ತಮ್ಮ ಕಾರ್ಯಕರ್ತನ ಟೀ ಅಂಗಡಿಯಲ್ಲಿ ಸ್ಪೆಷಲ್ ಲೆಮನ್ ಮಡಿಕೆ ಟೀ ಕುಡಿದ ಮಾಜಿ ಸಿಎಂ ಕುಮಾರಸ್ವಾಮಿ ಮತ್ತೊಮ್ಮೆ ಸರಳತೆ ಮೆರೆದಿದ್ದಾರೆ. ಇಂದು ಕಾರ್ಯಕ್ರಮದ ನಿಮಿತ್ತ ಚನ್ನಪಟ್ಟಣಕ್ಕೆ ತೆರಳುತ್ತಿದ್ದ ಮಾಜಿ ಸಿಎಂ ಹೆಚ್.ಡಿಕೆ ಮಾರ್ಗ ಮಧ್ಯೆ ಬೆಂಗಳೂರು- ಮೈಸೂರು ಹೆದ್ದಾರಿ ಪಕ್ಕದಲ್ಲಿರುವ ತಮ್ಮ ಪಕ್ಷದ ಕಾರ್ಯಕರ್ತ ಪ್ರತಾಪ್ ಮಾಲೀಕತ್ವದ ಟೀ ಪ್ರಪಂಚ ದ ಶಾಪ್ ನಲ್ಲಿ ಸ್ಪೆಷಲ್ ಮಡಿಕೆ ಲೆಮನ್ ಟೀ ಸವಿದರು. ಟೀ ಕುಡಿದ ಹೆಚ್ಡಿಕೆ ತನ್ನ ಕಾರ್ಯಕರ್ತನಿಗೆ ಶುಭ ಹಾರೈಸುವ ಮೂಲಕ ಕಾರ್ಯಕರ್ತನ ಆಸೆಯನ್ನು ಈಡೇರಿಸಿದರು.ಈ ವೇಳೆ ಮಾಗಡಿ ಶಾಸಕ ಎ.ಮಂಜುನಾಥ್ ಹಾಗೂ ಜೆಡಿಎಸ್ ಕಾರ್ಯಕರ್ತರು ಸಾಥ್ ನೀಡಿದರು…