20 C
Mysore
Tuesday, February 25, 2020
Home All News ಮೈಸೂರಿನಲ್ಲಿ ರಥಸಪ್ತಮಿಯ ಸಂಭ್ರಮ…ಅರಮನೆ ಆವರಣದಲ್ಲಿ ದೇವತೆಗಳ ಸಮಾಗಮ…

ಮೈಸೂರಿನಲ್ಲಿ ರಥಸಪ್ತಮಿಯ ಸಂಭ್ರಮ…ಅರಮನೆ ಆವರಣದಲ್ಲಿ ದೇವತೆಗಳ ಸಮಾಗಮ…

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಥಸಪ್ತಮಿಯ ಸಂಭ್ರಮ ಮನೆ ಮಾಡಿದೆ.ಅರಮನೆ ಆವರಣದಲ್ಲಿ ಬಿಜ್ಜಯಿಸಿದ ೮ ದೇವರ ಉತ್ಸವಮೂರ್ತಿಗಳ ದರುಶನ ಪಡೆಯಲು ಭಕ್ತರ ದಂಡು ಆಗಮಿಸಿದೆ.ಅರಮನೆ ಆವರಣದಲ್ಲಿರುವ ವಿವಿಧ ದೇವಸ್ಥಾನಗಳ ಉತ್ಸವಮೂರ್ತಿಗಳನ್ನ ಒಂದೆಡೆ ದರುಶನ ಪಡೆದ ಭಕ್ತರು ಪುನೀತರಾಗಿದ್ದಾರೆ.ಗಾಯಿತ್ರಿದೇವಿ,ಭುವನೇಶ್ವರಿ,ತ್ರಿಣಯನೇಶ್ವರ,ಲಕ್ಷ್ಮೀರಮಣ ಸ್ವಾಮಿ,ಖಿಲ್ಲೆ ವೆಂಕಟರಮಣ ಸ್ವಾಮಿ,ಪ್ರಸನ್ನ ಕೃಷ್ಣ,ಶ್ವೇತವರಹ ಹಾಗೂ ಪರಿಂದದೇವಿ ಉತ್ಸವ ಮೂರ್ತಿಗಳಿಗೆ ವಿಶೇಷ ಪೂಜೆ ನಡೆದಿದೆ.ಅಂಬಾವಿಲಾಸ ಅರಮನೆ ಮುಂಭಾಗ ಪ್ರತಿಷ್ಠಾಪನೆಗೊಂಡ ಉತ್ಸವಮೂರ್ತಿಗಳ ದರುಶನ ಪಡೆದ ಭಕ್ತರು ಭಗವಂತನ ಕೃಪೆಗೆ ಪಾತ್ರರಾಗಿದ್ದಾರೆ.ಮುಂಜಾನೆ ಎಕ್ಕದ ಎಲೆ ಇಟ್ಟುಕೊಂಡು ಮಾಘ ಸ್ನಾನ ಮಾಡಿದ ಭಕ್ತವೃಂದ ಅರಮನೆ ಆವರಣದಲ್ಲಿ ಸಜ್ಜುಗೊಳಿಸಲಾದ ಉತ್ಸವ ಮೂರ್ತಿಗಳ ದರುಶನ ಪಡೆದಿದೆ. ಇಂದು ಮಧ್ಯಾಹ್ನ ೧ ಗಂಟೆ ವರೆಗೆ ದರುಶನ ವ್ಯವಸ್ಥೆ ಮಾಡಲಾಗಿದ್ದುಭಕ್ತರಿಗೆ ಪ್ರಸಾದ ವಿನಯೋಗ ವ್ಯವಸ್ಥೆ ಮಾಡಲಾಗಿತ್ತು…

LEAVE A REPLY

Please enter your comment!
Please enter your name here

- Advertisment -

Most Popular

ಧೂಳು ಹಿಡಿಯುತ್ತಿದೆ ಸಾರ್ವಜನಿಕ ಗ್ರಂಥಾಲಯ…೪೦.೫೦ ಲಕ್ಷ ಖರ್ಚು ವ್ಯರ್ಥ…?

ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಾಣ ಮಾಡಿದ ಸಾರ್ವಜನಿಕ ಗ್ರಂಥಾಲಯ ಧೂಳು ಹಿಡಿಯುತ್ತಿದೆ.ಮೈಸೂರಿನ ಬೃಂದಾವನ ಬಡಾವಣೆಯಲ್ಲಿ ತಲೆ ಎತ್ತಿ ನಿಂತಿರುವ ಕಟ್ಟಡ ಬಳಕೆ ಬಾರದೆ ನಿರಪಯುಕ್ತವಾಗಿದೆ.ಉದ್ಘಾಟನೆಯಾಗಿ ಎರಡು ವರ್ಷ ಕಳೆದ್ರೂ ಬಳಕೆಗೆ ಬಾರದ...

ತುಕ್ಕು ಹಿಡಿಯುತ್ತಿದೆ ಶವಸಾಗಿಸುವ ವಾಹನ ಮುಕ್ತಿ…ಬಳಸಿಕೊಳ್ಳಲು ಅಧಿಕಾರಿಗಳಿಗೆ ಇಲ್ಲ ಇಚ್ಛಾಶಕ್ತಿ…

ಬಡಜನತಗೆ ಉಪಯೋಗವಾಗಲೆಂದು ಮಾಜಿ ವಿಧಾನಪರಿಷತ್ ಸದಸ್ಯ ಗೋ.ಮಧುಸೂದನ್ ಕೊಡುಗೆ ನೀಡಿದ ಶವಸಾಗಿಸುವ ಮುಕ್ತಿ ವಾಹನ ಮೂಲೆಗೆ ಸೇರಿದೆ.ನಂಜನಗೂಡು ನಗರಸಭೆ ಆವರಣದಲ್ಲಿ ತುಕ್ಕು ಹಿಡಿಯುತ್ತಾ ಅನಾಥವಾಗಿ ನಿಂತಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ...

ನಿವೇದಿತಾ ಗೌಡ weds ಚಂದನ್ ಶೆಟ್ಟಿ…

ಆ ದಿನಗಳು ಬಂತು.ಯುವ ದಸರಾದಲ್ಲಿ ಬಹಿರಂಗವಾಗಿ ಉಂಗುರ ಬದಲಿಸಿ ಗರ್ಲ್ ಫ್ರೆಂಡ್ ನಿವೇದಿತಾ ಗೌಡಗೆ ಮದುವೆಗ ಆಫರ್ ಕೊಟ್ಟ ಚಂದನ್‌ ಶೆಟ್ಟಿ ಕನಸು ನನಸಾಗುವ ದಿನ ಬಂದಿದೆ.ಸ್ಯಾಂಡಲ್ ವುಡ್ ಗೊಂಬೆ...

ಕುಕ್ಕರಳ್ಳಿ ಕೆರೆಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ…ಅತಿಯಾದ ಮಧ್ಯ ಸೇವನೆ ಶಂಕೆ…

ಕುಕ್ಕರಳ್ಳಿ ಕೆರೆಯ ಬಳಿಯ ನೀರಿನ ತೊಟ್ಟಿಯಲ್ಲಿ ಮೃತದೇಹ ಪತ್ತೆಯಾಗಿದೆ.ವಿದ್ಯುತ್ ಲೈನ್ ಕ್ಲಿಯರ್ ಮಾಡುವ ಸಂಧರ್ಭದಲ್ಲಿ ಲೈನ್ ಮೆನ್ ಗಳ ಕಣ್ಣಿಗೆ ಮೃತದೇಹ ಕಂಡುಬಂದಿದೆ.ನಂತರ ಜಯಲಕ್ಷ್ಮಿ ಠಾಣೆ ಪೋಲಿಸರಿಗೆ ಮಾಹಿತಿ ನೀಡಲಾಗಿದೆ.ಹೆಚ್...

Recent Comments