಮುಕ್ತಿಗೆ ದಾರಿ.ಮನೆಯಲ್ಲಿದ್ದರೆ ಮಾತ್ರ ಸೇಫ್.ಹುಣಸೂರಿನ‌ ಶಬ್ಬೀರ್ ನಗರದ ನಿವಾಸಿಗಳಿಗೆ ಮನೆಯೂ ಸೇಫಾಗಿಲ್ಲ ಯಾಕೆ ಗೊತ್ತಾ…? ಹಾವುಗಳ ಕಾಟ.ನಿನ್ನೆ ರಾತ್ರಿಯಂತೂ ಎರಡು ಹಾವುಗಳ ಓಡಾಟ...

ಅಸಮರ್ಥ ಅಧಿಕಾರಿಗಳನ್ನ ವರ್ಗಾವಣೆ ಮಾಡಿ…ಹಳ್ಳಿಹಕ್ಕಿ ಕಿಡಿ…

ಕೊರೊನಾ ವೈರಸ್ ವಿಚಾರದಲ್ಲಿ ಹಳ್ಳಿಹಕ್ಕಿ ವಿಶ್ವನಾಥ್ ಮೌನ ಮುರಿದಿದ್ದಾರೆ.ಇಷ್ಟು ದಿನ ಮೌನವಹಿಸಿದ್ದ ವಿಶ್ವನಾಥ್ ವಿಡಿಯೋ ಮೂಲಕ ಮುಖ್ಯಮಂತ್ರಿಗಳಿಗೆ ಸಂದೇಶ ರವಾನೆ ಮಾಡಿದ್ದಾರೆ.ಸಮರ್ಥ ಅಧಿಕಾರಿಗಳನ್ನ‌ ಮೈಸೂರಿಗೆ ವರ್ಗಾಯಿಸಿ.ಅಸಮರ್ಥ ಅಧಿಕಾರಿಗಳನ್ನ ಎತ್ತಂಗಡಿ ಮಾಡಿ...

ಕೊರೊನಾ ಪಾಸಿಟಿವ್‌ ೧೨ ಕ್ಕೆ ಏರಿಕೆ…ಆತಂಕವೂ ಹೆಚ್ಚಾಗುತ್ತಿದೆ…

ಮೈಸೂರು ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಪಟ್ಟಿ ಬೆಳೆಯುತ್ತಿದೆ.ಒಂದು ವಾರದ ಅಂತರದಲ್ಲಿ ೯ ಮಂದಿ ಸೋಂಕಿತರು ಪಟ್ಟಿಗೆ ಸೇರಿದ್ದಾರೆ. ಜೊತೆಗೆ ಕ್ವಾರೆಂಟೈನ್ ಗೆ ಒಳಗಾದವರ ಸಂಖ್ಯೆಯೂ ಗಣನೀಯವಾಗಿ ಏರುತ್ತಿದೆ.ಸೋಂಕಿತರ...

Recent Comments