32 C
Mysore
Friday, October 23, 2020
Home All News ಎಮ್ಮೆ ಮೇಯಿಸುತ್ತಿದ್ದ ಒಂಟಿ ಮಹಿಳೆ ಕೊಲೆ ರಹಸ್ಯ ಬಯಲು…ಚಿನ್ನಾಭರಣಕ್ಕಾಗಿ ಹಂತಕರಾದರು…

ಎಮ್ಮೆ ಮೇಯಿಸುತ್ತಿದ್ದ ಒಂಟಿ ಮಹಿಳೆ ಕೊಲೆ ರಹಸ್ಯ ಬಯಲು…ಚಿನ್ನಾಭರಣಕ್ಕಾಗಿ ಹಂತಕರಾದರು…

ಒಂದೂವರೆ ತಿಂಗಳ ಹಿಂದೆ ನಡೆದ ಕೊಲೆ ರಹಸ್ಯ ಭೇಧಿಸುವಲ್ಲಿ ಬನ್ನೂರು ಪೊಲೀಸರು ಯಶಸ್ವಿಯಾಗಿದ್ದಾರೆ.ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.ಚಿನ್ನಾಭರಣಕ್ಕಾಗಿ ಕೊಲೆ ನಡೆಸಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.ಮೈಸೂರು ಜಿಲ್ಲೆ ಬನ್ನೂರಿನ ನುಗ್ಗಹಳ್ಳಿ ಕೊಪ್ಪಲು ಗ್ರಾಮದಲ್ಲಿ
ಆಗಸ್ಟ್ ೧೮ ರಂದು ಬನ್ನೂರು ಠಾಣಾ ವ್ಯಾಪ್ತಿಯ ನುಗ್ಗಹಳ್ಳಿ ಕೊಪ್ಪಲು ಗ್ರಾಮದ ಹೊರವಲಯದ ತೋಪಿನಲ್ಲಿ ಅದೇ ಗ್ರಾಮದ ಮಹದೇವಿ (50) ಎಂಬಾಕೆಯನ್ನ ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ಕತ್ತು ಬಿಗಿದು ಕೊಲೆ ಮಾಡಿ ಆಕೆ ಧರಿಸಿದ್ದ ಕಿವಿ ಓಲೆ , ಮಾಂಗಲ್ಯ ಕರಿಮಣಿ ಸರವನ್ನು ಕಸಿದು ಹೋಗಿದ್ದರು.ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸದರಿ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಪತ್ತೆಗಾಗಿ ಶ್ರೀ ಸಿಬಿ ರಿಷ್ಯಂತ ಐಪಿಎಸ್ ಎಸ್ ಪಿ ಮೈಸೂರು ಜಿಲ್ಲೆ , ಮೈಸೂರು , ಶ್ರೀ ಆರ್.ಶಿವಕುಮಾರ್ ಅಡಿಷನಲ್ ಎಸ್.ಪಿ ಹಾಗೂ ನಂಜನಗೂಡು ಉಪವಿಭಾಗದ ಶ್ರೀ ಪ್ರಭಾಕರ್ ರಾವ್ ಶಿಂಧೆ ರವರ ಮಾರ್ಗದರ್ಶನದಲ್ಲಿ ಟಿ.ನರಸೀಪುರ ಸಿಪಿಐ ಎಂ , ಆರ್ ಲವ ಮತ್ತು ಪಿಎಸ್ ಐ ಪುನೀತ್ ಬಿಎನ್ ಹಾಗೂ ಸಿಬ್ಬಂದಿಗಳ ತಂಡ ರಚಿಸಿಲಾಗಿತ್ತು.
ಸದರಿ ತಂಡವು ಕೊಲೆ ಪ್ರಕರಣದ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕುಮಾರಸ್ವಾಮಿ (20)ನಾಗೇಂದ್ರ (20) ಬಂಧಿತರಾಗಿದ್ದು ಆರೋಪಿಗಳಿಂದ ಪ್ರಕರಣದಲ್ಲಿ ಕಳ್ಳತನ ಮಾಡಿದ್ದ ಕಿವಿ ಓಲೆ , ಕರಿ ಮಣಿಮಾಂಗಲ್ಯ ಸರ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.ಕೊಲೆಯಾದ ಮಹದೇವಿ ರವರು ಎಮ್ಮೆಗಳನ್ನು ಮೇಯಿಸಲು ತೋಪಿನ ಹತ್ತಿರ ಒಬ್ಬಂಟಿಯಾಗಿ ಬರುವುದನ್ನು ಗಮನಿಸಿ 3-4 ದಿನಗಳು ಹೊಂಚು ಹಾಕಿ ಕೃತ್ಯವೆಸಗಿ ಓಲೆ, ಕರಿಮಣಿ ಮಾಂಗಲ್ಯ ಸರವನ್ನು ದರೋಡೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಪ್ರಕರಣದ ಪತ್ತೆ ಕಾರ್ಯದಲ್ಲಿ ಸಿಪಿಐ ಲವ ಎಂ , ಆರ್ , ಪಿಎಸ್‌ಐ ಪುನೀತ್ ಬಿಎನ್ , ಹೆಡ್ ಕಾನ್ ಸ್ಟೇಬಲ್ ಗಳಾದ ಪ್ರಭಾಕರ್ , ಸತೀಶ್ , ರಮೇಶ್ , ಭಾಸ್ಕರ್ , ನಾರಾಯಣ , ಮಂಜುನಾಥ್ , ಸೋಮಶೇಖರ್ , ಕಾನ್ ಸ್ಟೇಬಲ್ ಗಳಾದ ಇಸ್ಮಾಯಿಲ್ , ಮಂಜು ಜಿಕೆ , ಬೈರಪ್ಪ , ಅಲ್ಲಾವುದ್ದೀನ್ , ಗಿರೀಶ್ , ಗೋಪಾಲಸ್ವಾಮಿ . ಡಬ್ಲ್ಯೂ ಪಿಸಿ ಧನಲಕ್ಷ್ಮಿ , ಡಿಪಿಓ ತಾಂತ್ರಿಕ ವಿಭಾಗದ ಹೆಡ್ ಕಾನ್ ಸ್ಟೇಬಲ್ ವಸಂತ , ಮಹಿಳಾ ಪೊಲೀಸ್ ಸುನೀತಾ ಹಾಗೂ ಡ್ರೈವರ್ ಗಳಾದ ಮಹದೇವ್ , ಪುಟ್ಟಸ್ವಾಮಿ, ಮಹಿಳಾ ಪೊಲೀಸ್ ರೇಖಾ ರವರುಗಳು ಭಾಗವಹಿಸಿದ್ದು ಸದರಿಯವರುಗಳ ಕಾರ್ಯಕ್ಷಮತೆಯನ್ನು ಮೈಸೂರು ಎಸ್.ಪಿ ಶ್ರೀ ಸಿ.ಬಿ , ರಿಷ್ಯಂತ್ ರವರು ಪ್ರಶಂಸಿಸ ನಗದು ಬಹುಮಾನ ಘೋಷಿಸಿರುತ್ತಾರೆ…

LEAVE A REPLY

Please enter your comment!
Please enter your name here

- Advertisment -
< target="_blank">

Most Popular

ಪೋಷಕರ ಮುಂದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಮಗ…ಯಾಕೆ ಗೊತ್ತಾ…

ಯುವಕನೊಬ್ಬ ಪೋಷಕರ ಮುಂದೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ರತ್ನಪುರಿಯಲ್ಲಿ ನಡೆದಿದೆ. ಸ್ನೇಹಿತರು ಪೋಷಕರ...

ಅನೈತಿಕ ಸಂಭಂಧಕ್ಕೆ ಲಾಕ್ ಡೌನ್ ಅಡ್ಡಿ…ಪತಿಯನ್ನ ಕೊಂದ ಪತ್ನಿ ಪ್ರಿಯಕರ ಅಂದರ್…

ಲಾಕ್ ಡೌನ್ ಸಂಧರ್ಭದಲ್ಲಿ ಅನೈತಿಕ ಸಂಭಂಧಕ್ಕೆ ಅಡ್ಡಿಯಾದ ಪತಿಯನ್ನ ಪ್ರಿಯಕರನ ಜೊತೆ ಸೇರಿ ಕೊಂದ ಪತ್ನಿ ಅಂದರ್ ಆಗಿದ್ದಾಳೆ.ಪ್ರಿಯತಮೆಗೆ ಸಾಥ್ ನೀಡಿದ ಪ್ರಿಯಕರನೂ ಸಹ...

ಎಮ್ಮೆ ಮೇಯಿಸುತ್ತಿದ್ದ ಒಂಟಿ ಮಹಿಳೆ ಕೊಲೆ ರಹಸ್ಯ ಬಯಲು…ಚಿನ್ನಾಭರಣಕ್ಕಾಗಿ ಹಂತಕರಾದರು…

ಒಂದೂವರೆ ತಿಂಗಳ ಹಿಂದೆ ನಡೆದ ಕೊಲೆ ರಹಸ್ಯ ಭೇಧಿಸುವಲ್ಲಿ ಬನ್ನೂರು ಪೊಲೀಸರು ಯಶಸ್ವಿಯಾಗಿದ್ದಾರೆ.ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.ಚಿನ್ನಾಭರಣಕ್ಕಾಗಿ ಕೊಲೆ ನಡೆಸಿರುವುದಾಗಿ ವಿಚಾರಣೆ...

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ…ಪ್ರೀತಿಸಿ ಮದುವೆಯಾದ ಎರಡು ವರ್ಷಕ್ಕೇ ಮಸಣಕ್ಕೆ…

ವರದಕ್ಷಿಣೆ ಪೆಡಂಭೂತಕ್ಕೆ ಎರಡು ವರ್ಷದ ಹಿಂದೆ ಪ್ರೀತಿಸಿ ಮದುವೆಯಾದ ಗೃಹಿಣಿ ಬಲಿಯಾಗಿದ್ದಾಳೆ. ಮಂಜುಳಾ(೨೦) ಅನುಮಾನಾಸ್ಪದವಾಗಿಸಾವನ್ನಪ್ಪಿದ್ದಾಳೆ.ಪೋಷಕರಿಂದ ಕೊಲೆ ಆರೋಪ ಪ್ರಕರಣ ದಾಖಲಾಗಿದೆ.ಮೈಸೂರು ತಾಲೂಕು ಮೆಲ್ಲಹಳ್ಳಿ ಗ್ರಾಮದಲ್ಲಿ...

Recent Comments