32 C
Mysore
Wednesday, August 12, 2020
Home All News ಹಳ್ಳಿಹಕ್ಕಿಯಿಂದ ಮತ್ತೊಂದು ಪುಸ್ತಕ…ಶೀಘ್ರದಲ್ಲೇ ಬಾಂಬೆ ಡೇಸ್ ಬಿಡುಗಡೆ…

ಹಳ್ಳಿಹಕ್ಕಿಯಿಂದ ಮತ್ತೊಂದು ಪುಸ್ತಕ…ಶೀಘ್ರದಲ್ಲೇ ಬಾಂಬೆ ಡೇಸ್ ಬಿಡುಗಡೆ…

ಎಂಎಲ್ಸಿ ಟಿಕೆಟ್ ಕೈ ತಪ್ಪಿದ ಹಳ್ಳಿಹಕ್ಕಿ ಮುಂದಿನ ದಾರಿ ದುರ್ಗಮ‌ ಎಂದೇ ಹೇಳಲಾಗುತ್ತಿದೆ.ಆದ್ರೆ ಈ ಮಾತನ್ನ ನಿರಾಕರಿಸಿದ ಅಡಗೂರು .ಹೆಚ್. ವಿಶ್ವನಾಥ್ ಮುಂದೆ ನನ್ನ ಹಾದಿ ಸುಗಮವಾಗಿದೆ ಎಂದಿದ್ದಾರೆ. 40ವರ್ಷದಿಂದ ನಡೆದು ಬಂದ ಹಾದಿ ಇದು.
ನಾನು ಯಾವ ಪಕ್ಷದಲ್ಲೇ ಇದ್ರು ಪಕ್ಷವನ್ನ ಪ್ರೀತಿ ಮಾಡುತ್ತೇನೆ.
ಪಕ್ಷದ ನಾಯಕತ್ವದ ನಡುವಳಿಕೆ ವಿರುದ್ಧ ದಂಗೆ ಎದ್ದವನು ನಾನು.ನಾವೇ ತಂದ ಸಿದ್ದರಾಮಯ್ಯನ ವಿರುದ್ಧ ದಂಗೆ ಎದ್ದವನು.ಸಮಿಶ್ರ ಸರ್ಕಾರದ ಕುಮಾರಸ್ವಾಮಿ ವಿರುದ್ಧ ದಂಗೆ ಎದ್ದವನು ನಾನು.
ಇದು ಭಾವನೆ ಮತ್ತು ನಂಬಿಕೆಗಳ ಮೇಲೆ ಅನ್ವಯವಾಗುತ್ತದೆ.
ಅದ್ದರಿಂದ ಇವತ್ತು ನಾನು ಪುಸ್ತಕಕ್ಕೆ ಸಿದ್ದವಾಗುತ್ತಿದ್ದೇನೆ.
ದಿ ಬಾಂಬೆ ಡೇಸ್ ಎಂದು ಪುಸ್ತಕಕ್ಕೆ ಹೆಸರು ಕೊಟ್ಟಿದ್ದೇನೆ
2006ರ ಕುಮಾರಸ್ವಾಮಿ ಯಡಿಯೂರಪ್ಪ ಮಾಡಿದ್ದು ಕ್ಷಿಪ್ರ ಕ್ರಾಂತಿಯಂತೆ.
ನಾವು ಮಾಡಿದ್ದು ಪಕ್ಷಕ್ಕೆ ದ್ರೋಹ ಅಂತೆ ಎಂದು
ಕುಮಾರಸ್ವಾಮಿ ವಿರುದ್ಧ ವಿಶ್ವನಾಥ್ ವ್ಯಂಗ್ಯವಾಡಿದರು.
ನಾನೊಬ್ಬ ಲೇಖಕನಾಗಿ ರಾಜಕೀಯ ಬೆಳವಣಿಗೆ ಬರೆಯುವುದು ನನ್ನ ಕರ್ತವ್ಯ.ಮೂರು ಭಾಷೆಯಲ್ಲಿ ಈ ಪುಸ್ತಕ ಬಿಡುಗಡೆ ಆಗಲಿದೆ.ಮೈತ್ರಿ ಸರ್ಕಾರ ಪತನದ ವೇಳೆ ಬಾಂಬೆಯಲ್ಲಿ ನಡೆದ ವಿದ್ಯಮಾನಗಳು ಪುಸ್ತಕದಲ್ಲಿ ಇರುತ್ತದೆ.
ಈ ಪುಸ್ತಕ ದೆಹಲಿಯಲ್ಲಿ ಬಿಡುಗಡೆ ಮಾಡುತ್ತೇನೆ.
ಬಾಂಬೆಯಲ್ಲಿ ಏನಾಯ್ತು ಅದೆಲ್ಲ ಪುಸ್ತಕ ಬರೆಯುತ್ತಿದ್ದೇನೆ.
ಒಂದು ಸರ್ಕಾರ ಹೋಗಿ ಮತ್ತೊಂದು ಸರ್ಕಾರ ಬರಲೇಬೇಕಿದೆ.
ಇದೆಲ್ಲವನ್ನು ಅಕ್ಷರದ ಮೂಲಕ ಜನರಿಗೆ ತಿಳಿಸುತ್ತೇನೆ.ರವಿ ಬೆಳಗೆರೆ ರವರು 2006ರಲ್ಲಿ ಯಡಿಯೂರಪ್ಪ ಕುಮಾರಸ್ವಾಮಿ ಬಗ್ಗೆ ಬರೆದಿದ್ದಾರೆ.
ಸುಮಾರು 70ಪುಟಗಳ ಪುಸ್ತಕ ಅದು. ಯಾರ್ಯಾರು ಯಾವ ಎಸ್ಟೇಟ್‌ಗೆ ಹೋಗಿದ್ರು ಎಲ್ಲವನ್ನು ಬರೆದಿದ್ದಾರೆ.
ಹಾಗೇ ಬಾಂಬೆಯಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಬರೆಯುವುದರಲ್ಲಿ ಯಾವುದೇ ತಪ್ಪಿಲ್ಲ.ಪುಸ್ತಕ
ಬರೆಯುವುದರಿಂದ ಸರ್ಕಾರಕ್ಕೆ ಏನು ಆಗಲ್ಲ, ಸರ್ಕಾರ ಗಟ್ಟಿಯಾಗಿರುತ್ತದೆ ಎಂದು ಮಾಜಿ ಸಚಿವ ಹೆಚ್ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ…

LEAVE A REPLY

Please enter your comment!
Please enter your name here

- Advertisment -
< target="_blank">

Most Popular

ನೇಣುಬಿಗಿದ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ…ಕೊಲೆ ಶಂಕೆ…

ಅಕ್ರಮ ಸಂಭಂಧ ಹಿನ್ನಲೆ ಬೇರೆಯಾಗಿದ್ದ ಪತ್ನಿಯ ಮನೆಯಲ್ಲಿ ಪತಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.ಗೋವಿಂದ ನಾಯ್ಕ(೩೦) ಮೃತ...

ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಪತ್ನಿಗೆ ಹೆರಿಗೆ ಮಾಡಿಸಿದ ಡಿಸಿ…ಮಾದರಿ ಜಿಲ್ಲಾಧಿಕಾರಿ…

ಅಧಿಕಾರ ಇದ್ರೆ ಕೆಲವರು ಎಲ್ಲಾ ರೀತಿಯ ಸೌಲಭ್ಯಗಳನ್ನ ಅನುಭವಿಸಯವರೇ ಹೆಚ್ಚು.ಆದರೆ ಗದಗ ಜಿಲ್ಲೆಯ ಜಿಲ್ಲಾಧಿಕಾರಿಗಳು ಈ ಅಪವಾದದಿಂದ ದೂರ ಇದ್ದಾರೆ.ಕೊರೋನಾ ಮಧ್ಯೆಯೂ ಐಶಾರಾಮಿ ಸವಲತ್ತುಗಳನ್ನು...

ಮಾವುತನನ್ನೇ ಬಲಿ ಪಡೆದ ಆನೆ…ಮೈಸೂರು ಮೃಗಾಲಯದಲ್ಲಿ ಘಟನೆ…

ವಿಶ್ವಿಖ್ಯಾತ ಮೈಸೂರು ಮೃಗಾಲಯದಲ್ಲಿ ಆನೆಯೊಂದು ಮಾವುತನನ್ನೇ ತುಳಿದು ಕೊಂದ ಘಟನೆ ಇಂದು ಸಂಜೆ ನಡೆದಿದೆ.ಹರೀಶ್(೩೮) ಮೃತ ದುರ್ದೈವಿಯಾಗಿದ್ದಾರೆ.ಕೆಲವು ವರ್ಷಗಳಿಂದ ಆನೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಹರೀಶ್...

ನಿಧಿ ಶೋಧಕ್ಕೆ ಬಂದ ಕಿಡಿಗೇಡಿ ಯುವಕ ಮಂಟಪ ಕುಸಿದು ಸಾವು…

ನಿಧಿ ಆಸೆಗಾಗಿ ಬಂದ ಚೋರರ ತಂಡದಲ್ಲಿ ಯುವಕನೊಬ್ಬ ಮೃತಪಟ್ಟಿದ್ದು ಮೂವರು ಗಾಯಗೊಂಡ ಘಟನೆ ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಹಿಂಡಿಗನಾಳ ಗ್ರಾಮದಲ್ಲಿ ನಡೆದಿದೆ.ನಿಧಿ ಲಪಟಾಯಿಸುವ...

Recent Comments