ಉತ್ತರ ಪ್ರದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನ ಮಾಜಿ ಸಂಸದ ಧೃವನಾರಾಯಣ್ ತೀವ್ರವಾಗಿ ಖಂಡಿಸಿದ್ದಾರೆ.ಉತ್ತರ ಪ್ರದೇಶ ಗೂಂಡಾ ರಾಜ್ಯ ಆಗುತ್ತಿದೆ.
ಸರ್ಕಾರಿ ಸ್ವಾಮ್ಯದ ಸಂಸ್ಥೆ NSRB ಪ್ರಕಾರ ಕ್ರೈಂನಲ್ಲಿ ಯುಪಿ ನಂ 1 ಸ್ಥಾನದಲ್ಲಿದೆ.
2008 ರಿಂದ 2019ರ ವರೆಗು 7 ರಷ್ಟು ಕ್ರೈಂ ರೇಟ್ ಹೆಚ್ಚಾಗಿದೆ.
ನಾವು ರಾಷ್ಟ್ರಪತಿಗಳನ್ನ ಒತ್ತಾಯ ಮಾಡುತ್ತಿದ್ದೇವೆ
ತಕ್ಷಣ ಉತ್ತರ ಪ್ರದೇಶ ಸರ್ಕಾರ ವಜಾ ಮಾಡಬೇಕು.
ಜನರು ಭಯದ ವಾತಾವರಣದಲ್ಲಿ ಜೀವನ ನಡೆಸುತ್ತಿದ್ದಾರೆ.
ಅವರು ರಾವಣ ರಾಜ್ಯ ನಿರ್ಮಾಣ ಮಾಡುತ್ತಿದ್ದಾರೆ.
ಈಗಾಗಲೇ ರಾವಣ ರಾಜ್ಯ ಆಗಿದೆ.
ಉತ್ತರ ಪ್ರದೇಶದಲ್ಲಿ ವ್ಯಾಪಕವಾಗಿ ಅತ್ಯಾಚಾರ ಪ್ರಕರಣ ನಡೆಯುತ್ತಿದೆ.
ಡಿವೈಎಸ್ಪಿ ರಾಂಕ್ ಅಧಿಕಾರಿ ಪೊಲೀಸರನ್ನ ಗೂಂಡಾಗಳು ಕೊಂದಿದ್ದಾರೆ.
ಈ ಅಮಾನುಷ ಕೃತ್ಯದ ಬಗ್ಗೆ ದೊಡ್ಡ ಮಟ್ಟದ ತನಿಖೆ ಆಗಬೇಕಿದೆ.
ಈ ಕೃತ್ಯದಿಂದ ನಮ್ಮ ದೇಶ ತಲೆಬಾಗುವಂತಹ ಪರಿಸ್ಥಿತಿಗೆ ಬಂದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಧ್ರುವನಾರಾಯಣ್ ವಾಗ್ಧಾಳಿ ನಡೆಸಿದರು…