32 C
Mysore
Tuesday, October 20, 2020
Home All News ಕೊರೊನಾ ಎಫೆಕ್ಟ್ ಆಷಾಢ ಶುಕ್ರವಾರದ ಆಚರಣೆಗೆ ಬ್ರೇಕ್…

ಕೊರೊನಾ ಎಫೆಕ್ಟ್ ಆಷಾಢ ಶುಕ್ರವಾರದ ಆಚರಣೆಗೆ ಬ್ರೇಕ್…

ಮೇಲೆ ಕೊರೊನಾ ಕರಿನೆರಳು ಆಷಾಢ ಶುಕ್ರವಾರದ ಆಚರಣೆ ಮೇಲೆ ಭಾರಿ ಪರಿಣಾಮ ಬೀರಿದೆ.
ಇಂದು ಮೊದಲ ಆಷಾಢ ಶುಕ್ರವಾರದ ದಿನ ಚಾಮುಂಡಿಬೆಟ್ಟದಲ್ಲಿ ನೀರಸ ವಾತಾವರಣ ಮೂಡಿದೆ.ಆಷಾಢ ಬಂತಂದರೆ ಚಾಮುಂಡಿ ಬೆಟ್ಟದಲ್ಲಿ ಭಕ್ತರಿಂದ ತುಂಬಿ ತುಳುಕುತ್ತಿತ್ತು.ಕೊರೊನಾ ಮಹಾಮಾರಿ ಹರಡುವ ಭೀತಿ ಹಿನ್ನಲೆ ಪ್ರವೇಶ ನಿರ್ಭಂಧ ಹೇರಲಾಗಿದೆ.ಈ ಹಿನ್ನಲೆ ಚಾಮುಂಡಿ ಬೆಟ್ಟ ಇಂದು ಬಣಗುಡುತ್ತಿದೆ. ಸರ್ಕಾರದ ಮಾರ್ಗಸೂಚಿಯಂತೆ ಚಾಮುಂಡಿ ಬೆಟ್ಟದಲ್ಲಿ ಅಗತ್ಯ ಕ್ರಮಗಳನ್ನ ಕೈಗೊಳ್ಳಲಾಗಿದೆ.ನಾಡಿನ ಮೂಲೆ ಮೂಲೆಗಳಿಂದ ಭಕ್ತರು ಚಾಮುಂಡಿ ತಾಯಿ ದರುಶನ ಪಡೆಯಲು ಆಗಮಿಸುತ್ತಿದ್ದರು.ಕೊರೊನಾ ಹಿನ್ನಲೆ ಲಕ್ಷಾಂತರ ಭಕ್ತರು ಒಂದೆಡೆ ಸೇರಬಾರದೆಂಬ ಉದ್ದೇಶದಿಂದ ಜಿಲ್ಲಾಡಳಿತ ಇಂತಹ ನಿರ್ಧಾರ ಕೈಗೊಂಡಿದೆ.ಎಂದಿನಂತೆ ದಿನ ನಿತ್ಯ ಪೂಜಾ ಕೈಂಕರ್ಯಗಳಿಗೆ ಮಾತ್ರ ಜಿಲ್ಲಾಡಳಿತ ಅನುಮತಿ ನೀಡಿದೆ.ಇಂದು ಮುಂಜಾನೆ ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕರಾದ ಡಾ.ಶಶಿ ಶೇಖರ್ ಧೀಕ್ಷಿತ್ ರವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದಿದೆ.ಪೂಜೆ ಮುಗಿದ ನಂತರ ಬಾಗಿಲು ಬಂದ್ ಮಾಡಲಾಗಿದೆ.ಬೆಟ್ಟಕ್ಕೆ ತೆರಳುವ ರಸ್ತೆ ಹಾಗೂ ಮೆಟ್ಟಿಲು ಮಾರ್ಗ ಬಂದ್ ಮಾಡಲಾಗಿದೆ.ನಾಲ್ಕು ಆಷಾಢ ಶುಕ್ರವಾರ ಹಾಗೂ ವರ್ಧಂತಿ ಮಹೋತ್ಸವಕ್ಕೂ ಬ್ರೇಕ್ ಹಾಕಲಾಗಿದೆ.ಕೊರೊನಾ ಕರಿನೆರಳು ಆಷಾಢ ಶುಕ್ರವಾರದ ಮೇಲೆ ಬಿದ್ದಿದ್ದು ಚಾಮುಂಡಿ ಭಕ್ತರಿಗೆ ನಿರಾಸೆ ತಂದಿದೆ…

LEAVE A REPLY

Please enter your comment!
Please enter your name here

- Advertisment -
< target="_blank">

Most Popular

ಪೋಷಕರ ಮುಂದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಮಗ…ಯಾಕೆ ಗೊತ್ತಾ…

ಯುವಕನೊಬ್ಬ ಪೋಷಕರ ಮುಂದೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ರತ್ನಪುರಿಯಲ್ಲಿ ನಡೆದಿದೆ. ಸ್ನೇಹಿತರು ಪೋಷಕರ...

ಅನೈತಿಕ ಸಂಭಂಧಕ್ಕೆ ಲಾಕ್ ಡೌನ್ ಅಡ್ಡಿ…ಪತಿಯನ್ನ ಕೊಂದ ಪತ್ನಿ ಪ್ರಿಯಕರ ಅಂದರ್…

ಲಾಕ್ ಡೌನ್ ಸಂಧರ್ಭದಲ್ಲಿ ಅನೈತಿಕ ಸಂಭಂಧಕ್ಕೆ ಅಡ್ಡಿಯಾದ ಪತಿಯನ್ನ ಪ್ರಿಯಕರನ ಜೊತೆ ಸೇರಿ ಕೊಂದ ಪತ್ನಿ ಅಂದರ್ ಆಗಿದ್ದಾಳೆ.ಪ್ರಿಯತಮೆಗೆ ಸಾಥ್ ನೀಡಿದ ಪ್ರಿಯಕರನೂ ಸಹ...

ಎಮ್ಮೆ ಮೇಯಿಸುತ್ತಿದ್ದ ಒಂಟಿ ಮಹಿಳೆ ಕೊಲೆ ರಹಸ್ಯ ಬಯಲು…ಚಿನ್ನಾಭರಣಕ್ಕಾಗಿ ಹಂತಕರಾದರು…

ಒಂದೂವರೆ ತಿಂಗಳ ಹಿಂದೆ ನಡೆದ ಕೊಲೆ ರಹಸ್ಯ ಭೇಧಿಸುವಲ್ಲಿ ಬನ್ನೂರು ಪೊಲೀಸರು ಯಶಸ್ವಿಯಾಗಿದ್ದಾರೆ.ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.ಚಿನ್ನಾಭರಣಕ್ಕಾಗಿ ಕೊಲೆ ನಡೆಸಿರುವುದಾಗಿ ವಿಚಾರಣೆ...

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ…ಪ್ರೀತಿಸಿ ಮದುವೆಯಾದ ಎರಡು ವರ್ಷಕ್ಕೇ ಮಸಣಕ್ಕೆ…

ವರದಕ್ಷಿಣೆ ಪೆಡಂಭೂತಕ್ಕೆ ಎರಡು ವರ್ಷದ ಹಿಂದೆ ಪ್ರೀತಿಸಿ ಮದುವೆಯಾದ ಗೃಹಿಣಿ ಬಲಿಯಾಗಿದ್ದಾಳೆ. ಮಂಜುಳಾ(೨೦) ಅನುಮಾನಾಸ್ಪದವಾಗಿಸಾವನ್ನಪ್ಪಿದ್ದಾಳೆ.ಪೋಷಕರಿಂದ ಕೊಲೆ ಆರೋಪ ಪ್ರಕರಣ ದಾಖಲಾಗಿದೆ.ಮೈಸೂರು ತಾಲೂಕು ಮೆಲ್ಲಹಳ್ಳಿ ಗ್ರಾಮದಲ್ಲಿ...

Recent Comments