ಹುಬ್ಬಳ್ಳಿಯ ಜಮೀನಿನಲ್ಲಿ ಬೆಳೆದ ಮರಗಳ ಸಂಖ್ಯೆ ಅಧಿಕೃತವಾಗಿ ತಿಳಿಸಲು ಲಂಚ ಕೇಳಿದ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಹತ್ತು ಸಾವಿರ ಲಂಚ ಪಡೆದು ಮತ್ತೆ 40ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿ ರಮೇಶ್ ಹಲಕುರ್ಕಿ ಇದೀಗ ACB ಅಧಿಕಾರಿಗಳಿಗೆ ಟಾರ್ಗೆಟ್ ಆಗಿದ್ದಾನೆ.
ಹುಬ್ಬಳ್ಳಿಯ ಮುತ್ತುಗೌಡ ಗಂಗನಗೌಡರ ಜಮೀನು ಕುಂದಗೋಳದ ಬೆಳ್ಳಿಗಟ್ಟಿ ಬಳಿ ಹೆದ್ದಾರಿಗಾಗಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು.
ಜಮೀನು ಸ್ವಾಧೀನಪಡಿಸಿಕೊಂಡ ನಂತರ ಅದರಲ್ಲಿ ಎಷ್ಟು ಮರಗಳಿದ್ದವು ಎಂಬ ಮಾಹಿತಿಯನ್ನ ತೋಟಗಾರಿಕೆ ಇಲಾಖೆ ಅಧಿಕೃತ ಮಾಡಿಕೊಡಬೇಕಿತ್ತು. ಅಧಿಕೃತಗೊಂಡ ವರದಿ ಆಧಾರದ ಮೇಲೆ ಹೈವೇದವರು ಹಣವನ್ನ ಕೊಡುತ್ತಿದ್ದರು.ಈ ಕಾರಣಕ್ಕಾಗಿ ಸಹಾಯಕ ನಿರ್ದೇಶಕ ಪರಶುರಾಮ ಹಲಕುರ್ಕಿ 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ.ಉಳಿದ 40 ಸಾವಿರ ರೂಪಾಯಿ ಕೊಡುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಹಣದ ಸಮೇತ ಅಧಿಕಾರಿಯನ್ನ ಲಾಕ್ ಮಾಡಿದ್ದಾರೆ…