32 C
Mysore
Wednesday, September 22, 2021
Home All News ಸ್ವಚ್ಚ ಸರ್ವೇಕ್ಷಣ್ 2020...ಸುತ್ತೂರು ಶಾಖಾ ಮಠದಲ್ಲಿ ಸರ್ವಧರ್ಮ ಗುರುಗಳ ಸಮಾವೇಶ...

ಸ್ವಚ್ಚ ಸರ್ವೇಕ್ಷಣ್ 2020…ಸುತ್ತೂರು ಶಾಖಾ ಮಠದಲ್ಲಿ ಸರ್ವಧರ್ಮ ಗುರುಗಳ ಸಮಾವೇಶ…

ಸ್ವಚ್ಛ ಸರ್ವೇಕ್ಷಣ್ ಅಭಿಯಾನ ಪ್ರಗತಿಯಲ್ಲಿರುವ ಹಿನ್ನೆಲೆ
ಮೈಸೂರು ನಗರವನ್ನು ನಂಬರ್ ಒನ್ ಸ್ವಚ್ಚತಾ ನಗರವನ್ನಾಗಿಸಲು ಮಹಾನಗರ ಪಾಲಿಕೆಯಿಂದ ವಿವಿಧ ಕಾರ್ಯಕ್ರಮಗಳು ಆಯೋಜನೆ ಮಾಡಲಾಗಿದೆ.
ಇಂದು ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಸರ್ವಧರ್ಮ ಗುರುಗಳ ಸಮಾವೇಶ ಆಯೋಜನೆ ಮಾಡಲಾಗಿತ್ತು.
ಸುತ್ತೂರು ಮಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಹೊಸ ಮಠದ ಚಿದಾನಂದ ಸ್ವಾಮೀಜಿ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ ಸೇರಿದಂತೆ ಇತರ ಧರ್ಮಗುರುಗಳು ಭಾಗಿಯಾಗಿದ್ದರು.
ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಮೇಯರ್ ಪುಷ್ಪಲತಾ ಜಗನ್ನಾಥ್, ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಮೈಸೂರು ಮಹಾನಗರ ಪಾಲಿಕೆ ಸದಸ್ಯರು ಸೇರಿದಂತೆ ಇತರ ಪ್ರಮುಖರು ಉಪಸ್ಥಿತಿ ಇದ್ದರು.

ಸ್ವಚ್ಚತಾ ನಗರಿಗಳ ಪಟ್ಟಿಯಲ್ಲಿ ಮೈಸೂರು ಮೊದಲ ಸ್ಥಾನ ಗಳಿಸಲು ಪ್ರತಿಯೊಬ್ಬ ನಾಗರಿಕರು ಕೈ ಜೋಡಿಸಬೇಕೆಂದು
ಮೈಸೂರಿನ ಜನತೆಗೆ ಸುತ್ತೂರು ಮಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕರೆ ನೀಡಿದರು.
ಪ್ಲಾಸ್ಟಿಕ್ ಬಳಕೆ ಮೇಲಿನ ನಿರ್ಬಂಧವನ್ನು ಕಡ್ಡಾಯವಾಗಿ ಪಾಲಿಸಬೇಕು.
ಕಸವನ್ನು ಎಲ್ಲೆಂದರಲ್ಲಿ ಸುರಿಯುತ್ತಿರುವ ಪ್ರವೃತ್ತಿ ಬಿಡಬೇಕು.
ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂಬ ಸಲಹೆ ನೀಡಿದರು.
ಶಾಲಾ ಮಟ್ಟದಲ್ಲಿಯೂ ಈ ಬಗ್ಗೆ ಜಾಗೃತಿ ಮೂಡಿಸಬೇಕು.
ಸ್ವಚ್ಚ ಸರ್ವೇಕ್ಷಣೆಯಲ್ಲಿ ಸಾರ್ವಜನಿಕರ ಪಾತ್ರವೂ ಪ್ರಮುಖವಾಗಿದೆ ಎಂದು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಯವರು ಅಭಿಪ್ರಾಯ ವ್ಯಕ್ತಪಡಿಸಿದರು

LEAVE A REPLY

Please enter your comment!
Please enter your name here

- Advertisment -

Most Popular

ಮೊರಾರ್ಜಿ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಕೋವಿಡ್..! ಚಾಮರಾಜನಗರ ಜಿಲ್ಲೆ‌ ಯಳಂದೂರಿನ ಆದರ್ಶ ಶಾಲೆಯ ಬಳಿಕ ಹನೂರಿನ ಮೊರಾರ್ಜಿ ವಸತಿ ಶಾಲೆಯ...

ಇಂದು ಅರಮನೆಗೆ ಎಂಟ್ರಿ ನೀಡಲಿರುವ ಗಜಪಡೆ…

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನಲೆಅಂಬಾವಿಲಾಸ ಅರಮನೆಯಂಗಳಕ್ಕೆ ಇಂದು ಗಜಪಡೆ ಪ್ರವೇಶ ಪಡೆಯಲಿದೆ.ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಎಂಟು ಆನೆಗಳು ಅರಮನೆಗೆ ಪ್ರವೇಶಿಸಲಿವೆ.ಮೈಸೂರಿನ ಅಶೋಕಪುರಂನ...

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ…ಗಜಪಯಣ ಆರಂಭ…

ವಿಶ್ವವಿಖ್ಯಾತ ಜಂಬೂಸವಾರಿಯ ಗಜ ಪಯಣ ಆರಂಭವಾಗಿದೆ.ನಾಗರಹೊಳೆ ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಲಾಗಿದೆ.ಅಭಿಮನ್ಯು ನೇತೃತ್ವದ 8 ಆನೆಗಳ ತಂಡ ಮೈಸೂರಿನತ್ತ ಪ್ರಯಾಣ ಬೆಳಸಲಿದೆ.ಗಜಪಡೆಗೆ ಸಾಂಪ್ರದಾಯಿಕ ಪೂಜೆ...

ನೆಲಸಮಗೊಂಡ ಶಕ್ತಿ ಮಹಾದೇವಿ ದೇವಾಲಯಕ್ಕೆ ಪ್ರತಾಪ್ ಸಿಂಹ ಭೇಟಿ…ಗ್ರಾಮಸ್ಥರಿಗೆ ಸಂಸದರ ಅಭಯ…

ಇತ್ತೀಚೆಗೆ ನೆಲಸಮಗೊಂಡ ನಂಜನಗೂಡಿನ ಹುಚ್ಚಗಣಿ ಗ್ರಾಮದ ಶಕ್ತಿ ಮಹಾದೇವಿ ದೇವಾಲಯಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಪರಿಶೀಲನೆ ನಡೆಸಿದರು.ದೇವಾಲಯ ನೆಲಸಮಗೊಳಿಸಿರುವ ಸ್ಥಳಕ್ಕೆ ಭೇಟಿ...

Recent Comments