ಯುವತಿಯೊಬ್ಬಳನ್ನ ಚುಡಾಯಿಸಿದ ಸಿವಿಲ್ ಕಾಂಟ್ರ್ಯಾಕ್ಟರ್ ಗೆ ಸಾರ್ವಜನಿಕರಿಂದ ಸಖತ್ ಗೂಸಾ ಬಿದ್ದಿದೆ
ವಿವಾಹಿತನಾಗಿದ್ರೂ ಮತ್ತೊಂದು ಯುವತಿಯ ಹಿಂದೆ ಬಿದ್ದಿದ್ದವನಿಗೆ ಸಂಭಂಧಿಕರು ಬಿಸಿಬಿಸಿ ಕಜ್ಜಾಯ ಕೊಟ್ಟಿದ್ದಾರೆ.ವಿಜಯಪುರ ಜಿಲ್ಲೆ ನಿಡಗುಂದಿ ಪಟ್ಟಣದ ಹೊರವಲಯದಲ್ಲಿ ಘಟನೆ ನಡೆದಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.ಹಣ ಕೊಡ್ತಿನಿ, ಬರ್ತಿಯಾ ಎಂದು ಕಾಲೇಜು ಯುವತಿಗೆ ಕೇಳಿದ್ದ ಗುತ್ತಿಗೆದಾರನಿಗೆ ನಾಜೂಕಾಗಿ ಕರೆಸಿಕೊಂಡ ಸಂಭಂಧಿಕರು
ಪಟ್ಟಣದ ಹೊರವಲಯದಲ್ಲಿ ಚಪ್ಪಲಿ ಏಟು ನೀಡಿದ್ದಾರೆ.ನಿಡಗುಂದಿ ನಿವಾಸಿ ಮೋತಿಸಾಬ್ ತಳೇವಾಡ ಎಂಬಾತನಿಗೆ ಗೂಸಾ ಬಿದ್ದಿದೆ.ಪರಿಚಯಸ್ಥ ಹುಡುಗಿಯ ಹಿಂದೆ ಬಿದ್ದು ಮೋತಿಸಾಬ್ ಚುಡಾಯಿಸುತ್ತಿದ್ದನೆಂದು ಹೇಳಲಾಗಿದರ.
ಅಲ್ಲದೆ ಯುವತಿಯ ಫೋಟೊ ತೆಗದು, ಕಿರಿಕಿರಿ ಮಾಡಿದ್ದನೆಂದು ಆರೋಪಿಸಲಾಗಿದೆ.
ಕೇಳಿದಷ್ಟು ಹಣ ಕೊಡ್ತೀನಿ ಹಾಸಿಗೆಗೆ ಬಾ ಎಂದಿದ್ದ ಭೂಪನ ವಿಚಾರವನ್ನ ಯುವತಿ ಮನೆಯವರಿಗೆ ತಿಳಿಸಿದ್ದಾಳೆ. ಈತನ ಕಿರಿಕಿರಿ ಅರಿತ ಮನೆಯವರುಹಿಗ್ಗಾ ಮುಗ್ಗಾ ಥಳಿಸಿದ್ದಾರೆ.
ಎರಡು ದಿನಗಳ ಹಿಂದೆ ಘಟನೆ ನಡೆದಿದೆ ಎನ್ನಲಾಗಿದ್ದು ಗೂಸಾ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ…