32 C
Mysore
Wednesday, August 12, 2020
Home All News ಭೀತಿ‌ಸೃಷ್ಟಿಸುತ್ತಿರುವ ಡ್ರೈನೇಜ್ ಗುಂಡಿಗಳು…ಅಧಿಕಾರಿಗಳೇ ಎಲ್ಲಿದ್ದೀರಾ…?

ಭೀತಿ‌ಸೃಷ್ಟಿಸುತ್ತಿರುವ ಡ್ರೈನೇಜ್ ಗುಂಡಿಗಳು…ಅಧಿಕಾರಿಗಳೇ ಎಲ್ಲಿದ್ದೀರಾ…?

ಕೊರೊನಾ ವೈರಸ್ ನಿಂದ ಈಗಾಗ್ಲೇ ಸಾಂಸ್ಕೃತಿಕ ನಗರಿ ಮೈಸೂರು ಬೆಚ್ಚಿಬಿದ್ದಿದೆ.ಮಾರಣಾಂತಿಕ ಖಾಯಿಲೆಗೆ ತುತ್ತಾಗುವ ಭೀತಿ ಎಲ್ರನ್ನ ಕಾಡ್ತಿದೆ.ಇದರ ಜೊತೆಗೆ ಅಧಿಕಾರಿಗಳ‌ ಅಸಡ್ಡೆ ಮಹದೇವಪುರ ಗ್ರಾಮದ ಜನತೆಗೆ ಆತಂಕ‌ ತಂದಿದೆ.ಡ್ರೈನೇಜ್ ನಿರ್ಮಾಣಕ್ಕಾಗಿ ಮಹದೇವುರದ ರಸ್ತೆಗಳಲ್ಲಿ ಗುಂಡಿಗಳನ್ನ ತೆರೆದಿದ್ದಾರೆ.ಗುಂಡಿಗಳನ್ನ ತೆರೆದು ೩ ದಿನ‌ ಆಗಿದೆ.ಕಾಮಗಾರಿಯನ್ನ ನಿಲ್ಲಿಸಿ ಹೋದ ಸಿಬ್ಬಂದಿಗಳು ನಾಪತ್ತೆಯಾಗಿದ್ದಾರೆ.ಗುಂಡಿಗಳಲ್ಲಿ ತುಂಬಿರುವ ಮಲಿನ‌ ನೀರು ರೋಗದ ಭೀತಿ ಸೃಷ್ಟಿಸಿದೆ.ನಿವಾಸಿಗಳಿಗೆ ಓಡಾಡುವುದೂ ಕಷ್ಟವಾಗಿದೆ.ಮೂಗುಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ.ಮನೆಯಿಂದ ಹೊರಬಂದ್ರೆ ಗುಂಡಿಗಳು ಎದುರಾಗುತ್ತವೆ.ಈಗಾಗ್ಲೇ ಕೊರೊನಾ ಭೀತಿ ಸೃಷ್ಟಿಯಾಗಿ ಜನ ತತ್ತರಿಸಿದ್ದಾರೆ.ಇಂತಹ ಗುಂಡಿಗಳಿಂದ ಹೊಸ ರೋಗಗಳು ಬರುತ್ತೆ ಅಂತ ಸ್ಥಳೀಯರು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ.ಈ ಹಿಂದೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದ ಪ್ರದೇಶ ಇದು.ಇದೀಗ ಕೊರೊನಾ ಆತಂಕ ಬೇರೆ ಶುರುವಾಗಿದೆ.ಶ್ರೀರಾಂಪುರ ಗ್ರಾಮಪಂಚಾಯ್ತಿಗೆ ಸೇರುವ ಗ್ರಾಮ ಇದು.ಅಧಿಕಾರಿಗಳನ್ನ ಪ್ರಶ್ನಿಸಿದ್ರೆ ಇದು ರೆವಿನ್ಯೂ ಬಡಾವಣೆ ಅಂತ ಕೈತೊಳೆದುಕೊಳ್ತಾರಂತೆ.ನಗರಪಾಲಿಕೆ ಅಧಿಕಾರಿಗಳು ನಮಗೆ ಸಂಭಂಧವೇ ಇಲ್ಲ ಅಂತಿದ್ದಾರಂತೆ.ಮಲಿನ‌ ನೀರನ್ನ ತೆಗೀಬೇಕಂದ್ರೆ ದೊಡ್ಡ ಯಂತ್ರದ ಅವಶ್ಯಕತೆ ಇದೆ.ಇದನ್ನ ಕಳುಹಿಸಲು ಪಾಲಿಕೆ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರಿಸ್ತಿದ್ದಾರೆ.ಇವೆಲ್ಲಾ ಸಮಸ್ಯೆಗಳಿದ್ದಾಗ ಗುಂಡಿ ತೆಗೆಯುವ ಅವಶ್ಯಕತೆ ಏನಿತ್ತು…? ಪ್ಲಾನ್ ಮಾಡಿಕೊಂಡು ಕಾಮಗಾರಿ ಆರಂಭಿಸಬೇಕಿತ್ತು ಎಂಬ ಪ್ರಶ್ನೆ ಸ್ಥಳೀಯರದ್ದು.ಜಿಲ್ಲಾ ಪಂಚಾಯ್ತಿ ಸದಸ್ಯನಾಗ್ಲಿ,ಎಂಎಲ್ ಎ ಆಗ್ಲಿ ಯಾರೂ ಇತ್ತ ಸುಳಿದಿಲ್ಲ.ಜಿಲ್ಲಾ ಪಂಚಾಯ್ತಿ ಸಿಇಓ ಮೊಬೈಲ್ ನಾಟ್ ರೀಚೆಬಲ್ ಅಂತ ಆರೋಪಿಸ್ತಿದ್ದಾರೆ.ಕೊರೋನಾ ಭೀತಿಯ ನಡುವೆ ಮಹದೇವಪುರ ಗ್ರಾಮದ ಜನರಿಗೆ ಡೆಂಗ್ಯೂ ಜ್ವರದ ಭೀತಿಯೂ ಶುರುವಾಗಿದೆ.ಸ್ವಚ್ಛತೆಯ ಬಗ್ಗೆ ಅಧಿಕಾರಿಗಳು ಭಾಷಣಗಳನ್ನ ಬಿಗಿಯುವ ಬದಲು ಕಾರ್ಯಪ್ರವೃತ್ತರಾಗೋದು ಒಳ್ಳೆಯ ಬೆಳವಣಿಗೆ.ಡ್ರೈನೇಜ್ ಗಾಗಿ ತೆರೆದ ಗುಂಡಿಗಳಿಂದ ಅನಾಹುತವಾಗುವ ಮುನ್ನ‌ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದು ಒಳಿತು…

LEAVE A REPLY

Please enter your comment!
Please enter your name here

- Advertisment -
< target="_blank">

Most Popular

ನೇಣುಬಿಗಿದ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ…ಕೊಲೆ ಶಂಕೆ…

ಅಕ್ರಮ ಸಂಭಂಧ ಹಿನ್ನಲೆ ಬೇರೆಯಾಗಿದ್ದ ಪತ್ನಿಯ ಮನೆಯಲ್ಲಿ ಪತಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.ಗೋವಿಂದ ನಾಯ್ಕ(೩೦) ಮೃತ...

ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಪತ್ನಿಗೆ ಹೆರಿಗೆ ಮಾಡಿಸಿದ ಡಿಸಿ…ಮಾದರಿ ಜಿಲ್ಲಾಧಿಕಾರಿ…

ಅಧಿಕಾರ ಇದ್ರೆ ಕೆಲವರು ಎಲ್ಲಾ ರೀತಿಯ ಸೌಲಭ್ಯಗಳನ್ನ ಅನುಭವಿಸಯವರೇ ಹೆಚ್ಚು.ಆದರೆ ಗದಗ ಜಿಲ್ಲೆಯ ಜಿಲ್ಲಾಧಿಕಾರಿಗಳು ಈ ಅಪವಾದದಿಂದ ದೂರ ಇದ್ದಾರೆ.ಕೊರೋನಾ ಮಧ್ಯೆಯೂ ಐಶಾರಾಮಿ ಸವಲತ್ತುಗಳನ್ನು...

ಮಾವುತನನ್ನೇ ಬಲಿ ಪಡೆದ ಆನೆ…ಮೈಸೂರು ಮೃಗಾಲಯದಲ್ಲಿ ಘಟನೆ…

ವಿಶ್ವಿಖ್ಯಾತ ಮೈಸೂರು ಮೃಗಾಲಯದಲ್ಲಿ ಆನೆಯೊಂದು ಮಾವುತನನ್ನೇ ತುಳಿದು ಕೊಂದ ಘಟನೆ ಇಂದು ಸಂಜೆ ನಡೆದಿದೆ.ಹರೀಶ್(೩೮) ಮೃತ ದುರ್ದೈವಿಯಾಗಿದ್ದಾರೆ.ಕೆಲವು ವರ್ಷಗಳಿಂದ ಆನೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಹರೀಶ್...

ನಿಧಿ ಶೋಧಕ್ಕೆ ಬಂದ ಕಿಡಿಗೇಡಿ ಯುವಕ ಮಂಟಪ ಕುಸಿದು ಸಾವು…

ನಿಧಿ ಆಸೆಗಾಗಿ ಬಂದ ಚೋರರ ತಂಡದಲ್ಲಿ ಯುವಕನೊಬ್ಬ ಮೃತಪಟ್ಟಿದ್ದು ಮೂವರು ಗಾಯಗೊಂಡ ಘಟನೆ ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಹಿಂಡಿಗನಾಳ ಗ್ರಾಮದಲ್ಲಿ ನಡೆದಿದೆ.ನಿಧಿ ಲಪಟಾಯಿಸುವ...

Recent Comments