32 C
Mysore
Wednesday, August 4, 2021
Home All News ಅನೈತಿಕ ಸಂಭಂಧಕ್ಕೆ ಲಾಕ್ ಡೌನ್ ಅಡ್ಡಿ…ಪತಿಯನ್ನ ಕೊಂದ ಪತ್ನಿ ಪ್ರಿಯಕರ ಅಂದರ್…

ಅನೈತಿಕ ಸಂಭಂಧಕ್ಕೆ ಲಾಕ್ ಡೌನ್ ಅಡ್ಡಿ…ಪತಿಯನ್ನ ಕೊಂದ ಪತ್ನಿ ಪ್ರಿಯಕರ ಅಂದರ್…

ಲಾಕ್ ಡೌನ್ ಸಂಧರ್ಭದಲ್ಲಿ ಅನೈತಿಕ ಸಂಭಂಧಕ್ಕೆ ಅಡ್ಡಿಯಾದ ಪತಿಯನ್ನ ಪ್ರಿಯಕರನ ಜೊತೆ ಸೇರಿ ಕೊಂದ ಪತ್ನಿ ಅಂದರ್ ಆಗಿದ್ದಾಳೆ.ಪ್ರಿಯತಮೆಗೆ ಸಾಥ್ ನೀಡಿದ ಪ್ರಿಯಕರನೂ ಸಹ ಜೈಲು ಪಾಲಾಗಿದ್ದಾನೆ.ಹುಬ್ಬಳ್ಳಿಯ ರಾಣೆಬೆನ್ನೂರು ರೈಲ್ವೆ ಪೊಲೀಸರ ತನಿಖೆಯಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.ಪತ್ನಿಯ ಕುತಂತ್ರಕ್ಕೆ ಬಲಿಯಾದವರು ಚಂದ್ರಪ್ಪ ಲಾಮಾಣಿ.ಕೊಂದು ಸಿಕ್ಕಿಬಿದ್ದವರು ಶೋಭಾ ಹಾಗೂ ದಿಳ್ಳೆಪ್ಪ ಯಮುನಪ್ಪ.ಚಂದ್ರಪ್ಪ ಲಮಾಣಿ ಕೂಲಿ ಕೆಲಸದ ನಿಮಿತ್ತ ಮನೆ ಬಿಟ್ಟರೆ ೩ ತಿಂಗಳ ನಂತರ ವಾಪಸ್ ಬರುತ್ತಿದ್ದರು.ಈ ಸಮಯದಲ್ಲಿ ಪತ್ನಿ ಶೋಭಾ ಅದೇ ಗ್ರಾಮದ ದಿಳ್ಳೆಪ್ಪ ಯಮುನಪ್ಪ ಜೊತೆ ಅಕ್ರಮ ಸಂಭಂಧ ಬೆಳೆಸಿದ್ದಳು.
ಲಾಕ್ ಡೌನ್ ಘೋಷಣೆಯಾದ ಹಿನ್ನಲೆ ಚಂದ್ರಪ್ಪ ಲಮಾಣಿ ಮನೆಯಲ್ಲೇ ಉಳಿದುಕೊಂಡಿದ್ದಾರೆ.ಪತಿ ಮನೆಯಲ್ಲೇ ಉಳಿದ ಕಾರಣ ಅನೈತಿಕ ಸಂಭಂಧಕ್ಕೆ ಅಡ್ಡಿಯಾಗಿದೆ. ಅನೈತಿಕ ಸಂಭಂಧಕ್ಕೆ ಅಡ್ಡಿಯಾದ ಪತಿಯನ್ನ ಪ್ರಿಯಕರನ ಜೊತೆ ಸೇರಿ ಪತ್ನಿ ಶೋಭಾ ಉಸಿರುಗಟ್ಟಿಸಿ ಕೊಂದು ಹಾಕಿದ್ದಾಳೆ.ನಂತರ ಸಾಕ್ಷಿ ಮರೆಮಾಚಲು ರೈಲು ಹಳಿ ಮೇಲೆ ಮೃತದೇಹ ಬಿಸಾಕಿದ್ದಾರೆ.ಮೇಲ್ನೋಟಕ್ಕೆ ಆತ್ಮಹತ್ಯೆ ಎಂಬಂತೆ ಬಿಂಬಿಸಿದ್ದಾರೆ. ಮೇ ತಿಂಗಳಲ್ಲಿ ನಡೆದ ಕೊಲೆ ರಹಸ್ಯವನ್ನ ರೈಲ್ವೆ ಪೊಲೀಸರು ಬಯಲಿಗೆ ಎಳೆದಿದ್ದಾರೆ.ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಹುಬ್ಬಳ್ಳಿ ರೈಲ್ವೇ ಪೊಲೀಸರು ಆರೋಪಿಗಳ ಹೆಡೆಮುರಿಕಟ್ಟಿದ್ದಾರೆ…

LEAVE A REPLY

Please enter your comment!
Please enter your name here

- Advertisment -

Most Popular

ಮನೆಗಳ್ಳನ ಬಂಧನ…48,500/- ನಗದು ವಶ…

ಸರಗೂರು ಪೊಲೀಸರು ಕಾರ್ಯಾಚರಣೆ ನಡೆಸಿಮೈಸೂರು:ಮನೆಯ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಬಂಧಸಿದ್ದಾರೆ.ಸರಗೂರು ತಾಲೂಕಿನ ಕುಂದೂರು ಗ್ರಾಮದ ನಿವಾಸಿ ಮಾದೇಗೌಡ ಬಂಧಿತ ಆರೋಪಿಯಾಗಿದ್ದಾನೆ.ಬಂಧಿತನಿಂದ 48,500...

ವಿ.ವಿ.ಪುರಂ ಪೊಲೀಸರ ಕಾರ್ಯಾಚರಣೆ ಬೈಕ್ ಕಳ್ಳರ ಬಂಧನ…9 ಬೈಕ್ ವಶ…

ವಿವಿ ಪುರಂ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಮೂವರು ಬೈಕ್ ಕಳ್ಳರ ಬಂಧನವಾಗಿದೆ.ಬಂಧಿತರಿಂದ 5.32 ಲಕ್ಷ ಮೌಲ್ಯದ 9 ಬೈಕ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.ಎರಡು ಪ್ರತ್ಯೇಕ...

ಸಿ.ಸಿ.ಬಿ.ಪೊಲೀಸರ ಕಾರ್ಯಾಚರಣೆ…4 ಕುಖ್ಯಾತ ಸರಗಳ್ಳರ ಬಂಧನ…

ಸಿಸಿಬಿ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ನಾಲ್ವರು ಕುಖ್ಯಾತ ಸರಗಳ್ಳರ ಬಂಧನವಾಗಿದೆ.ಆರೋಪಿಗಳಿಂದ 5,80,000 ರೂ ಮೌಲ್ಯದ ಚಿನ್ನಾಭರಣ ಹಾಗೂ 2 ದ್ವಿಚಕ್ರವಾಹನಗಳ ವಶಪಡಿಸಿಕೊಳ್ಳಲಾಗಿದೆ.ಶಾಂತಿನಗರದ ಅಯಾಜ್...

ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ನಗದು ಚಿನ್ನ ದರೋಡೆ…

ಮನೆಗೆ ನುಗ್ಗಿ ಮಾಲೀಕರಿಗೆ ಹಲ್ಲೆ ನಡೆಸಿ ನಗದು ಸೇರಿದಂತೆ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಹುಣಸೂರು ಪಟ್ಟಣದಲ್ಲಿ ನಡೆದಿದೆ.ಸುಮನ್ ಫಂಕ್ಷನ್ ಹಾಲ್ ನ...

Recent Comments