32 C
Mysore
Thursday, June 4, 2020
Home All News ವಲಸೆ ಕಾರ್ಮಿಕರಿಗೆ ಅಕ್ಕಿ ಭಾಗ್ಯ

ವಲಸೆ ಕಾರ್ಮಿಕರಿಗೆ ಅಕ್ಕಿ ಭಾಗ್ಯ


ಮೈಸೂರು. ಮೇ.21. ಕೋವಿಡ್-19 ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಷ್ಟ್ರೀಯಸ ಆಹಾರ ಭದ್ರತಾ ಕಾಯ್ದೆಯಡಿ ವಲಸೆ ಕಾರ್ಮಿಕರಿಗೆ ಕೇಂದ್ರ ಸರ್ಕಾರವು ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ಮೇ ಮತ್ತು ಜೂನ್ ಎರಡೂ ಮಾಹೆಗಳಿಗೆ ಪ್ರತಿ ಫಲಾನುಭವಿಗೆ ತಲಾ 5 ಕೆ.ಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತದೆ.
ಕೇಂದ್ರ ಸರ್ಕಾರದ ಆದೇಶದಂತೆ ಈ ಯೋಜನೆಯಡಿ ಬರುವ ಫಲಾನುಭವಿಗಳಿಗೆ ರಾಜ್ಯದಲ್ಲಿ ಅಥವಾ ಬೇರಾವುದೇ ರಾಜ್ಯಗಳಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಹಂಚಿಕೆ ಪಡೆಯುತ್ತಿರಬಾರದು. ಫಲಾನುಭವಿಯ ಆಧಾರ್ ಸಂಖ್ಯೆಯ ಮುಖಾಂತರ ಪರಿಶೀಲಿಸಿ ಅವರ ಮೊಬೈಲ್ ಸಂಖ್ಯೆಗೆ ಓ.ಟಿ.ಪಿ ಬಂದ ನಂತರ, ಸದರಿ ಓ.ಟಿ.ಪಿ ಯನ್ನು ದಾಖಲಿಸಿ ಪಡಿತರ ವಿತರಣೆ ಮಾಡಲಾಗುವುದು.
ನ್ಯಾಯಬೆಲೆ ಅಂಗಡಿಗಳ ಮೂಲಕ ಮೇ ಮಾಹೆಯಲ್ಲಿ ಪ್ರತಿ ಫಲಾನುಭವಿಗಳಿಗೆ 5 ಕೆ.ಜಿ ಅಕ್ಕಿಯನ್ನು ಮೇ 26ರಿಂದ ಮೇ 31ರವರೆಗೆÉ ವಿತರಿಸಲಾಗುವುದು. ಜೂನ್ ಮಾಹೆಯ ಅಕ್ಕಿಯನ್ನು ಜೂನ್ 1 ರಿಂದ ಜೂನ್ 10ರವರಗೆ ಪ್ರತಿ ಫಲಾನುಭವಿಗಳಿಗೆ 5 ಕೆ.ಜಿ ಅಕ್ಕಿ ಹಾಗೂ ಕಡಲೆ ಕಾಳನ್ನು ನೀಡಲಾಗುತ್ತದೆ.
ಮೇ ಮಾಹೆಯಲ್ಲಿ ಆಹಾರಧಾನ್ಯವನ್ನು ಪಡೆಯದ ಫಲಾನುಭವಿಗಳು ಜೂನ್‍ನಲ್ಲಿ ಎರಡೂ ತಿಂಗಳ ಒಟ್ಟು 10 ಕೆ.ಜಿ. ಅಕ್ಕಿ ಮತ್ತು ಕಡಲೆ ಕಾಳನ್ನು ಪಡೆಯಬಹುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಮೈಸೂರು ವಿಭಾಗದ ಜಂಟಿ ನಿದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here

- Advertisment -

Most Popular

ಅತೀಕ್ರಮವಾಗಿ ಮನೆಗಳಿಗೆ ಪ್ರವೇಶ ಮಾಡಿದರೆ ಕಾನೂನು ರೀತ್ಯಾ ಕ್ರಮ

ಮೈಸೂರು ಜೂನ್.3. ಮೈಸೂರು ನಗರದ ಜೆ.ಎನ್.ನರ್ಮ್-ಬಿ.ಎಸ್.ಯು.ಪಿ ಹಂತ-1 ಮತ್ತು ಹಂತ 2 ರ ಯೋಜನೆಯಡಿ ಕೆಸರೆ ಸರ್ವೆ ನಂ.484/1 ಮತ್ತು 484/2 ರಲ್ಲಿ ಒಟ್ಟು 252 ಮನೆಗಳನ್ನು ನಿರ್ಮಿಸಿದ್ದು, ಸದರಿ...

ಗಡಸು ಮರದ ಜಾತಿಯ ಗಿಡಗಳನ್ನು ನೆಡಲು ಸಹಕರಿಸಿ

ಮೈಸೂರು, ಜೂನ್.3 ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ ಬದಿಗಳು, ಉದ್ಯಾನವನಗಳು ಹಾಗೂ ಸ್ಮಶಾನಗಳಲ್ಲಿ ಮರದ ಜಾತಿಯ ಸಸ್ಯಗಳನ್ನು ಬೆಳೆಸಲಾಗಿದ್ದು, ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರಿನ ಅವಧಿಯಲ್ಲಿ ಮಳೆ ಹಾಗೂ...

ಮೈಸೂರು ಸಂಸ್ಥಾನದ ಪ್ರಖ್ಯಾತ ದೊರೆ, ಜನಪ್ರಿಯ ಅರಸು ರಾಜರ್ಷಿ ಶ್ರೀಮನ್ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 136 ನೇ ಹುಟ್ಟು ಹಬ್ಬ

ಮೈಸೂರು ಸಂಸ್ಥಾನದ ಪ್ರಖ್ಯಾತ ದೊರೆ, ಜನಪ್ರಿಯ ಅರಸು ರಾಜರ್ಷಿ ಶ್ರೀಮನ್ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 136...

ಮಂಡ್ಯ:ಜಿಲ್ಲೆಗೆ ತೀರಾ ಅಗತ್ಯವಿದ್ದ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಆರಂಭವಾಗಿದೆ.

ಮಂಡ್ಯ:ಜಿಲ್ಲೆಗೆ ತೀರಾ ಅಗತ್ಯವಿದ್ದ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಆರಂಭವಾಗಿದೆ. ಕೇವಲ 15 ದಿನಗಳಲ್ಲಿ ಲ್ಯಾಬ್ ಆರಂಭಿಸಲು ಶ್ರೀಗಳೇ ಕಾರಣ. ಇನ್ನು ಮುಂದೆ ಜಿಲ್ಲೆಯ ಜನ ಭಯಪಡಬೇಕಿಲ್ಲ...

Recent Comments