ಸಂಬಳ ನೀಡದೆ ಅರಣ್ಯಾಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಗುತ್ತಿಗೆ ನೌಕರನೊಬ್ಬ ಕುಟುಂಬ ಸಮೇತ ದಯಾಮರಣ ಕೋರಿ ಪತ್ರ ಬರೆದು ಪ್ರತಿಭಟನೆ ನಡೆಸಿದ್ದಾರೆ.ಅಶೋಕಾಪುರಂ ನ ಅರಣ್ಯ ಇಲಾಖೆ ಕಚೇರಿ ಮುಂಭಾಗ ಪ್ರತಿಭಟನೆ ನಡೆದಿದೆ.ಅರಣ್ಯ ಇಲಾಖೆಯ ಗುತ್ತಿಗೆ ನೌಕರ ಬೋರೇಗೌಡ ಎಂಬುವರು ಕುಟುಂಬ ಸಮೇತ ಪ್ರತಿಭಟನೆ ನಡೆಸಿದ್ದಾರೆ.ಸಂಬಳ ನೀಡದ ಕಾರಣ ಜೀವನ ನಡೆಸೋದೆ ಕಷ್ಟವಾಗಿದೆ.ಕೂಡಲೇ ಸಂಬಳ ಕೊಡಿ ಇಲ್ಲವಾದರೆ ದಯಾಮರಣ ಕೊಡಿ ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ…