32 C
Mysore
Sunday, May 16, 2021
Home All News ಸಿದ್ದರಾಮಯ್ಯ ಗೆ ಇನ್ನೂ ಬುದ್ದಿ ಬಂದಿಲ್ಲ…ಸಂಸದ ವಿ.ಶ್ರೀನಿವಾಸ್ ಪ್ರಸಾದ್…

ಸಿದ್ದರಾಮಯ್ಯ ಗೆ ಇನ್ನೂ ಬುದ್ದಿ ಬಂದಿಲ್ಲ…ಸಂಸದ ವಿ.ಶ್ರೀನಿವಾಸ್ ಪ್ರಸಾದ್…

ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗೆ ಸಂಸದ ವಿ. ಶ್ರೀನಿವಾಸಪ್ರಸಾದ್ ಮೈಸೂರಿನಲ್ಲಿ ತಿರುಗೇಟು ಕೊಟ್ಟಿದ್ದಾರೆ.
ಸಿದ್ದರಾಮಯ್ಯ ಇನ್ನೂ ಬುದ್ದಿ ಕಲಿತಿಲ್ಲ ಅನ್ಸುತ್ತೆ.
ವಿರೋಧ ಪಕ್ಷದ ನಾಯಕರು ಅಂದಾಕ್ಷಣ ಎಲ್ಲವನ್ನೂ ವಿರೋಧ ಮಾಡುವುದಲ್ಲ.
ಅವರ ಮಾತಿನಿಂದ ಕಾಂಗ್ರೆಸ್ ಪಕ್ಷ ವಾಶ್‌ಔಟ್ ಆಯ್ತು, ಈಗಲೂ ಹೀಗೇ ಮಾತನಾಡ್ತಾರಲ್ಲ ಎಂದು
ಸಿದ್ದರಾಮಯ್ಯ ವಿರುದ್ದ ಗುಡುಗಿದರು.ನೀವು ಹಗರಣಗಳನ್ನು ಮಾಡಿಯೇ ಅಲ್ವಾ ಕೆಳಗೆ ಇಳಿದಿದ್ದು.
2 G ಹಗರಣದಿಂದಲೇ ಅಲ್ವಾ ನಿಮ್ಮ ಪಕ್ಷದ ಸರ್ಕಾರ ಹೋಗಿದ್ದು.
ನೀವು ಲೆಕ್ಕ ಕೇಳಿ ಆದರೆ ಅದನ್ನು ಸರಿಯಾಗಿ ಕೇಳಿ.
ಅದು ಬಿಟ್ಟು ಈಗ ಲೆಕ್ಕ ಕೇಳುತ್ತಲೇ ಭ್ರಷ್ಟಾಚಾರ ಆಗಿದೆ ಅಂದರೆ ಏನರ್ಥ?
ಯಾವುದರಲ್ಲಿ ಭ್ರಷ್ಟಾಚಾರ ಆಗಿದೆ.
ಹೇಗೆ ಆಗಿದೆ ಅನ್ನೋದನ್ನು ನೀವೇ ಹೇಳಿ.
ಲೆಕ್ಕ ಕೊಡ್ತೀನಿ ಬನ್ನಿ ಎಂದು ಮುಖ್ಯಮಂತ್ರಿಯೇ ಹೇಳಿದ್ದಾರೆ ಅಲ್ವಾ?
ಹೋಗಿ ಲೆಕ್ಕ ಪರಿಶೀಲನೆ ಮಾಡಿ.
ಅದು ಬಿಟ್ಟು ವಿರೋಧ ಪಕ್ಷ ಅಂತಾ ಸುಮ್ಮನೇ ವಿರೋಧ ಮಾಡುವುದಲ್ಲ.
ಕೇಂದ್ರದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ತಾಯಿ ಮಗ ಸೇರಿಕೊಂಡು ಸರಿಯಾಗಿ ಆಡಳಿತ ಮಾಡಲು ಬಿಡಲಿಲ್ಲ‌.
ವಿರೋಧ ಪಕ್ಷದಲ್ಲಿದ್ದುಕೊಂಡು ಇಂತಹ ಸಮಯದಲ್ಲಿ ಸಹಕಾರ ಕೊಡಬೇಕು‌‌.
ಸುಮ್ಮನೆ ಲೆಕ್ಕ ಕೇಳೋದಲ್ಲ ಎಂದು
ಸಂಸದ ಶ್ರೀನಿವಾಸ್ ಪ್ರಸಾದ್ ಮೈಸೂರಿನಲ್ಲಿ ವಾಗ್ಧಾಳಿ ನಡೆಸಿದರು…

LEAVE A REPLY

Please enter your comment!
Please enter your name here

- Advertisment -

Most Popular

ಕಾಳಸಂತೆಯಲ್ಲಿ ರೆಮಿಡಿಸಿವಿಯರ್ ಔಷಧ ಮಾರಾಟ…ಐವರ ಬಂಧನ…

ಮೈಸೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ರೆಮಿಡಿಸಿವಿಯರ್ ಔಷಧಗಳನ್ನ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಎರಡು ಜಾಲಗಳನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.ಜಾಲದಲ್ಲಿ ಐವರು ಸ್ಟಾಫ್ ನರ್ಸ್...

ಕೋವಿಡ್ ಚಿಕಿತ್ಸೆಗೆ ಸಹಕರಿಸುತ್ತಿರುವ ಆಸ್ಪತ್ರೆಗಳಿಗೆ ಧನ್ಯವಾದ ಹೇಳಿದ ಉಸ್ತುವಾರಿ ಸಚಿವರು

ಹಾಸಿಗೆ ನೀಡಲು ಸಹಕಾರ ನೀಡದಿರುವ ಕೆಲವು ಆಸ್ಪತ್ರೆಗಳಿಗೆ ನೋಟೀಸ್ ನೀಡಲು ಸೂಚನೆ ಮೈಸೂರು, ಮೇ.11: ಕೋವಿಡ್ ಚಿಕಿತ್ಸೆ ಗೆ ಶೇ.50...

ಆಕ್ಸಿಜನೈಟೆಡ್ ಬೆಡ್ ಗಳ ಸಂಖ್ಯೆ ಏರಿಸಲು ಕ್ರಮ: ಎಸ್.ಟಿ.ಸೋಮಶೇಖರ್

ಮೈಸೂರು, ಮೇ.11. ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಕ್ಸಿಜನೈಟೆಡ್ ಬೆಡ್ ಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸಹಕಾರ...

ಲಾಕ್ ಡೌನ್ ನಡುವೆ ಕಾರ್ಪೊರೇಟರ್ ರಿಂದ ಸಾಮಾಜಿಕ ಕಳಕಳಿ…

ದಿನೇ ದಿನೇ ಕೊರೊನಾ ತಾಂಡವವಾಡುತ್ತಿದೆ.ಜನಜೀವನ ಅಸ್ತವ್ಯಸ್ತವಾಗಿದೆ.ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಲಾಕ್ ಡೌನ್ ಅಸ್ತ್ರ ಬಳಸಿದೆ.ಅನಗತ್ಯವಾಗಿ ಓಡಾಡುವುದಕ್ಕೆ ಕಡಿವಾಣ ಹಾಕಿದೆ.ಲಾಕ್ ಡೌನ್ ನಡುವೆಯೂ ಜನ ಪ್ರತಿನಿಧಿಯೊಬ್ಬರು...

Recent Comments