32 C
Mysore
Wednesday, August 12, 2020
Home All News ಕೋವಿಡ್-19 ನಿರ್ವಹಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಕೋವಿಡ್-19 ನಿರ್ವಹಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ


ಮೈಸೂರು.ಜುಲೈ.23. ಮಸೂರು ನಗರದಲ್ಲಿ ಕೋವಿಡ್-19 ಹೆಚ್ಚಾಗುತ್ತಿರುವ ಹಿನ್ನೆಲೆ ಸೋಂಕಿತ ವ್ಯಕ್ತಿಗಳ ತುರ್ತು ಚಿಕಿತ್ಸೆ ಹಾಗೂ ಇನ್ನಿತರೆ ಕೋವಿಡ್ ಸಮಸ್ಯೆಗಳಿಗೆ ಸಂಬಂಧಿಸಿದಂತೆ, ಸಾರ್ವಜನಿಕರ ಅನುಕೂಲಕ್ಕಾಗಿ ಮತ್ತು ತುರ್ತು ಸಂದರ್ಭದಲ್ಲಿ ಅಗತ್ಯ ಮಾಹಿತಿಗಳನ್ನು ಪಡೆಯುವುದಕ್ಕಾಗಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಆದೇಶದ ಮೇರೆಗೆ ಯಾದವಗಿರಿಯಲ್ಲಿರುವ ಮೈಸೂರು ಮಹಾನಗರ ಪಾಲಿಕೆಯ ವಾಣಿವಿಲಾಸ ನೀರು ಸರಬರಾಜು ಆವರಣದಲ್ಲಿರುವ ಸಭಾಂಗಣದಲ್ಲಿ 24×7 ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದೆ.
ಕೋವಿಡ್-19 ಸಂಬಂಧ ಮಾಹಿತಿ ಪಡೆಯಲು ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ದೂರವಾಣಿ ಸಂಖ್ಯೆ: 0821-2519531- 0821-2519532, ಚಾಮರಾಜ ವಿಧಾನಸಭಾ ಕ್ಷೇತ್ರ ಹಾಗೂ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರ (ವಾರ್ಡ್ ನಂ. 44, 45, 46, 58)ರ ದೂರವಾಣಿ ಸಂಖ್ಯೆ;- 0821-2519533- 0821-2519534 ಹಾಗೂ ನರಸಿಂಹರಾಜ ವಿಧಾನ ಸಭಾ ಕ್ಷೇತ್ರದ ದೂರವಾಣಿ ಸಂಖ್ಯೆ: 0821-2519535- 0821-2519536ಗೆ ಸಾರ್ವಜನಿಕರು ಕರೆ ಮಾಡುವ ಮೂಲಕ ಇದರ ಉಪಯೋಗಗಳನ್ನು ಪಡೆದುಕೊಳ್ಳಬಹುದು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸಹಾಯಕ ಇಂಜಿನಿಯರ್ ಮಹೇಶ್ ಅವರನ್ನು ಕೋವಿಡ್-19 ಸಹಾಯವಾಣಿ ಕೇಂದ್ರದ ಸಂಪೂರ್ಣ ಮೇಲುಸ್ತುವಾರಿ ನೋಡೆಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಇವರ ದೂರವಾಣಿ ಸಂಖ್ಯೆ: 9900112344 ಅನ್ನು ಸಂಪರ್ಕಿಸುವಂತೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಗುರುದತ್ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ✍️tv10kannadanews💐

LEAVE A REPLY

Please enter your comment!
Please enter your name here

- Advertisment -
< target="_blank">

Most Popular

ನೇಣುಬಿಗಿದ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ…ಕೊಲೆ ಶಂಕೆ…

ಅಕ್ರಮ ಸಂಭಂಧ ಹಿನ್ನಲೆ ಬೇರೆಯಾಗಿದ್ದ ಪತ್ನಿಯ ಮನೆಯಲ್ಲಿ ಪತಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.ಗೋವಿಂದ ನಾಯ್ಕ(೩೦) ಮೃತ...

ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಪತ್ನಿಗೆ ಹೆರಿಗೆ ಮಾಡಿಸಿದ ಡಿಸಿ…ಮಾದರಿ ಜಿಲ್ಲಾಧಿಕಾರಿ…

ಅಧಿಕಾರ ಇದ್ರೆ ಕೆಲವರು ಎಲ್ಲಾ ರೀತಿಯ ಸೌಲಭ್ಯಗಳನ್ನ ಅನುಭವಿಸಯವರೇ ಹೆಚ್ಚು.ಆದರೆ ಗದಗ ಜಿಲ್ಲೆಯ ಜಿಲ್ಲಾಧಿಕಾರಿಗಳು ಈ ಅಪವಾದದಿಂದ ದೂರ ಇದ್ದಾರೆ.ಕೊರೋನಾ ಮಧ್ಯೆಯೂ ಐಶಾರಾಮಿ ಸವಲತ್ತುಗಳನ್ನು...

ಮಾವುತನನ್ನೇ ಬಲಿ ಪಡೆದ ಆನೆ…ಮೈಸೂರು ಮೃಗಾಲಯದಲ್ಲಿ ಘಟನೆ…

ವಿಶ್ವಿಖ್ಯಾತ ಮೈಸೂರು ಮೃಗಾಲಯದಲ್ಲಿ ಆನೆಯೊಂದು ಮಾವುತನನ್ನೇ ತುಳಿದು ಕೊಂದ ಘಟನೆ ಇಂದು ಸಂಜೆ ನಡೆದಿದೆ.ಹರೀಶ್(೩೮) ಮೃತ ದುರ್ದೈವಿಯಾಗಿದ್ದಾರೆ.ಕೆಲವು ವರ್ಷಗಳಿಂದ ಆನೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಹರೀಶ್...

ನಿಧಿ ಶೋಧಕ್ಕೆ ಬಂದ ಕಿಡಿಗೇಡಿ ಯುವಕ ಮಂಟಪ ಕುಸಿದು ಸಾವು…

ನಿಧಿ ಆಸೆಗಾಗಿ ಬಂದ ಚೋರರ ತಂಡದಲ್ಲಿ ಯುವಕನೊಬ್ಬ ಮೃತಪಟ್ಟಿದ್ದು ಮೂವರು ಗಾಯಗೊಂಡ ಘಟನೆ ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಹಿಂಡಿಗನಾಳ ಗ್ರಾಮದಲ್ಲಿ ನಡೆದಿದೆ.ನಿಧಿ ಲಪಟಾಯಿಸುವ...

Recent Comments