32 C
Mysore
Tuesday, October 19, 2021
Home All News ಮೈಸೂರಿಗೆ ಚಿತ್ರ ನಗರಿ ಬರಲಿ...ಸಾರ್ವಜನಿಕರ ಸಹಿ ಸಂಗ್ರಹಣೆ.

ಮೈಸೂರಿಗೆ ಚಿತ್ರ ನಗರಿ ಬರಲಿ…ಸಾರ್ವಜನಿಕರ ಸಹಿ ಸಂಗ್ರಹಣೆ.

ಚಿತ್ರ ನಗರಿ ಮೈಸೂರಿಗೆ ಬರಬೇಕೆಂಬ ಅಭಿಲಾಷೆಯಿಂದ ಪಾತಿ ಫೌಂಡೇಷನ್ ವತಿಯಿಂದ ಅಗ್ರಹಾರ ವೃತ್ತದಲ್ಲಿ ಸಾರ್ವಜನಿಕರ ಸಹಿ ಸಂಗ್ರಹ ಅಭಿಯಾನವನ್ನು ಮಾಡಲಾಯಿತು. ಅಭಿಯಾನಕ್ಕೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ಸಿ ನಾರಾಯಣಗೌಡ ನೀಡಿದರು.ಇದೇ ವೇಳೆ ಮಾತನಾಡಿದ ನಾರಾಯಣಗೌಡ
ಮುಂದಿನ ದಿನಗಳಲ್ಲಿ ಮೈಸೂರಿನ ಎಲ್ಲ ಸಂಘ ಸಂಸ್ಥೆಗಳು ಹಾಗೂ ವ್ಯಾಪಾರಸ್ಥರಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು.


ಫಿಲಂ ಸಿಟಿ ಯೋಜನೆಯಿಂದ ನಮ್ಮ ಮೈಸೂರು ಪ್ರವಾಸೋದ್ಯಮ ನಗರವಾಗಿ ಬೆಳೆಯಲು ಉತ್ತಮ ಅವಕಾಶಗಳು ಇವೆ.ಅಲ್ಲದೇ ಮೈಸೂರಿನ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿದಂತಾಗುತ್ತದೆ.ಹಾಗಾಗಿ ಯೋಜನೆಯನ್ನು ಬೆಂಗಳೂರಿಗೆ ಸ್ಥಳಾಂತರಿಸಬಾರದು.
ಈಗಾಗಲೇ ಬೆಂಗಳೂರು ಸಿಲಿಕಾನ್ ಸಿಟಿಯಾಗಿ ಬೆಳೆದಿದೆ .ಹೀಗಿರುವಾಗ ಎಲ್ಲ ಯೋಜನೆಗಳನ್ನು ಅಲ್ಲಿಯೇ ಮಾಡಿದ್ದಾರೆ. ಎರಡನೇ ಹಂತದ ಜಿಲ್ಲೆಗಳು ಮತ್ತು ಇತರ ಜಿಲ್ಲೆಗಳು ಬೆಳೆಯುವುದು ಹೇಗೆ ಎಂದು ಪ್ರಶ್ನಿಸಿದರು.
ಮೈಸೂರಿಗೆ ಒಡೆಯರ್ ನೀಡಿರುವ ಯೋಜನೆಗಳು ಬಿಟ್ಟರೆ, ನಂತರ ಬಂದಂತಹ ಸರ್ಕಾರಗಳು ಮೈಸೂರಿನ ಪ್ರವಾಸೋದ್ಯಮ ಬೆಳವಣಿಗೆಗೆ ಯಾವ ಹೊಸ ಯೋಜನೆಗಳನ್ನು ಜಾರಿಗೆ ತಂದಿರುವುದಿಲ್ಲ.ಈಗಾಗಲೇ ಈ ಚಿತ್ರ ನಗರಿಗೆ ಹಿಮ್ಮಾವು ಹತ್ತಿರ ಜಾಗವನ್ನು ಗುರುತಿಸಿದ್ದು ಈ ಜಾಗಕ್ಕೆ ಯಾವುದೇ ತಕರಾರು ಸಹ ಇಲ್ಲದೆ ಸಾರ್ವಜನಿಕರು ಕೂಡ ಬಹಳ ಸಂತೋಷದಿಂದ ಸ್ವಾಗತಿಸಬೇಕು ಎಂದರು.ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವೈ ಡಿ ರಾಜಣ್ಣ ,ಪಾತಿ ಫೌಂಡೇಷನ್ ನ ಅಧ್ಯಕ್ಷರಾದ ಎಂಡಿ ಪಾರ್ಥ ಸಾರಥಿ ,ಸಾಮಾಜಿಕ ಹೋರಾಟಗಾರರಾದ ವಿಕ್ರಂ ಅಯ್ಯಂಗಾರ್ ,ರಾಕೇಶ್ ಶ್ರೀನಿವಾಸ್, ಲೋಹಿತ್ ,ಕೃಷ್ಣ, ರಘು ಎನ್ ಕಿರಣ್ ಗೌಡ ,ಚಕ್ರಪಣಿ, ಜಯಸಿಂಹ, ರವಿತೇಜ ,ದುರ್ಗಾ ಪ್ರಸಾದ್ ,ಹಾಗೂ ಇನ್ನಿತರರು ಹಾಜರಿದ್ದರು…

LEAVE A REPLY

Please enter your comment!
Please enter your name here

- Advertisment -

Most Popular

ಶಿಥಿಲಾವಸ್ಥೆಯಲ್ಲಿರುವ ಈ ಕಟ್ಟಡಕ್ಕೆ ಮುಕ್ತಿ ಸಿಗುವುದೇ…?

ಬೆಂಗಳೂರಿನಲ್ಲಿ ಕಟ್ಟಡ ಉರುಳಿ ಬಿದ್ದು ನಡೆದ ದುರಂತದಿಂದ ಮೈಸೂರು ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡಿದೆ.ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಸಮೀಕ್ಷೆ ನಡೆಸುತ್ತಿದೆ.ಅಪಾಯದ ಅಂಚಿನಲ್ಲಿರುವ ಕಟ್ಟಡಗಳನ್ನ ಗುರುತಿಸುತ್ತಿದೆ. ಈಗಾಗಲೇ 100...

ಚಾಮುಂಡಿಬೆಟ್ಟದಲ್ಲಿ ಜಾತ್ರಾ ಸಂಭ್ರಮ…ಯದುವೀರ್ ರಿಂದ ಚಾಲನೆ…

ಮೈಸೂರು ಇಂದು ಚಾಮುಂಡಿ ಬೆಟ್ಟದಲ್ಲಿ ಜಾತ್ರೆ ಸಂಭ್ರಮ ಮನೆ ಮಾಡಿತ್ತು.ಶ್ರೀ ಚಾಮುಂಡೇಶ್ವರಿ ಅಮ್ಮನವರ ರಥೋತ್ಸವ ಸಾಂಪ್ರದಾಯಿಕವಾಗಿ ನೆರವೇರಿತು.ರಾಜವಂಶಸ್ಥ ಯದುವೀರ್ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.ನಾಡದೇವಿಯ...

ಮೈಸೂರು,ಅ.18:- ಪೊಲೀಸರು ಜನಸ್ನೇಹಿಗಳಷ್ಟೇ ಅಲ್ಲ, ಮನಸ್ಸಿನಲ್ಲಿರುವ ದುಗುಡ-ದುಮ್ಮಾನಗಳನ್ನು, ಸಮಸ್ಯೆಯನ್ನು ಪರಿಹರಿಸುತ್ತಾರೆ. ಅವರಿಗೂ ಮಾನವೀಯತೆ ಇದೆ. ಯಾರೂ ಅಪರಾಧ ಮಾಡಬಾರದು. ಅದಕ್ಕಾಗಿ ಜ್ಞಾನ ಸಂಗ್ರಹಿಸಿ ಮನಸ್ಸನ್ನು ತಿಳಿಗೊಳಿಸಿಕೊಳ್ಳಿ ಎಂದು ಠಾಣೆಯಲ್ಲಿಯೇ ಪುಸ್ತಕಗಳನ್ನೊದಗಿಸಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ...

ಮೈಸೂರು ವಿವಿಪುರಂ ಪೊಲೀಸ್ ಠಾಣೆಯಲ್ಲಿಯೇ ಸಣ್ಣದೊಂದು ಕಬೋರ್ಡ್ ಸಿದ್ಧಪಡಿಸಿ ಅಲ್ಲಿ ಇನ್ನೂರಕ್ಕಿಂತಲೂ ಹೆಚ್ಚು ಪುಸ್ತಕಗಳನ್ನಿರಿಸಿದ್ದಾರೆ. ಅವರು ಹೇಳೋದಿಷ್ಟೇ. ಪೊಲೀಸರೆಂದರೆ ಭಯಪಡಬೇಕಾಗಿಲ್ಲ. ಅವರು ಕೂಡ ನಿಮ್ಮಂತೆಯೇ...

18 ಅಡಿ ಎತ್ತರದ ಶ್ರೀ ಸುಭ್ರಹ್ಮಣ್ಯೇಶ್ವರ ಶಿಲಾಮೂರ್ತಿ ರೆಡಿ…ಯದುವೀರ್ ರಿಂದ ಪುಷ್ಪಾರ್ಚನೆ…

ಮೈಸೂರಿನ ನಂಜನಗೂಡು ತಾಲ್ಲೂಕಿನ ದೊಡ್ಡ ಕೌಲಂದೆ ಹೋಬಳಿ ಗಟ್ಟವಾಡಿ ಗ್ರಾಮದಲ್ಲಿ 36 ಅಡಿ ಎತ್ತರದಲ್ಲಿ 18 ಅಡಿಯ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಶಿಲಾಮೂರ್ತಿಯನ್ನು ಪ್ರತಿಷ್ಠಾಪಿಸಲು...

Recent Comments