ಪತಿಯ ಅನುಮಾನ ರೋಗಕ್ಕೆ ಪತ್ನಿ ಬಲಿಯಾದ ಘಟನೆ ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನೇಣುಬಿಗಿದ ಸ್ಥಿತಿಯಲ್ಲಿ ಪತ್ನಿ ಮೃತದೇಹ ಪತ್ತೆಯಾಗಿದೆ. ಆಲನಹಳ್ಳಿಯ ಗಿರಿದರ್ಶಿನಿ ಬಡಾವಣೆಯಲ್ಲಿ ಘಟನೆ ನಡೆದಿದೆ.
ನೇತ್ರಾ(೩೮)ಅನುಮಾನಾಸ್ಪದವಾಗಿ ಮೃತಪಟ್ಟ ಗೃಹಿಣಿಯಾಗಿದ್ದಾರೆ.
ಮಗಳನ್ನು ಕೊಂದು ನೇತುಹಾಕಿದ್ದಾಗಿ ಪತಿ ಹರ್ಷ ಮೇಲೆ ಮೃತ ನೇತ್ರ ಪೋಷಕರ ಆರೋಪವಾಗಿದೆ.
ಪತಿ ಹರ್ಷ,ಮಾವ ಸುಂದರರಾಜು,ಅತ್ತೆ ಸುಜಾತ ಸೇರಿದಂತೆ ನಾಲ್ವರ ಮೇಲೆ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಂಜನಗೂಡು ಟೌನ್ ನ ನಿವಾಸಿ ನೇತ್ರಾ ಹಾಗೂ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಹಲಗಾರು ಗ್ರಾಮದ ಹರ್ಷ ಮದುವೆ ೧೩ ವರ್ಷಗಳ ಹಿಂದೆ ವಿವಾಹ ನೆರವೇರಿತ್ತು.
ಕಳೆದ ಐದಾರು ವರ್ಷಗಳಿಂದ ಹರ್ಷ ಹಾಗೂ ನೇತ್ರಾ ದಂಪತಿ ಗಿರಿದರ್ಶಿನಿ ಬಡಾವಣೆಯ ಮನೆಯಲ್ಲಿ ಪ್ರತ್ಯೇಕವಾಗಿ ಸಂಸಾರ ನಡೆಸುತ್ತಿದ್ದರು.
ಕೆಲಸ ಮಾಡದೆ ಸೋಮಾರಿಯಾಗಿದ್ದ ಹರ್ಷ ಮನೆ ಸಂಸಾರದ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ.
ಜೀವನಕ್ಕಾಗಿ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದ ನೇತ್ರಾ ಮನೆ ಸರಿದೂಗಿಸಿಕೊಂಡುವಹೋಗುತ್ತಿದ್ದರು.
ಹಣದ ವಿಚಾರದಲ್ಲಿ ಆಗಾಗ ಇಬ್ಬರ ನಡುವೆ ಗಲಾಟೆ ಆಗುತ್ತಿತ್ತು.
ತವರು ಮನೆಯಿಂದ ಹರ್ಷ ಗೆ ಆಗಾಗ ಹಣವನ್ನೂ ತಲುಪಿಸಿದ್ದರು. ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದ ನೇತ್ರಾ ನಡತೆ ಮೇಲೆ ಹರ್ಷ ಅನುಮಾನ ವ್ಯಕ್ತಪಡಿಸುತ್ತಿದ್ದ.
ಈ ವಿಚಾರದಲ್ಲೂ ಸಹ ಗಲಾಟೆ ನಡೆಯುತ್ತಿತ್ತು.
೪ ವರ್ಷಗಳ ಹಿಂದೆ ಗಲಾಟೆ ಹಿನ್ನಲೆ ದಂಪತಿ ಬೇರ್ಪಟ್ಟಿದ್ದರು.
೧೫ ದಿನಗಳ ಹಿಂದೆ ಹಿರಿಯರು ರಾಜಿ ಮಾಡಿ ಒಂದು ಮಾಡಿದ್ದರು.
ಇಂದು ಬೆಳಿಗ್ಗೆ ಇದೇ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ಶುರುವಾಗಿದೆ.ನೇತ್ರ ನೇಣಿನ ಕುಣಿಕೆಯಲ್ಲಿ ಕಾಣಿಸಿಕೊಂಡಿದ್ದಾಳೆ.
ಮಗಳು ಸಮೃದ್ದಿ ಮುಂದೆ ಗಲಾಟೆ ನಡೆದಿದ್ದು ನೇತ್ರಾಗೆ ಹಲ್ಲೆ ನಡೆಸಿದ ಹರ್ಷ ಪತ್ನಿಯನ್ನ ಕೊಂದು ನಂತರ ಸೀರೆಯಿಂದ ನೇಣು ಹಾಕಿದ್ದಾನೆಂದು ಹೇಳಿಕೆ ನೀಡಿದ್ದಾಳೆ.
ಆಲನಹಳ್ಳಿ ಪೊಲೀಸರ ಪತಿ ಹರ್ಷನನ್ನ ವಶಕ್ಕೆ ಪಡೆದಿದ್ದಾರೆ.
ಆಲನಹಳ್ಳಿ ಪೊಲೀಸರು ಆರೋಪಿ ಹರ್ಷನನ್ನು ವಿಚಾರಣೆ ನಡೆಸುತ್ತಿದ್ದಾರೆ…