20 C
Mysore
Tuesday, February 25, 2020
Home All News ಪತ್ನಿಯ ಅನೈತಿಕ ಸಂಭಂಧ…ಮಗಳಿಗೆ ವಿಷವುಣಿಸಿ ನೇಣಿಗೆ ಶರಣಾದ ತಂದೆ…

ಪತ್ನಿಯ ಅನೈತಿಕ ಸಂಭಂಧ…ಮಗಳಿಗೆ ವಿಷವುಣಿಸಿ ನೇಣಿಗೆ ಶರಣಾದ ತಂದೆ…

ಪತ್ನಿಯ ಅಕ್ರಮ ಸಂಭಂಧಕ್ಕೆ ಬೇಸತ್ತ ಪತಿರಾಯ ಮಗಳಿಗೆ ವಿಷಹಾಕಿ ಕೊಂದು ತಾನೂ ನೇಣಿಗೆ ಶರಣಾದ ದುರಂತ ಘಟನೆ ದಾವಣಗೆರೆಯಲ್ಲಿ ನಡೆದಿದೆ.ಪ್ರಪಂಚದ ಅರಿವೇ ಇಲ್ಲದ ಕಂದಮ್ಮ ಜನ್ಮ ನೀಡಿದ ಅಪ್ಪನ ಕೈಯಿಂದಲೇ ಹೆಣವಾಗಿ ಹೋಗಿದೆ.
ದಾವಣಗೆರೆ ನಗರದ ನಿಟ್ಟುವಳ್ಳಿ ನಿವಾಸಿ ಜಯಂತ್ ಕುಮಾರ್ ಜನ್ಮ ನೀಡಿದ ಮಗಳಿಗೆ ವಿಷ ಕುಡಿಸಿ ತಾನೂ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಲ ವರ್ಷಗಳ ಹಿಂದೆ ಜಯಂತ್ ಕುಮಾರ್ ನಿಗೆ ಶೈಲ ಎಂಬಾಕೆಯೊಂದಿಗೆ ಮದುವೆ ಆಗಿತ್ತು. ಮೂರು ವರ್ಷದ ಮಾನಸ ಎಂಬ ಮುದ್ದಾದ ಮಗಳಿದ್ದಳು. ಕೆಲ ತಿಂಗಳ ಹಿಂದೆ ಶೈಲ ಖಾಸಗೀ ಶಾಲೆಗೆ ಶಿಕ್ಷಕಿಯಾಗಿ ಸೇರಿಕೊಂಡಳು.ಈ ವೇಳೆ ವ್ಯಕ್ತಿಯೊಬ್ಬನ ಪರಿಚಯವಾಗಿ ಅನೈತಿಕ ಸಂಬಂದಕ್ಕೆ ದಾರಿಯಾಯಿತು.ಈ ವಿಚಾರ ಗಂಡ ಜಯಂತ್ ಗೆ ತಿಳಿದು ಶೈಲಾಳ ಪೋಷಕರಿಗೆ ಬುದ್ದಿ ಹೇಳುವಂತೆ ಮನವಿ ಮಾಡಿದ್ದ.ಆದರೆ ಹೆತ್ತವರು ಶೈಲಾಳಿಗೆ ಬುದ್ದಿ ಹೇಳುವ ಬದಲು ಜಯಂತ್ ಗೆ ಬೈದಿದ್ದರು ಇದೇ ವಿಚಾರವಾಗೀ ಶೈಲಾ ಹಾಗೂ ಜಯಂತ್ ನಡುವೆ ಪದೇ ಪದೇ ಗಲಾಟೆ ನಡೆಯುತ್ತಿತ್ತು.ಕಳೆದ ಮೂರ್ನಾಲ್ಕು ದಿನಗಳಿಂದ ಜಯಂತ್ ಮಗಳು ಮಾನಸಳೊಂದಿಗೆ ನಿಟ್ಟುವಳ್ಳಿಯ ತನ್ನ ಮನೆಯಲ್ಲೇ ಇದ್ದಳು.ಶೈಲಾಳಿಂದ ತನ್ನ ಮರ್ಯಾದೆ ಹೋಯ್ತು ಮಗಳನ್ನು ಅವರೊಂದಿಗೆ ಬಿಟ್ಟರೇ ಮಗಳ ಜೀವನ ಹಾಳಾಗುತ್ತೆ ಎಂದು ತೀರ್ಮಾನಕ್ಕೆ ಬಂದ ಜಯಂತ್ ಮಗಳನ್ನು ಸಾಯಿಸಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು ನನ್ನ ಸಾವಿಗೆ ಪತ್ನಿ ಶೈಲಜಾ, ಅತ್ತೆ, ಮಾವ, ಅವಳ ಅಣ್ಣ ಕಾರಣ ಎಂದು ಡೆತ್ ನೋಟ್ ಬರೆದು. ಮೂರು ವರ್ಷದ ಮಗಳಿಗೆ ವಿಷ ಕುಡಿಸಿ, ತಾನು ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ
ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ ಆರೋಪಿಗಳು ನಾಪತ್ತೆಯಾಗಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಜಾಲ ಬೀಸಿದ್ದಾರೆ…

LEAVE A REPLY

Please enter your comment!
Please enter your name here

- Advertisment -

Most Popular

ತುಕ್ಕು ಹಿಡಿಯುತ್ತಿದೆ ಶವಸಾಗಿಸುವ ವಾಹನ ಮುಕ್ತಿ…ಬಳಸಿಕೊಳ್ಳಲು ಅಧಿಕಾರಿಗಳಿಗೆ ಇಲ್ಲ ಇಚ್ಛಾಶಕ್ತಿ…

ಬಡಜನತಗೆ ಉಪಯೋಗವಾಗಲೆಂದು ಮಾಜಿ ವಿಧಾನಪರಿಷತ್ ಸದಸ್ಯ ಗೋ.ಮಧುಸೂದನ್ ಕೊಡುಗೆ ನೀಡಿದ ಶವಸಾಗಿಸುವ ಮುಕ್ತಿ ವಾಹನ ಮೂಲೆಗೆ ಸೇರಿದೆ.ನಂಜನಗೂಡು ನಗರಸಭೆ ಆವರಣದಲ್ಲಿ ತುಕ್ಕು ಹಿಡಿಯುತ್ತಾ ಅನಾಥವಾಗಿ ನಿಂತಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ...

ನಿವೇದಿತಾ ಗೌಡ weds ಚಂದನ್ ಶೆಟ್ಟಿ…

ಆ ದಿನಗಳು ಬಂತು.ಯುವ ದಸರಾದಲ್ಲಿ ಬಹಿರಂಗವಾಗಿ ಉಂಗುರ ಬದಲಿಸಿ ಗರ್ಲ್ ಫ್ರೆಂಡ್ ನಿವೇದಿತಾ ಗೌಡಗೆ ಮದುವೆಗ ಆಫರ್ ಕೊಟ್ಟ ಚಂದನ್‌ ಶೆಟ್ಟಿ ಕನಸು ನನಸಾಗುವ ದಿನ ಬಂದಿದೆ.ಸ್ಯಾಂಡಲ್ ವುಡ್ ಗೊಂಬೆ...

ಕುಕ್ಕರಳ್ಳಿ ಕೆರೆಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ…ಅತಿಯಾದ ಮಧ್ಯ ಸೇವನೆ ಶಂಕೆ…

ಕುಕ್ಕರಳ್ಳಿ ಕೆರೆಯ ಬಳಿಯ ನೀರಿನ ತೊಟ್ಟಿಯಲ್ಲಿ ಮೃತದೇಹ ಪತ್ತೆಯಾಗಿದೆ.ವಿದ್ಯುತ್ ಲೈನ್ ಕ್ಲಿಯರ್ ಮಾಡುವ ಸಂಧರ್ಭದಲ್ಲಿ ಲೈನ್ ಮೆನ್ ಗಳ ಕಣ್ಣಿಗೆ ಮೃತದೇಹ ಕಂಡುಬಂದಿದೆ.ನಂತರ ಜಯಲಕ್ಷ್ಮಿ ಠಾಣೆ ಪೋಲಿಸರಿಗೆ ಮಾಹಿತಿ ನೀಡಲಾಗಿದೆ.ಹೆಚ್...

ಬಗೆಹರಿಯದ ಸಪ್ತದೇವಾಲಯದ ಸಮಸ್ಯೆ…ಮುಂದುವರೆದ ಗ್ರಾಮಸ್ಥರ ಆಕ್ರೋಷ…

ನಂಜನಗೂಡು ತಾಲೂಕು ತಗಡೂರು ಗ್ರಾಮದ ಸಪ್ತದೇವಾಲಯದ ಸಮಸ್ಯೆ ಇನ್ನೂ ಬಗೆಹರಿದಿಲ್ಲ.ಅರ್ಚಕರು ಹಾಗೂ ಟ್ರಸ್ಟ್ ನಡುವೆ ಸಂಘರ್ಷ ಮುಂದುವರೆದಿದೆ.ದೇವಾಲಯದ ಮುಂದೆ ನಿನ್ನೆ ಹೈಡ್ರಾಮಾ ನಡೆದಿದೆ.ದೇವಸ್ಥಾನದ ಬಾಗಿಲ...

Recent Comments