ಮಗನ ಕೊಲೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ತಂದೆಯನ್ನೂ ಕೊಲೆ ಮಾಡಿದ ಹಂತಕರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.ಮೈಸೂರಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಡಕಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.ಎರಡು ಕೊಲೆ ಮಾಡಿದ ನಾಲ್ವರು ಆರೋಪಿಗಳನ್ನ ಬಂಧಿಸುವಲ್ಲಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಜುನಾಥ್,ಮಹದೇವಸ್ವಾಮಿ,ಮಾದಪ್ಪ ಹಾಗೂ ಸತೀಶ್ ಬಂಧಿತ ಆರೋಪಿಗಳಾಗಿದ್ದಾರೆ.
ವೈಯುಕ್ತಿಕ ಧ್ವೇಷಕ್ಜೆ ಡಿಸೆಂಬರ್ ೨೬ ರಂದು ಮಂಡಕಳ್ಳಿ ಗ್ರಾಮದ ಸತೀಶ್ ಕುಮಾರ್ ಎಂಬಾತನನ್ನ ಕೊಂದಿದ್ದರು.
ಸತೀಶ್ ಕುಮಾರ್ ಮೃತದೇಹವನ್ನ ನಿರ್ಜನ ಪ್ರದೇಶದ ಪೊದೆಯಲ್ಲಿ ಬಿಸಾಡಿದ್ದರು.
ಸತೀಶ್ ಕುಮಾರ್ ಕಾಣೆಯಾದ ಬಗ್ಗೆ ತಂದೆ ಮರಿಕೋಟೇಗೌಡ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲು ಮಾಡಿದ್ದರು.
ಸತೀಶ್ ಕುಮಾರ್ ಕೊಲೆ ಮಾಡಿದ ವಿಚಾರ ಬೆಳಕಿಗೆ ಬರುವ ಭೀತಿ
ಹಾಗೂ ಮರಿಕೋಟೆಗೌಡರು ನಮ್ಮನ್ನೂ ಸಹ ಕೊಲೆ ಮಾಡುತ್ತಾರೆಂಬ ಭೀತಿ ಹಿನ್ನಲೆ ಜನವರಿ ೨ ರಂದು ಮರಿಕೋಟೆಗೌಡರನ್ನೂ ಕೊಲೆ ಮಾಡಿದ್ದಾರೆ.
ಒಂದು ಕೊಲೆ ಮುಚ್ಚಿಹಾಕಲು ಮತ್ತೊಂದು ಕೊಲೆ ಮಾಡಿದ ಆರೋಪಿಗಳು ಇದೀಗ ಜೈಲು ಕಂಬಿ ಎಣಿಸುತ್ತಿದ್ದಾರೆ.
ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸರ ಯಶಸ್ವಿ ಕಾರ್ಯಾಚರಣೆ ಪ್ರಶಂಸೆಗೆ ಪಾತ್ರವಾಗಿದೆ…