32 C
Mysore
Friday, October 23, 2020
Home All News ಮಗಳ ಸಂತಾನ ಭಾಗ್ಯಕ್ಕಾಗಿ ಮಗು ಕಳ್ಳನಾದ ತಂದೆ…ನಂಜನಗೂಡು ಮಗು ಅಪಹರಣ ಪ್ರಕರಣ ಸುಖಾಂತ್ಯ…

ಮಗಳ ಸಂತಾನ ಭಾಗ್ಯಕ್ಕಾಗಿ ಮಗು ಕಳ್ಳನಾದ ತಂದೆ…ನಂಜನಗೂಡು ಮಗು ಅಪಹರಣ ಪ್ರಕರಣ ಸುಖಾಂತ್ಯ…

ನಂಜನಗೂಡಿನಲ್ಲಿ ಮಗು ಅಪಹರಣ ಕೇಸ್ ಸುಖಾಂತ್ಯ ಕಂಡಿದೆ.ಘಟನೆ ನಡೆದ ೩ ದಿನಗಳಲ್ಲೇ ನಂಜನಗೂಡು ಪೊಲೀಸರು ಅಪಹರಣ ಪ್ರಕರಣ ಭೇಧಿಸಿದ್ದಾರೆ.
ಮಗು ಅಪಹರಿಸಿದ ಆರೋಪಿಯನ್ನ ಬಂಧಿಸಿದ್ದಾರೆ.ಮಗುವನ್ನ ರಕ್ಷಿಸಿ ಮೈಸೂರಿನ ಬಾಪೂಜಿ ಮಕ್ಕಳ ಕೇಂದ್ರದ ವಶಕ್ಕೆ ನೀಡಿದ್ದಾರೆ.
ನಂಜನಗೂಡು ತಾಲೂಕು ಹುಣಸೆಕೊಪ್ಪ ಗ್ರಾಮದ ಗಂಗರಾಜು(೪೭) ಬಂಧಿತ ಆರೋಪಿಯಾಗಿದ್ದಾನೆ.
ನಂಜನಗೂಡು ದೇವಸ್ಥಾನದ ಬಳಿ ಆಟವಾಡುತ್ತಿದ್ದ ೩ ವರ್ಷದ ಮಗುವನ್ನ ಅಪಹರಿಸಿದ್ದ ಗಂಗರಾಜು ತನ್ನ ಮಗಳ ಮನಃಸಂತೋಷಕ್ಕಾಗಿ ಕೃತ್ಯವೆಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಭಿಕ್ಷುಕಿ ಪಾರ್ವತಿ ಎಂಬಾಕೆಗೆ ಸೇರಿದ ಮಗು ಕವಿತಾಳನ್ನ ಮೂರು ದಿನಗಳ ಹಿಂದೆ ಅಪಹರಿಸಲಾಗಿತ್ತು.೪ ವರ್ಷಗಳ ಹಿಂದೆ ಇದೇ ಭಿಕ್ಷುಕಿ ಪಾರ್ವತಿಯ ಮತ್ತೊಂದು ಗಂಡು ಮಗುವನ್ನ ಅಪಹರಿಸಲಾಗಿತ್ತು.ಒಂದೇ ತಾಯಿಯ ಎರಡು ಮಕ್ಕಳ ಅಪಹರಣ ಪ್ರಕರಣ ನಂಜನಗೂಡು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ನಂಜನಗೂಡು ಪೊಲೀಸರು ಕಾರ್ಯಾಚರಣೆ ಆರಂಭಿಸಿ ಮಗು ಕದ್ದ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾದರು.ಆದರೆ ಮಗು ಕದ್ದ ಕಾರಣ ಕೇಳಿ ಪೊಲೀಸರೇ ಧಂಗಾದರು.
ಗಂಗರಾಜು ಹೆತ್ತ ಮಗಳಿಗೆ ನಾಲ್ಕು ವರ್ಷಗಳಿಂದ ಮಕ್ಕಳಾಗಿರಲಿಲ್ಲ.
ಮಗುವೊಂದನ್ನ ತಂದು ಪೋಷಿಸಿದ್ರೆ ಮಗಳಿಗೆ ಮಕ್ಕಳಾಗುತ್ತದೆ ಎಂಬ ನಂಬಿಕೆ ಬಂದಿತ್ತು.ಇಂತಹ ಐಡಿಯಾ ಗಂಗರಾಜುಗೆ ಯಾರೋ ಕೊಟ್ಟಿದ್ದಾರೆ.
ಈ ಹಿನ್ನಲೆ ನಂಜನಗೂಡು ದೇವಾಲಯದ ಬಳಿ ಆಟವಾಡುತ್ತಿದ್ದ ಮಗುವನ್ನ ಅಪಹರಿಸಿದ ಗಂಗರಾಜು ತನ್ನ ಮನೆಗೆ ಕರೆದೊಯ್ದಿದ್ದ.
ಅಪಹರಣ ಪ್ರಕರಣವನ್ನ ಸವಾಲಾಗಿ ಸ್ವೀಕರಿಸಿದ್ದ ನಂಜನಗೂಡು ಪೊಲೀಸರು ಸುಖಾಂತ್ಯ ಹಾಡಿದ್ದಾರೆ.
ರಕ್ಷಣೆಗೆ ಒಳಗಾದ ಮಗು ಕವಿತಾಗೆ ಮೈಸೂರಿನ ಬಾಪೂಜಿ ಮಕ್ಕಳ ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತಿದೆ.
ಮಗಳ ಸಂತಾನ ಭಾಗ್ಯಕ್ಕಾಗಿ ಮಗು ಅಪಹರಿಸಿ ಸಿಕ್ಕಿಬಿದ್ದ ಗಂಗರಾಜು ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

LEAVE A REPLY

Please enter your comment!
Please enter your name here

- Advertisment -
< target="_blank">

Most Popular

ಪೋಷಕರ ಮುಂದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಮಗ…ಯಾಕೆ ಗೊತ್ತಾ…

ಯುವಕನೊಬ್ಬ ಪೋಷಕರ ಮುಂದೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ರತ್ನಪುರಿಯಲ್ಲಿ ನಡೆದಿದೆ. ಸ್ನೇಹಿತರು ಪೋಷಕರ...

ಅನೈತಿಕ ಸಂಭಂಧಕ್ಕೆ ಲಾಕ್ ಡೌನ್ ಅಡ್ಡಿ…ಪತಿಯನ್ನ ಕೊಂದ ಪತ್ನಿ ಪ್ರಿಯಕರ ಅಂದರ್…

ಲಾಕ್ ಡೌನ್ ಸಂಧರ್ಭದಲ್ಲಿ ಅನೈತಿಕ ಸಂಭಂಧಕ್ಕೆ ಅಡ್ಡಿಯಾದ ಪತಿಯನ್ನ ಪ್ರಿಯಕರನ ಜೊತೆ ಸೇರಿ ಕೊಂದ ಪತ್ನಿ ಅಂದರ್ ಆಗಿದ್ದಾಳೆ.ಪ್ರಿಯತಮೆಗೆ ಸಾಥ್ ನೀಡಿದ ಪ್ರಿಯಕರನೂ ಸಹ...

ಎಮ್ಮೆ ಮೇಯಿಸುತ್ತಿದ್ದ ಒಂಟಿ ಮಹಿಳೆ ಕೊಲೆ ರಹಸ್ಯ ಬಯಲು…ಚಿನ್ನಾಭರಣಕ್ಕಾಗಿ ಹಂತಕರಾದರು…

ಒಂದೂವರೆ ತಿಂಗಳ ಹಿಂದೆ ನಡೆದ ಕೊಲೆ ರಹಸ್ಯ ಭೇಧಿಸುವಲ್ಲಿ ಬನ್ನೂರು ಪೊಲೀಸರು ಯಶಸ್ವಿಯಾಗಿದ್ದಾರೆ.ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.ಚಿನ್ನಾಭರಣಕ್ಕಾಗಿ ಕೊಲೆ ನಡೆಸಿರುವುದಾಗಿ ವಿಚಾರಣೆ...

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ…ಪ್ರೀತಿಸಿ ಮದುವೆಯಾದ ಎರಡು ವರ್ಷಕ್ಕೇ ಮಸಣಕ್ಕೆ…

ವರದಕ್ಷಿಣೆ ಪೆಡಂಭೂತಕ್ಕೆ ಎರಡು ವರ್ಷದ ಹಿಂದೆ ಪ್ರೀತಿಸಿ ಮದುವೆಯಾದ ಗೃಹಿಣಿ ಬಲಿಯಾಗಿದ್ದಾಳೆ. ಮಂಜುಳಾ(೨೦) ಅನುಮಾನಾಸ್ಪದವಾಗಿಸಾವನ್ನಪ್ಪಿದ್ದಾಳೆ.ಪೋಷಕರಿಂದ ಕೊಲೆ ಆರೋಪ ಪ್ರಕರಣ ದಾಖಲಾಗಿದೆ.ಮೈಸೂರು ತಾಲೂಕು ಮೆಲ್ಲಹಳ್ಳಿ ಗ್ರಾಮದಲ್ಲಿ...

Recent Comments