ಹುಣ್ಣಿಮೆ ಹಾಗೂ ಚಂದ್ರಗ್ರಹಣದ ದಿನವಾದ ಇಂದು ನಂಜುಂಡನ ಸನ್ನಿಧಿಗೆ ಭಕ್ತ ಸಾಗರವೇ ಹರಿದುಬಂದಿದೆ.
ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿರುವ ಭಕ್ತರು ನಂಜುಂಡನ ದರುಶನ ಪಡೆದು ಪುನೀತರಾಗಿದ್ದಾರೆ.
ಹುಣ್ಣಿಮೆಯ ದಿನದ ಅಂಗವಾಗಿ ದೇವಾಲಯದಲ್ಲಿ ವಿವಿಧ ರೀತಿಯ ಅಭಿಷೇಕ ಮತ್ತು ಪೂಜೆಗಳು ನೆರವೇರಿದೆ.ದೇವಸಲಯದ ಆಲಯ ಹೂವುಗಳಿಂದ ಅಲಂಕೃತಗೊಂಡಿದೆ.
ಮುಂಜಾನೆಯಿಂದಲೇ ನಂಜುಂಡೇಶ್ವರನ ಸನ್ನಿಧಿಯಲ್ಲಿ ಪೂಜಾ ಕೈಂಕರ್ಯಗಳು ನಡೆದಿದೆ. ನಂಜುಂಡನ ದರುಶನ ಪಡೆಯಲು ಬಂದ ಭಕ್ತರು
ಕಪಿಲಾನದಿಯ ಘಟ್ಟದಲ್ಲಿ ಪುಣ್ಯಸ್ನಾನ ಮಾಡಿ ನಂತರ ದೇವಾಲಯಕ್ಕೆ ತೆರಳಿ ದರುಶನ ಪಡೆದಿದ್ದಾರೆ.
ಮುಡಿ ಘಟ್ಟಗಳಲ್ಲಿ ಹರಕೆ ತೀರಿಸಿದ ಭಕ್ತರು ಇಷ್ಟಾರ್ಥಗಳನ್ನ ನೆರವೇರಿಸುವಂತೆ ಪ್ರಾರ್ಥಿಸಿದ್ದಾರೆ.
ಚಂದ್ರ ಗ್ರಹಣ ಮತ್ತು ಹುಣ್ಣಿಮೆಯ ದಿನ ನಂಜುಂಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಕೆಯಾಗಿದೆ.
ದಾಸೋಹ ಭವನದಲ್ಲಿ ಸಾವಿರಾರು ಸಂಖ್ಯೆಯ ಭಕ್ತರು ಸಿಹಿ ಊಟ ಪ್ರಸಾದ ಸ್ವೀಕರಿಸಿದ್ದಾರೆ.ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದ ಕಾರಣ ಬಿಗಿ ಪೊಲೀಸ್ ಬಂದೋಬಸ್ತ ಸಹ ಮಾಡಲಾಗಿದೆ…