ನಾಲೆಯಲ್ಲಿ ಈಜಾಡಲು ತೆರಳಿದ್ದ ಇಬ್ಬರು ಬಾಲಕರು ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ ಘಟನ ಮೈಸೂರಿನ ಗೊರೂರು ಬಳಿ ನಡೆದಿದೆ.
ಹರೀಶ್(೧೬),ವೈಭವ್(೧೩) ಮೃತ ದುರ್ದೈವಿಗಳಾಗಿದ್ದಾರೆ.
ಮೈಸೂರಿನ ಕುವೆಂಪುನಗರ ‘ಎಂ’ ಬ್ಲಾಕ್ ನಿವಾಸಿಗಳು ನಿನ್ನೆ ಭಾನುವಾರ
ಮೈಸೂರು ಹೊರವಲಯದ ಗೊರೂರು ಬಳಿ ವರುಣಾ ನಾಲೆಯಲ್ಲಿ ಈಜಾಡಲು ನಾಲ್ವರು ಸ್ನೇಹಿತರು ತೆರಳಿದ್ದರು.
ಇನ್ನಿಬ್ಬರು ಸ್ನೇಹಿತರಾದ ಕುಮಾರ್ ಹಾಗೂ ಧರಣೀಶ್ ನೀರಿಗೆ ಇಳಿಯದ ಕಾರಣ ಬಚಾವ್ ಆಗಿದ್ದು ನೀರಿಗೆ ಇಳಿದಿದ್ದ
ಹರೀಶ್ ಹಾಗೂ ವೈಭವ್ ಕೊಚ್ಚಿಹೊಗಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…