20 C
Mysore
Tuesday, February 25, 2020
Home All News ಸುತ್ತೂರು ಜಾತ್ರಾ ಮಹೋತ್ಸವ…ಮೆರುಗು ತಂದ ಅದ್ದೂರಿ ರಥೋತ್ಸವ…

ಸುತ್ತೂರು ಜಾತ್ರಾ ಮಹೋತ್ಸವ…ಮೆರುಗು ತಂದ ಅದ್ದೂರಿ ರಥೋತ್ಸವ…

ಐತಿಹಾಸಿಕ ಸುತ್ತೂರು ಜಾತ್ರಾ ಮಹೋತ್ಸವ ಇಂದು ಮೂರನೇ ದಿನಕ್ಕೆ ಕಾಲಿರಿಸಿದೆ. ಮೂರನೇ ದಿನವಾದ ಇಂದು
ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳ ರಥೋತ್ಸವ ಅದ್ದೂರಿಯಿಂದ ನೆರವೇರಿದೆ.ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ವಿಜೃಂಭಣೆಯ ರಥೋತ್ಸವಕ್ಕೆ ಸಾಕ್ಷಿಯಾಗಿದ್ದಾರೆ.

೬ ದಿನಗಳ ಕಾಲ ನಡೆಯುವ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ರಥೋತ್ಸವಕ್ಕೆ ಹೆಚ್ಚು ಮಾನ್ಯತೆ. ಶ್ರೀಗಳ ಉತ್ಸವ ಮೂರ್ತಿಯನ್ನು ಸರ್ವಾಲಂಕೃತ ರಥದಲ್ಲಿರಿಸಿ ವಿಶೇಷ ಪೂಜೆ ನೆರವೇರಿಸುವ ವಾಡಿಕೆ. ಸುತ್ತೂರು ಮಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜಿಯವರ ಅಮೃತ ಹಸ್ತದಿಂದ ರಥೋತ್ಸವಕ್ಕೆ ಚಾಲನೆ ದೊರೆತಿದೆ. ಗದ್ದುಗೆ ಬಳಿಯಿಂದ ಹೊರಟ ಮೆರವಣಿಗೆ ಸುತ್ತೂರಿನ ಪ್ರಮುಖ ರಸ್ತೆಯಲ್ಲಿ ಸಾಗಿ ಭಕ್ತರನ್ನ ಪುನೀತಗೊಳಿಸಿದೆ.
ನಂದಿಧ್ವಜ,ವೀರಗಾಸೆ, ಡೊಳ್ಳು ಕುಣಿತ, ಪೂಜಾ ಕುಣಿತ ಕಂಸಾಳೆ, ಗಾರುಡಿ ಗೊಂಬೆಗಳು ಸೇರಿದಂತೆ ಹತ್ತಾರು ಜನಪದ ಕಲಾಪ್ರಕಾರಗಳು ಭಾಗಿಯಾಗುವ ಮೂಲಕ ಮೆರವಣಿಗೆಗೆ ರಂಗು ತಂದಿದೆ.

ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಕ್ಷೇತ್ರ ಮಠದಲ್ಲಿ ಧಾರ್ಮಿಕ ಸಭೆ ಹಮ್ಮಿಕೊಳ್ಳಲಾಗಿತ್ತು.ಧಾರ್ಮಿಕ‌ಸಭೆಯಲ್ಲಿ ಸರ್ವಧರ್ಮಗಳ ಗುರುಗಳು ಭಾಗಿಯಾಗಿದ್ರು.ಶ್ರವಣಬೆಳಗೋಳದ ಜೈನ ಮಠದ ಚಾರುಕೀರ್ತಿ‌ಭಟ್ಟಾರಕ ಮಾಹಾಸ್ವಾಮೀಜಿ ಜ್ಯೋತಿ ಬೆಳಗುವ ಮೂಲಕ ಧಾರ್ಮಿಕ‌ಸಭೆಗೆ ಚಾಲನೆ ನೀಡಿದರು.

LEAVE A REPLY

Please enter your comment!
Please enter your name here

- Advertisment -

Most Popular

ಧೂಳು ಹಿಡಿಯುತ್ತಿದೆ ಸಾರ್ವಜನಿಕ ಗ್ರಂಥಾಲಯ…೪೦.೫೦ ಲಕ್ಷ ಖರ್ಚು ವ್ಯರ್ಥ…?

ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಾಣ ಮಾಡಿದ ಸಾರ್ವಜನಿಕ ಗ್ರಂಥಾಲಯ ಧೂಳು ಹಿಡಿಯುತ್ತಿದೆ.ಮೈಸೂರಿನ ಬೃಂದಾವನ ಬಡಾವಣೆಯಲ್ಲಿ ತಲೆ ಎತ್ತಿ ನಿಂತಿರುವ ಕಟ್ಟಡ ಬಳಕೆ ಬಾರದೆ ನಿರಪಯುಕ್ತವಾಗಿದೆ.ಉದ್ಘಾಟನೆಯಾಗಿ ಎರಡು ವರ್ಷ ಕಳೆದ್ರೂ ಬಳಕೆಗೆ ಬಾರದ...

ತುಕ್ಕು ಹಿಡಿಯುತ್ತಿದೆ ಶವಸಾಗಿಸುವ ವಾಹನ ಮುಕ್ತಿ…ಬಳಸಿಕೊಳ್ಳಲು ಅಧಿಕಾರಿಗಳಿಗೆ ಇಲ್ಲ ಇಚ್ಛಾಶಕ್ತಿ…

ಬಡಜನತಗೆ ಉಪಯೋಗವಾಗಲೆಂದು ಮಾಜಿ ವಿಧಾನಪರಿಷತ್ ಸದಸ್ಯ ಗೋ.ಮಧುಸೂದನ್ ಕೊಡುಗೆ ನೀಡಿದ ಶವಸಾಗಿಸುವ ಮುಕ್ತಿ ವಾಹನ ಮೂಲೆಗೆ ಸೇರಿದೆ.ನಂಜನಗೂಡು ನಗರಸಭೆ ಆವರಣದಲ್ಲಿ ತುಕ್ಕು ಹಿಡಿಯುತ್ತಾ ಅನಾಥವಾಗಿ ನಿಂತಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ...

ನಿವೇದಿತಾ ಗೌಡ weds ಚಂದನ್ ಶೆಟ್ಟಿ…

ಆ ದಿನಗಳು ಬಂತು.ಯುವ ದಸರಾದಲ್ಲಿ ಬಹಿರಂಗವಾಗಿ ಉಂಗುರ ಬದಲಿಸಿ ಗರ್ಲ್ ಫ್ರೆಂಡ್ ನಿವೇದಿತಾ ಗೌಡಗೆ ಮದುವೆಗ ಆಫರ್ ಕೊಟ್ಟ ಚಂದನ್‌ ಶೆಟ್ಟಿ ಕನಸು ನನಸಾಗುವ ದಿನ ಬಂದಿದೆ.ಸ್ಯಾಂಡಲ್ ವುಡ್ ಗೊಂಬೆ...

ಕುಕ್ಕರಳ್ಳಿ ಕೆರೆಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ…ಅತಿಯಾದ ಮಧ್ಯ ಸೇವನೆ ಶಂಕೆ…

ಕುಕ್ಕರಳ್ಳಿ ಕೆರೆಯ ಬಳಿಯ ನೀರಿನ ತೊಟ್ಟಿಯಲ್ಲಿ ಮೃತದೇಹ ಪತ್ತೆಯಾಗಿದೆ.ವಿದ್ಯುತ್ ಲೈನ್ ಕ್ಲಿಯರ್ ಮಾಡುವ ಸಂಧರ್ಭದಲ್ಲಿ ಲೈನ್ ಮೆನ್ ಗಳ ಕಣ್ಣಿಗೆ ಮೃತದೇಹ ಕಂಡುಬಂದಿದೆ.ನಂತರ ಜಯಲಕ್ಷ್ಮಿ ಠಾಣೆ ಪೋಲಿಸರಿಗೆ ಮಾಹಿತಿ ನೀಡಲಾಗಿದೆ.ಹೆಚ್...

Recent Comments