20 C
Mysore
Tuesday, February 25, 2020
Home All News ವಿಶ್ವನಾಥ್ ಹಾಗೂ ಎಂಟಿಬಿಗೆ ಯಡ್ಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ತಾರೆ…ಸಿಎಂ ಪುತ್ರ ವಿಜಯೇಂದ್ರ ಸ್ಪಷ್ಟನೆ…

ವಿಶ್ವನಾಥ್ ಹಾಗೂ ಎಂಟಿಬಿಗೆ ಯಡ್ಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ತಾರೆ…ಸಿಎಂ ಪುತ್ರ ವಿಜಯೇಂದ್ರ ಸ್ಪಷ್ಟನೆ…

ವಿಶ್ವನಾಥ್ ಹಾಗೂ ಎಂಟಿಬಿ ಗೆ ಕೊಟ್ಟ ಮಾತನ್ನ ಯೆಡಿಯೂರಪ್ಪನವರು ಉಳಿಸಿಕೊಳ್ಳುತ್ತಾರೆಂದು ಸಿಎಂ ಪುತ್ರ ವಿಜಯೇಂದ್ರ ಮೈಸೂರಿನಲ್ಲಿ ಮೈಸೂರಿನಲ್ಲಿ ಹೇಳಿದ್ದಾರೆ.ಯಡ್ಯೂರಪ್ಪ ಯಾರಿಗೂ ಕೊಟ್ಟ ಮಾತು ತಪ್ಪಿಲ್ಲ.
ವಿಶ್ವನಾಥ್ ಹಾಗೂ ಎಂಟಿಬಿ ಗೆ ಕೊಟ್ಟ ಮಾತು ಉಳಿಸಿಕೊಳ್ತಾರೆ ಎಂದು ವಿಶ್ವಾಸದಿಂದ ಹೇಳಿದ್ದಾರೆ.ಮೈಸೂರು ಭಾಗವನ್ನ ಕಡೆಗಣಿಸಲಾಗುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿದ ವಿಜಯೇಂದ್ರ ಇನ್ನು 6 ಸ್ಥಾನ ಬಾಕಿ ಇದೆ.
ಅದರಲ್ಲಿ ಮೈಸೂರು ಭಾಗಕ್ಕೆ ಅವಕಾಶ ನೀಡಲಾಗುತ್ತದೆ ಎಂದರು. ಬಿಜೆಪಿ ಸರ್ಕಾರ ಎಷ್ಟು ದಿನ ಇರುತ್ತೋ ಎಂದು ವ್ಯಂಗ್ಯವಾಡಿದ ಹೆಚ್‌ಡಿಕೆ ಹೇಳಿಕೆಗೆ ವಿಜಯೇಂದ್ರ ತಿರುಗೇಟು ಕೊಟ್ಟಿದ್ದಾರೆ.
ಕುಮಾರ‌ಸ್ವಾಮಿ ಹಗಲು ಕನಸು ಕಾಣುತ್ತಿದ್ದಾರೆಂದು ಕುಟುಕಿದರು.
ಮಂತ್ರಿ ಮಂಡಲ ವಿಸ್ತರಣೆ ಬಳಿಕ ಏನೇನೋ ಆಗುತ್ತೆ ಅಂದುಕೊಂಡಿದ್ದರು.
ಆದರೆ ಯಾವುದೇ ಸಮಸ್ಯೆ ಇಲ್ಲದೆ ಬಿಎಸ್‌ವೈ ಆಡಳಿತ ನಡೆಸುತ್ತಿದ್ದಾರೆ.ಮಂತ್ರಿ ಮಂಡಲ ವಿಸ್ತರಣೆ ಬಗ್ಗೆ ಗೊಂದಲಗಳು ಇದ್ದವು.
ಗೊಂದಲ ನಿವಾರಣೆ ಮಾಡಿದ ಯಡ್ಯೂರಪ್ಪ ಎಲ್ಲವನ್ನು ನಿಭಾಯಿಸಿದ್ದಾರೆ.
ಸದ್ಯ ಬಿಜೆಪಿಯಲ್ಲಿ ಯಾವುದೇ ಗೊಂದಲ್ಲ ಇಲ್ಲ ಎಂದು ಸ್ಪಷ್ಟಪಡಿಸಿದರು…

LEAVE A REPLY

Please enter your comment!
Please enter your name here

- Advertisment -

Most Popular

ತುಕ್ಕು ಹಿಡಿಯುತ್ತಿದೆ ಶವಸಾಗಿಸುವ ವಾಹನ ಮುಕ್ತಿ…ಬಳಸಿಕೊಳ್ಳಲು ಅಧಿಕಾರಿಗಳಿಗೆ ಇಲ್ಲ ಇಚ್ಛಾಶಕ್ತಿ…

ಬಡಜನತಗೆ ಉಪಯೋಗವಾಗಲೆಂದು ಮಾಜಿ ವಿಧಾನಪರಿಷತ್ ಸದಸ್ಯ ಗೋ.ಮಧುಸೂದನ್ ಕೊಡುಗೆ ನೀಡಿದ ಶವಸಾಗಿಸುವ ಮುಕ್ತಿ ವಾಹನ ಮೂಲೆಗೆ ಸೇರಿದೆ.ನಂಜನಗೂಡು ನಗರಸಭೆ ಆವರಣದಲ್ಲಿ ತುಕ್ಕು ಹಿಡಿಯುತ್ತಾ ಅನಾಥವಾಗಿ ನಿಂತಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ...

ನಿವೇದಿತಾ ಗೌಡ weds ಚಂದನ್ ಶೆಟ್ಟಿ…

ಆ ದಿನಗಳು ಬಂತು.ಯುವ ದಸರಾದಲ್ಲಿ ಬಹಿರಂಗವಾಗಿ ಉಂಗುರ ಬದಲಿಸಿ ಗರ್ಲ್ ಫ್ರೆಂಡ್ ನಿವೇದಿತಾ ಗೌಡಗೆ ಮದುವೆಗ ಆಫರ್ ಕೊಟ್ಟ ಚಂದನ್‌ ಶೆಟ್ಟಿ ಕನಸು ನನಸಾಗುವ ದಿನ ಬಂದಿದೆ.ಸ್ಯಾಂಡಲ್ ವುಡ್ ಗೊಂಬೆ...

ಕುಕ್ಕರಳ್ಳಿ ಕೆರೆಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ…ಅತಿಯಾದ ಮಧ್ಯ ಸೇವನೆ ಶಂಕೆ…

ಕುಕ್ಕರಳ್ಳಿ ಕೆರೆಯ ಬಳಿಯ ನೀರಿನ ತೊಟ್ಟಿಯಲ್ಲಿ ಮೃತದೇಹ ಪತ್ತೆಯಾಗಿದೆ.ವಿದ್ಯುತ್ ಲೈನ್ ಕ್ಲಿಯರ್ ಮಾಡುವ ಸಂಧರ್ಭದಲ್ಲಿ ಲೈನ್ ಮೆನ್ ಗಳ ಕಣ್ಣಿಗೆ ಮೃತದೇಹ ಕಂಡುಬಂದಿದೆ.ನಂತರ ಜಯಲಕ್ಷ್ಮಿ ಠಾಣೆ ಪೋಲಿಸರಿಗೆ ಮಾಹಿತಿ ನೀಡಲಾಗಿದೆ.ಹೆಚ್...

ಬಗೆಹರಿಯದ ಸಪ್ತದೇವಾಲಯದ ಸಮಸ್ಯೆ…ಮುಂದುವರೆದ ಗ್ರಾಮಸ್ಥರ ಆಕ್ರೋಷ…

ನಂಜನಗೂಡು ತಾಲೂಕು ತಗಡೂರು ಗ್ರಾಮದ ಸಪ್ತದೇವಾಲಯದ ಸಮಸ್ಯೆ ಇನ್ನೂ ಬಗೆಹರಿದಿಲ್ಲ.ಅರ್ಚಕರು ಹಾಗೂ ಟ್ರಸ್ಟ್ ನಡುವೆ ಸಂಘರ್ಷ ಮುಂದುವರೆದಿದೆ.ದೇವಾಲಯದ ಮುಂದೆ ನಿನ್ನೆ ಹೈಡ್ರಾಮಾ ನಡೆದಿದೆ.ದೇವಸ್ಥಾನದ ಬಾಗಿಲ...

Recent Comments