32 C
Mysore
Wednesday, August 12, 2020
Home Crime ರಸ್ತೆ ಕಾಮಗಾರಿಯಲ್ಲೂ ರಾಜಕೀಯ…ಕೈ ಕೈ ಮಿಲಾಯಿಸಿದ ಜನಪ್ರತಿನಿಧಿಗಳು…

ರಸ್ತೆ ಕಾಮಗಾರಿಯಲ್ಲೂ ರಾಜಕೀಯ…ಕೈ ಕೈ ಮಿಲಾಯಿಸಿದ ಜನಪ್ರತಿನಿಧಿಗಳು…

ಜನಪ್ರತಿನಿಧಿಗಳು ಅಂದರೆ ಶಿಸ್ತು ಸಂಯಮಕ್ಕೆ ಉದಾಹರಣೆ ಆಗಬೇಕಾದವರು.ಆದ್ರೆ ತುಮಕೂರಿನ ಈ ಜನಪ್ರತಿನಿಧಿಗಳು ಇದಕ್ಕೆ ತದ್ವಿರುದ್ದವಾಗಿ ನಡೆದುಕೊಂಡಿದ್ದಾರೆ.ರಸ್ತೆ ಕಾಮಗಾರಿ ವಿಚಾರದಲ್ಲಿ ಇಬ್ಬರು ಜನಪ್ರತಿನಿಧಿಗಳು ಸಾರ್ವಜನಿಕವಾಗಿ ಕಿತ್ತಾಡಿಕೊಂಡು ಟೀಕೆಗೆ ಗುರಿಯಾಗಿದ್ದಾರೆ. ನಗರಸಭಾ ಸದಸ್ಯ ಮತ್ತು ಶಾಸಕರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತ ತಲುಪಿದ ಘಟನೆ ತುಮಕೂರಿನ
ಜಿಲ್ಲೆಯ ತಿಪಟೂರಿನಲ್ಲಿ ನಡೆದಿದೆ. ಶಾಸಕ ಬಿ.ಸಿ.ನಾಗೇಶ್ ಹಾಗೂ ನಗರ ಸಭಾ ಸದಸ್ಯ ಯೋಗೇಶ್ ನಡುವೆ ಮಾರಾಮಾರಿ ನಡೆದಿದೆ. ತಿಪಟೂರು ನಗರದ ವಿದ್ಯಾನಗರದ ೧೪ ನೇ ವಾರ್ಡ್ ರಸ್ತೆ ಕಾಮಗಾರಿ ಉದ್ಘಾಟನೆ ವೇಳೆ ಈ ಘಟನೆ ನಡೆದಿದೆ.ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡದೆ ಸದಸ್ಯರಿಗೂ ತಿಳಿಸದೇ ಕಾಮಗಾರಿ ಉದ್ಘಾಟಿಸುತ್ತಿರುವುದಾಗಿ ಯೋಗೇಶ್ ತಗಾದೆ ಮಾಡಿದ್ದಾರೆ. ಈ ವೇಳೆ ಶಾಸಕರು ಮತ್ತು ಅವರ ಬೆಂಬಲಿಗರು ನಗರ ಸಭಾ ಸದಸ್ಯ ಯೋಗೀಶ್ ಮತ್ತು ಬೆಂಬಲಿಗರ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ವಿಡಿಯೋ ದಲ್ಲಿ ಕೂಡ ಶಾಸಕರು ಪುಲ್ ಗರಂ ಆಗಿ ನಗರ ಸಭಾ ಸದಸ್ಯರಿಗೆ ನೀವು ನಗರ ಸಭೆ ಸದಸ್ಯರೇ ಅಲ್ಲಾ ನಿಮಗೆ ಅಧಿಕಾರವೇ ಇಲ್ಲಾ ಎಂದು ಹೇಳಿದ್ದಾರೆ. ವಿಡಿಯೋ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಶಾಸಕರು ದಾಳಿ ಮಾಡಿದ್ದಾರೆ. ಅಭಿವೃದ್ಧಿಗಾಗಿ ಜನರಿಂದ ಆಯ್ಕೆಯಾದ ಪ್ರತಿನಿಧಿಗಳೇ ಈ ರೀತಿ ಬೀದಿಯಲ್ಲಿ ಕಿತ್ತಾಡಿಕೊಂಡರೆ ಸಾರ್ವಜನಿಕರಿಗೆ ಇವರು ಕೊಡುವ ಸಂದೇಶವಾದರೂ ಏನು ಎಂಬ ಪ್ರಶ್ನೆ ಎದುರಾಗಿದೆ.ಇತರರಿಗೆ ಮಾದರಿಯಾಗಬೇಕಿದ್ದ ರಾಜಕಾರಿಣಿಗಳು ಕ್ಷುಲ್ಲಕ ಕಾರಣಕ್ಕೆ ಹೊಡೆದಾಡಿಕೊಂಡು ಚರ್ಚೆಗೆ ಗ್ರಾಸವಾಗಿದ್ದಾರೆ…

LEAVE A REPLY

Please enter your comment!
Please enter your name here

- Advertisment -
< target="_blank">

Most Popular

ನೇಣುಬಿಗಿದ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ…ಕೊಲೆ ಶಂಕೆ…

ಅಕ್ರಮ ಸಂಭಂಧ ಹಿನ್ನಲೆ ಬೇರೆಯಾಗಿದ್ದ ಪತ್ನಿಯ ಮನೆಯಲ್ಲಿ ಪತಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.ಗೋವಿಂದ ನಾಯ್ಕ(೩೦) ಮೃತ...

ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಪತ್ನಿಗೆ ಹೆರಿಗೆ ಮಾಡಿಸಿದ ಡಿಸಿ…ಮಾದರಿ ಜಿಲ್ಲಾಧಿಕಾರಿ…

ಅಧಿಕಾರ ಇದ್ರೆ ಕೆಲವರು ಎಲ್ಲಾ ರೀತಿಯ ಸೌಲಭ್ಯಗಳನ್ನ ಅನುಭವಿಸಯವರೇ ಹೆಚ್ಚು.ಆದರೆ ಗದಗ ಜಿಲ್ಲೆಯ ಜಿಲ್ಲಾಧಿಕಾರಿಗಳು ಈ ಅಪವಾದದಿಂದ ದೂರ ಇದ್ದಾರೆ.ಕೊರೋನಾ ಮಧ್ಯೆಯೂ ಐಶಾರಾಮಿ ಸವಲತ್ತುಗಳನ್ನು...

ಮಾವುತನನ್ನೇ ಬಲಿ ಪಡೆದ ಆನೆ…ಮೈಸೂರು ಮೃಗಾಲಯದಲ್ಲಿ ಘಟನೆ…

ವಿಶ್ವಿಖ್ಯಾತ ಮೈಸೂರು ಮೃಗಾಲಯದಲ್ಲಿ ಆನೆಯೊಂದು ಮಾವುತನನ್ನೇ ತುಳಿದು ಕೊಂದ ಘಟನೆ ಇಂದು ಸಂಜೆ ನಡೆದಿದೆ.ಹರೀಶ್(೩೮) ಮೃತ ದುರ್ದೈವಿಯಾಗಿದ್ದಾರೆ.ಕೆಲವು ವರ್ಷಗಳಿಂದ ಆನೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಹರೀಶ್...

ನಿಧಿ ಶೋಧಕ್ಕೆ ಬಂದ ಕಿಡಿಗೇಡಿ ಯುವಕ ಮಂಟಪ ಕುಸಿದು ಸಾವು…

ನಿಧಿ ಆಸೆಗಾಗಿ ಬಂದ ಚೋರರ ತಂಡದಲ್ಲಿ ಯುವಕನೊಬ್ಬ ಮೃತಪಟ್ಟಿದ್ದು ಮೂವರು ಗಾಯಗೊಂಡ ಘಟನೆ ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಹಿಂಡಿಗನಾಳ ಗ್ರಾಮದಲ್ಲಿ ನಡೆದಿದೆ.ನಿಧಿ ಲಪಟಾಯಿಸುವ...

Recent Comments