32 C
Mysore
Friday, November 27, 2020
Home All News ಎಷ್ಟು ದಿನ ಅಂತ ಜನರನ್ನ ಮನೆಯಲ್ಲಿ ಕೂರಿಸುತ್ತೀರಾ…ಮತ್ತೆ ಲಾಕ್ ಡೌನ್ ವಿಚಾರದಲ್ಲಿ ಪ್ರತಾಪ್ ಸಿಂಹ ಅಭಿಪ್ರಾಯ…

ಎಷ್ಟು ದಿನ ಅಂತ ಜನರನ್ನ ಮನೆಯಲ್ಲಿ ಕೂರಿಸುತ್ತೀರಾ…ಮತ್ತೆ ಲಾಕ್ ಡೌನ್ ವಿಚಾರದಲ್ಲಿ ಪ್ರತಾಪ್ ಸಿಂಹ ಅಭಿಪ್ರಾಯ…

ರಾಜ್ಯದಲ್ಲಿ ಕೊರೊನಾ ಮಾಹಾಮಾರಿ ಸ್ಪೋಟಗೊಂಡಿದೆ.ಲಾಕ್ ಡೌನ್ ಸಡಿಲಗೊಳಿಸಿದ್ದೇ ಕಾರಣ ಎಂಬ ಆರೋಪಗಳು ಸರ್ಕಾರದ ಮೇಲೆ ಬರುತ್ತಿದೆ.ಮತ್ತೆವಲಾಕ್ ಡೌನ್ ಜಾರಿಗೆ ತರಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿದೆ.ಲಾಕ್ ಡೌನ್ ಜಾರಿಗೊಳಿಸುವ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ವಿರೋಧ ವ್ಯಕ್ತಪಡಿಸಿದ್ದಾರೆ.ಎಷ್ಟು ದಿನ ಅಂತ ಜನರನ್ನ ಮನೆಯಲ್ಲಿ ಕೂರಿಸುತ್ತೀರಾ..? ಜೀವ ಉಳಿಸೋಕೆ ಹೋಗಿ ಜೀವನ ಹಾಳಾಗಬಾರದು ಎಂದು ಯಡಿಯೂರಪ್ಪ ನಿರ್ಧಾರದ ಪರ ಬ್ಯಾಟಿಂಗ್ ಮಾಡಿದ್ದಾರೆ.ಮತ್ತೆ ಲಾಕ್‌ಡೌನ್ ಅವಶ್ಯಕತೆ ಇಲ್ಲ ಅಂತ ನನಗೆ ಅನ್ನಿಸುತ್ತದೆ.ಸುಮ್ಮನೆ ಪ್ಯಾನಿಕ್ ಕ್ರಿಯೇಟ್ ಮಾಡುವ ಅಗತ್ಯವಿಲ್ಲ.
ಪರಿಸ್ಥಿತಿ ಸರ್ಕಾರದ ನಿಯಂತ್ರಣದಲ್ಲಿದೆ.
ಸರ್ಕಾರ ಅಂದ ಮೇಲೆ ಜೀವ ಜೀವನ ಎರಡನ್ನು ಉಳಿಸಬೇಕು.ಕೊರನಾದಿಂದ ಭಾರತದಲ್ಲಿ ಲಕ್ಷಗಟ್ಟಲೆ ಜನ ಸಾಯ್ತಾರೆ ಅಂತ ತಜ್ಞರು ಹೇಳಿದ್ದರು.
ಹಾಗೇನೂ ಆಗಲಿಲ್ಲ.
ಈಗಲೂ ಅಷ್ಟೇ ಏನೂ ಆಗೋಲ್ಲ.ಕೊರೊನಾ ನಿಯಂತ್ರಣಕ್ಕೆ ಬೇಕಾದ ಎಲ್ಲ ಮುಂಜಾಗ್ರತಾ ಕ್ರಮ ಸರ್ಕಾರ ತೆಗೆದುಕೊಂಡಿದೆ.
ಮೋದಿ ಸರ್ಕಾರ ಲಾಕ್‌ಡೌನ್ ಸಡಿಲಿಕೆ‌ ಮಾಡುವಾಗ ಇದನ್ನೆಲ್ಲ ಯೋಚನೆ ಮಾಡಿದೆ.
ಮುಂಬೈ, ದೆಹಲಿ ಹಾಗೂ ಬೆಂಗಳೂರಿನ ನಡುವೆ ವ್ಯತ್ಯಾಸ ಇದೆ.
ಅಲ್ಲಿನ ಪರಿಸ್ಥಿತಿಗೂ ಇಲ್ಲಿಗೂ ಸಾಕಷ್ಟು ವ್ಯತ್ಯಾಸ ಇದೆ.ಆ ರಾಜ್ಯಗಳಿಗೆ ಹೋಲಿಸಿದರೆ
ಬೆಂಗಳೂರಿನಲ್ಲಿ ಕಡಿಮೆ ಆಕ್ಟಿವ್ ಕೇಸ್ ಗಳು ಇದೆ.ಹೀಗಾಗಿ ಮತ್ತೆ ಲಾಕ್‌ಡೌನ್ ಮಾಡುವ ಅನಿವಾರ್ಯತೆ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು…

LEAVE A REPLY

Please enter your comment!
Please enter your name here

- Advertisment -

Most Popular

ಹೊಲಿಗೆ ಯಂತ್ರ ಮಂಜೂರಿಗೆ ಲಂಚ…ಪಿಡಿಓ ಎಸಿಬಿ ಬಲೆಗೆ…

ಹೊಲಿಗೆ ಯಂತ್ರ ಮಂಜೂರಿಗೆ ಲಂಚ ಕೇಳಿದ್ದ ಪಿಡಿಓ ಎಸಿಬಿ ಬಲೆಗೆ ಬಿದ್ದಿದ್ದಾನೆ.ಕಲಬುರಗಿ ಜಿಲ್ಲೆಯ ಜೇವರ್ಗಿ ಮಿನಿ ವಿಧಾನಸೌಧದಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾನೆ.ಎರಡು ಸಾವಿರ ಲಂಚ...

ಮೈಸೂರಿನಲ್ಲಿ ಯುವತಿಗೆ ಚಾಕು ಇರಿತ ಪ್ರಕರಣ…ಕಾರಣ ಕೇಳಿದ್ರೆ ಶಾಕ್ ಆಗೋದು ಗ್ಯಾರೆಂಟಿ…

ಮನೆ ಮುಂದೆ ನಿಂತಿದ್ದ ಯುವತಿಗೆ ಭಗ್ನ ಪ್ರೇಮಿಯೊಬ್ಬ ಚಾಕುವಿನಿಂದ ಇರಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.ವಿಚಾರಣೆ ವೇಳೆ ಯುವತಿಗೆ ಚಾಕುವಿನಿಂದ ಇರಿದ ಆರೋಪಿ ಗಗನ್...

ಜೀವನಾಂಶ ಕೇಳಿದ್ದ ಪತ್ನಿ ಮರ್ಡರ್…ಸಹೋದರ,ಪ್ರಿಯತಮೆ ಸಮೇತ ಹಂತಕ ಅಂದರ್…

ಜೀವನಾಂಶ ಕೇಳಿದ್ದ ಪತ್ನಿಯನ್ನ ಕೊಂದ ಆರೋಪದ ಮೇಲೆ ಪತಿ,ಸಹೋದರ ಹಾಗೂ ಪತಿಯ ಪ್ರಿಯತಮೆ ಅಂದರ್ ಆದ ಘಟನೆ ಹಾಸನದಲ್ಲಿ ಬೆಳಕಿಗೆ ಬಂದಿದೆ.ಅಕ್ರಮ ಸಂಭಂಧದ ಹಿನ್ನಲೆ...

ಒಂಟಿ ಮಹಿಳೆಯನ್ನ ನಂಬಿಸಿ ವಂಚಿಸುತ್ತಿದ್ದ ಚಾಲಾಕಿಯ ಬಂಧನ…

ಅಪರಿಚಿತರನ್ನ ನಂಬಿ ಮನೆಗೆ ಸೇರಿಸಿಕೊಳ್ಳುವ ಹವ್ಯಾಸ ಯಾವುದಾದರೂ ಮಹಿಳೆಗೆ ಇದ್ದರೆ ಹುಷಾರ್…ಅಂತಹವರನ್ನ ಟಾರ್ಗೆಟ್ ಮಾಡಿ ವಂಚಿಸುವ ಚಾಲಾಕಿಗಳು ಇದ್ದಾರೆ.ಅಂತಹ...

Recent Comments