32 C
Mysore
Monday, March 30, 2020
Home All News ಪ್ರತಾಪ್ ಸಿಂಹ v/s ಹೆಚ್.ಸಿ.ಮಹದೇವಪ್ಪ…ಫೇಸ್ ಬುಕ್ ವಾರ್…

ಪ್ರತಾಪ್ ಸಿಂಹ v/s ಹೆಚ್.ಸಿ.ಮಹದೇವಪ್ಪ…ಫೇಸ್ ಬುಕ್ ವಾರ್…

ಮಾಜಿ ಸಿಎಂ ಸಿದ್ದರಾಮಯ್ಯ ರನ್ನ ಸಂಸದ ಪ್ರತಾಪ್‌‌ಸಿಂಹ ಪ್ರಶಂಸಿಸಿದ ವಿಚಾರದಲ್ಲಿ ಫೇಸ್ ಬುಕ್ ವಾರ್ ಶುರುವಾಗಿದೆ.


ಪ್ರತಾಪ್ ಸಿಂಹ ಸಿದ್ದರಾಮಯ್ಯ ಪರ ಫುಲ್ ಮಾರ್ಕ್ಸ್ ಕೊಟ್ಟರೆ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತೀವ್ರವಾಗಿ ಟೀಕಿಸಿ ಉತ್ತರಿಸಿದ್ದಾರೆ.ಮೈಸೂರಿನ ಜಯದೇವ ಆಸ್ಪತ್ರೆ ನಿರ್ಮಾಣ ವಿಚಾರದಲ್ಲಿ
ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲಿ ಸಿದ್ದರಾಮಯ್ಯ ರನ್ನ ಪ್ರತಾಪ್ ಸಿಂಹ ಹಾಡಿ ಹೊಗಳಿದ್ದಾರೆ.
ಸಿದ್ದರಾಮಯ್ಯರನ್ನ ಸಾಹೇಬ್ರು ಎಂದು ಉಲ್ಲೇಖಿಸಿ ಮೆಚ್ಚುಗೆ ಮಾತಗಳನ್ನ ಉಲ್ಲೇಖಿಸಿದ್ದಾರೆ.
ಆತ್ಮೀಯರನ್ನ ನೋಡಲು ಜಯದೇವ ಆಸ್ಪತ್ರೆಗೆ ಭೇಟಿ ನೀಡಿದ್ದ ಪ್ರತಾಪ್‌ಸಿಂಹ ಆಸ್ಪತ್ರೆಯ ಅತ್ಯಾಧುನಿಕ ವ್ಯವಸ್ಥೆ ನೋಡಿ ಸಂತಸ ವ್ಯಕ್ತಪಡಿಸಿದ್ದಲ್ಲದೆ
ಇಂತಹ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಕಾರಣರಾದ ಸಿದ್ದರಾಮಯ್ಯರಿಗೆ ಧನ್ಯವಾದ ಎಂದು ಪೋಸ್ಟ್ ಮಾಡಿದ್ದಾರೆ.ಸಿದ್ದರಾಮಯ್ಯ ಜೊತೆಗೆ ಶಾಸಕ ವಾಸು,ಜಯದೇವ ಆಸ್ಪತ್ರೆ ನಿರ್ದೇಶ ಡಾ.ಮಂಜುನಾಥ್, ಡಾ.ಸದಾನಂದ‌ಗೌಡರಿಗು ಧನ್ಯವಾದ ಎಂದು ಹೊಗಳಿದ್ದಾರೆ.ಮತ್ತೊಂದೆಡೆ ಪ್ರತಾಪ್ ಸಿಂಹ ವಿರುದ್ದ ಮಾಜಿ ಸಚಿವ ಡಾ.ಹೆಚ್‌.ಸಿ.ಮಹದೇವಪ್ಪ ಫೇಸ್‌ಬುಕ್‌ನಲ್ಲೇ ತೀವ್ರವಾಗಿ ಟೀಕಿಸಿದ್ದಾರೆ.ಕಳೆದ ಚುನಾವಣೆಯಲ್ಲಿ ಬಿಜೆಪಿಗರು ಸುಳ್ಳು ಪ್ರಚಾರ ಮಾಡಿದ್ದರು.
ಶವ ರಾಜಕೀಯ ಮಾಡಿ ಅಪಪ್ರಚಾರ ಮಾಡಿದ್ದರು.
ಈಗ ಸಿದ್ದರಾಮಯ್ಯರ ಸಾಧನೆಯನ್ನ ಶ್ಲಾಘಿಸುತ್ತಿದ್ದಾರೆ.
ಇದು ಬಿಜೆಪಿಗರ ಇಬ್ಬಂದಿ ನೀತಿ.
ಈಗ ಸಿದ್ದರಾಮಯ್ಯರನ್ನ ಹೊಗಳಿರುವ ಈ ವ್ಯಕ್ತಿ ಮುಂದಿನ ಚುನಾವಣೆಗೆ ಇನ್ನೊಂದು ವರಸೆ ತೆಗೆಯಬಹುದು.
ಆದ್ರೆ ಜನರ ಪರವಾಗಿ ಅಭಿವೃದ್ಧಿ ಕೆಲಸ ಮಾಡೋದೆ ನಮ್ಮ‌ ಕರ್ತವ್ಯ ಎಂದು ಪ್ರತಾಪ್ ಸಿಂಹ ರ ವಿರುದ್ದ ಗುಡುಗಿದ್ದಾರೆ.ಒಟ್ಟಾರೆ ಇಬ್ಬರು ನಾಯಕರ ನಡುವೆ ಫೇಸ್ ಬುಕ್ ವಾರ್ ಆರಂಭವಾಗಿದೆ…

LEAVE A REPLY

Please enter your comment!
Please enter your name here

- Advertisment -

Most Popular

ಮೈಸೂರು ಲಾಕ್ ಡೌನ್…ಮನೆಗೇ ಬರುತ್ತೆ ಕಡಿಮೆ ದರದ ಪ್ರಾವಿಷನ್…ಯೋಜನೆ ತಂದ್ರು ಶಾಸಕ ರಾಮದಾಸ್…

ಕೊರೊನಾ ವೈರಸ್ ನಿಂದ ಘೋಷಿಸಿದ ಲಾಕ್ ಡೌನ್ ಸಖತ್‌ಎಫೆಕ್ಟ್ ಆಗಿದೆ.ಮನೆಯಿಂದ ಹೊರಗೆ ಬರಬಾರದೆಂಬ ನಿಯಮ ಕೆಲವರಿಗಂತೂ ಸಂಕಷ್ಟ ತಂದಿದೆ.ದಿನಸಿ ಸಾಮಾನು ತರಲೂ ಕಷ್ಟವಾಗುತ್ತಿದೆ.ಹೊರಗೆ ಬಂದರೆ ಪೊಲೀಸರ ಕರೊನಾ ಹೆದರಿಕೆ ಮನೆಯಲ್ಲಿದ್ದರೆ...

ಜಿಲ್ಲಾಡಳಿತದಿಂದ ಕೊರೊನ ಜಾಗೃತಿ ಭರ್ಜರಿ…ಎಪಿಎಂಸಿಕಾರ್ಮಿಕರಿಗೆ ಇಲ್ಲ ಸೇಫ್ಟಿ…

ಇದೊಂದು ವಿಪರ್ಯಾಸದ ಸಂಗತಿ ಅಂದರೆ ತಪ್ಪಿಲ್ಲ.ಇಡೀ ಜಗತ್ತೇ ಕೊರೊನಾ ಹೆಸರೇಳಿದರೆ ಬೆಚ್ಚಿಬೀಳುತ್ತಿದೆ.ಮೈಸೂರಿನಲ್ಲಂತೂ ಭರ್ಜರಿಯಾಗಿ ಜಾಗೃತಿ ಮೂಡಿಸಲಾಗುತ್ತಿದೆ.ಆದರೆ ಎಪಿಎಂಸಿ ಆವರಣವನ್ನ ಸ್ವಚ್ಛಗೊಳಿಸುವ ಪೌರಕಾರ್ಮಿಕರ ಸೇಫ್ಟಿ ಬಗ್ಗೆ ತಲೆಯೇ ಕೊಡಿಸಿಕೊಂಡಿಲ್ಲ.ಇಲ್ಲಿನ ಪೌರಕಾರ್ಮಿಕರು ಸಂಪೂರ್ಣವಾಗಿ...

ಮನೆಯಿಂದ ಹೊರಬಂದರೆ ಕರೊನಾ…ಒಳಗಿದ್ದರೆ ನಗೀನಾ…ಹುಣಸೂರು ಜನತೆಗೆ ಹಾವಿನ ಕಾಟ…

ಕೊರೊನಾ ವೈರಸ್ ಮನುಕುಲಕ್ಕೆ ಭೀತಿ ಹುಟ್ಟಿಸಿದೆ.ಗೃಹಬಂಧನವೇ ಮುಕ್ತಿಗೆ ದಾರಿ.ಮನೆಯಲ್ಲಿದ್ದರೆ ಮಾತ್ರ ಸೇಫ್.ಹುಣಸೂರಿನ‌ ಶಬ್ಬೀರ್ ನಗರದ ನಿವಾಸಿಗಳಿಗೆ ಮನೆಯೂ ಸೇಫಾಗಿಲ್ಲ ಯಾಕೆ ಗೊತ್ತಾ…? ಹಾವುಗಳ ಕಾಟ.ನಿನ್ನೆ ರಾತ್ರಿಯಂತೂ ಎರಡು ಹಾವುಗಳ ಓಡಾಟ...

ಅಸಮರ್ಥ ಅಧಿಕಾರಿಗಳನ್ನ ವರ್ಗಾವಣೆ ಮಾಡಿ…ಹಳ್ಳಿಹಕ್ಕಿ ಕಿಡಿ…

ಕೊರೊನಾ ವೈರಸ್ ವಿಚಾರದಲ್ಲಿ ಹಳ್ಳಿಹಕ್ಕಿ ವಿಶ್ವನಾಥ್ ಮೌನ ಮುರಿದಿದ್ದಾರೆ.ಇಷ್ಟು ದಿನ ಮೌನವಹಿಸಿದ್ದ ವಿಶ್ವನಾಥ್ ವಿಡಿಯೋ ಮೂಲಕ ಮುಖ್ಯಮಂತ್ರಿಗಳಿಗೆ ಸಂದೇಶ ರವಾನೆ ಮಾಡಿದ್ದಾರೆ.ಸಮರ್ಥ ಅಧಿಕಾರಿಗಳನ್ನ‌ ಮೈಸೂರಿಗೆ ವರ್ಗಾಯಿಸಿ.ಅಸಮರ್ಥ ಅಧಿಕಾರಿಗಳನ್ನ ಎತ್ತಂಗಡಿ ಮಾಡಿ...

Recent Comments