32 C
Mysore
Thursday, June 4, 2020
Home All News ಗಂಡ ಹೆಂಡಿರ ಜಗಳ…ಪತ್ನಿ ಸಾವಿನಲ್ಲಿ ಅಂತ್ಯ…

ಗಂಡ ಹೆಂಡಿರ ಜಗಳ…ಪತ್ನಿ ಸಾವಿನಲ್ಲಿ ಅಂತ್ಯ…

ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ‌ ಅಂತಾರೆ ಆದ್ರೆ ಮೈಸೂರಿನ ಇಲವಾಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸಾಯುವ ತನಕ ಎಂಬಂತಾಗಿದೆ ಒಂದು ಪ್ರಕರಣ. ಗಂಡ ಹೆಂಡಿರ ಜಗಳವಾಡಿದ ಪರಿಣಾಮ ಪತ್ನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ
ಇಲವಾಲದ ಮಾದಹಳ್ಳಿಯಲ್ಲಿ ನಡೆದಿದೆ.
ಸುನಿತಾ(೩೮)ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ.
ಪತಿ ಶ್ರೀನಿವಾಸ್ ನಾಪತ್ತೆಯಾಗಿದ್ದು ಸುನಿತಾ ಪೋಷಕರು ಕೊಲೆ ಪ್ರಕರಣ ದಾಖಲಿಸಿದ್ದಾರೆ.
೧೭ ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಜೋಡಿ
ಮಾದಗಳ್ಳಿಯ ಸ್ವಂತ ಜಮೀನಿನಲ್ಲಿ ಮನೆ ಮಾಡಿಕೊಂಡು ಇಬ್ಬರು ಮಕ್ಕಳೊಂದಿಗೆ ಸಂಸಾರ ಸಾಗಿಸುತ್ತಿತ್ತು.ಇಬ್ಬರ ನಡುವೆ ಸಾಮರಸ್ಯ ಇಲ್ಲದ ಕಾರಣ
ಪ್ರತಿದಿನ ಜಗಳವಾಡುತ್ತಿದ್ದರು. ನಿನ್ನೆಯೂ ಸಹ ಇಬ್ಬರ ನಡುವೆ ಜಗಳವಾಗಿದೆ.ಮನೆ ಹೊರಗೆ ಆಟವಾಡುತ್ತಿದ್ದ ಮಕ್ಕಳು ಹಿಂದಿರುಗಿ ಬಂದಾಗ ತಾಯಿ ಸುನಿತಾ ಬಾಗಿಲಿನಲ್ಲೇ ಮಾತನಾಡಿಸಿ ಕಳಿಸಿದ್ದಾರೆ. ಈ ವೇಳೆ
ಪತಿ ಶ್ರೀನಿವಾಸ್ ಜೊತೆ ಮನೆಯಲ್ಲೇ ಇದ್ದಾನೆ.ಇದಾದ
ಸ್ವಲ್ಪ ಹೊತ್ತಿನಲ್ಲಿ ಸುನಿತಾ ಶವ ಮನೆಯಲ್ಲಿ ಪತ್ತೆಯಾಗಿದೆ.ಘಟನೆ ನಂತರ ಶ್ರೀನಿವಾಸ್ ನಾಪತ್ತೆಯಾಗಿದ್ದಾನೆ.
ಗಂಡನೇ ಕೊಲೆ ಮಾಡಿದ್ದಾನೆಂದು‌ ಸುನಿತಾ ಮನೆಯವರು ಪ್ರಕರಣ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

LEAVE A REPLY

Please enter your comment!
Please enter your name here

- Advertisment -

Most Popular

ಅತೀಕ್ರಮವಾಗಿ ಮನೆಗಳಿಗೆ ಪ್ರವೇಶ ಮಾಡಿದರೆ ಕಾನೂನು ರೀತ್ಯಾ ಕ್ರಮ

ಮೈಸೂರು ಜೂನ್.3. ಮೈಸೂರು ನಗರದ ಜೆ.ಎನ್.ನರ್ಮ್-ಬಿ.ಎಸ್.ಯು.ಪಿ ಹಂತ-1 ಮತ್ತು ಹಂತ 2 ರ ಯೋಜನೆಯಡಿ ಕೆಸರೆ ಸರ್ವೆ ನಂ.484/1 ಮತ್ತು 484/2 ರಲ್ಲಿ ಒಟ್ಟು 252 ಮನೆಗಳನ್ನು ನಿರ್ಮಿಸಿದ್ದು, ಸದರಿ...

ಗಡಸು ಮರದ ಜಾತಿಯ ಗಿಡಗಳನ್ನು ನೆಡಲು ಸಹಕರಿಸಿ

ಮೈಸೂರು, ಜೂನ್.3 ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ ಬದಿಗಳು, ಉದ್ಯಾನವನಗಳು ಹಾಗೂ ಸ್ಮಶಾನಗಳಲ್ಲಿ ಮರದ ಜಾತಿಯ ಸಸ್ಯಗಳನ್ನು ಬೆಳೆಸಲಾಗಿದ್ದು, ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರಿನ ಅವಧಿಯಲ್ಲಿ ಮಳೆ ಹಾಗೂ...

ಮೈಸೂರು ಸಂಸ್ಥಾನದ ಪ್ರಖ್ಯಾತ ದೊರೆ, ಜನಪ್ರಿಯ ಅರಸು ರಾಜರ್ಷಿ ಶ್ರೀಮನ್ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 136 ನೇ ಹುಟ್ಟು ಹಬ್ಬ

ಮೈಸೂರು ಸಂಸ್ಥಾನದ ಪ್ರಖ್ಯಾತ ದೊರೆ, ಜನಪ್ರಿಯ ಅರಸು ರಾಜರ್ಷಿ ಶ್ರೀಮನ್ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 136...

ಮಂಡ್ಯ:ಜಿಲ್ಲೆಗೆ ತೀರಾ ಅಗತ್ಯವಿದ್ದ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಆರಂಭವಾಗಿದೆ.

ಮಂಡ್ಯ:ಜಿಲ್ಲೆಗೆ ತೀರಾ ಅಗತ್ಯವಿದ್ದ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಆರಂಭವಾಗಿದೆ. ಕೇವಲ 15 ದಿನಗಳಲ್ಲಿ ಲ್ಯಾಬ್ ಆರಂಭಿಸಲು ಶ್ರೀಗಳೇ ಕಾರಣ. ಇನ್ನು ಮುಂದೆ ಜಿಲ್ಲೆಯ ಜನ ಭಯಪಡಬೇಕಿಲ್ಲ...

Recent Comments