ರೂಪಾಂತರಗೊಂಡ ಕೊರೊನಾ ಆತಂಕ ಶುರುವಾಗಿರುವ ಬೆನ್ನ ಹಿಂದೆಯೇ ಹೊರದೇಶದಿಂದ ಹಿಂದಿರುಗಿದ ಒಬ್ಬರಿಗೆ ಸೋಂಕು ಧೃಡವಾಗಿದೆ.
ಜಿಲ್ಲಾಡಳಿದಿಂದ ಅಧಿಕೃತ ಮಾಹಿತಿ ಹೊರಡಿಸಲಾಗಿದೆ.ಡಿಸೆಂಬರ್ ನಲ್ಲಿ 130 ಕ್ಕೂ ಹೆಚ್ಚು ಮಂದಿ ಬ್ರಿಟನ್ ನಿಂದ ಹಿಂದಿರುಗಿದ್ದಾರೆ.ವಿದೇಶದಿಂದ ಬಂದ ಒಬ್ಬರಿಗೆ ಸೋಂಕು ಧೃಢವಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಇಂದು ಹೊಸ 79 ಕೊರೊನಾ ಪ್ರಕರಣ ಗಳು ಪತ್ತೆಯಾಗಿದೆ.
ಇಂದು 32 ಮಂದಿ ಗುಣಮುಖರಾಗಿದ್ದಾರೆ.
ಒಟ್ಟು ಗುಣಮುಖರಾದವರ ಸಂಖ್ಯೆ 50577.
ಒಟ್ಟು ಸೋಂಕಿತರು ಸಂಖ್ಯೆ 52124 ಕ್ಕೆ ಏರಿದೆ.ಸಕ್ರಿಯ ಪ್ರಕರಣಗಳ ಸಂಖ್ಯೆ 539 ಇದೆ.ಇಂದು ಕೊರೊನಾಗೆ ಯಾವುದೇ ಸೋಂಕಿತರು ಸಾವನ್ನಪ್ಪಿಲ್ಲ.ವಿದೇಶದಿಂದ ಹಿಂದಿರುಗಿದವರಿಗೆ ರೂಪಾಂತರಗೊಂಡ ಕೊರೊನಾ ಸೊಂಕು ಇರುವ ಬಗ್ಗೆ ಧೃಢವಾಗಬೇಕಿದೆ.ಇದುವರೆಗೆ ಕೊರೊನಾಗೆ ಮೈಸೂರು ಜಿಲ್ಲೆಯಲ್ಲಿ ಒಟ್ಟು 1008 ಮಂದಿ ಸಾವನ್ನಪ್ಪಿದ್ದಾರೆ…