32 C
Mysore
Monday, June 21, 2021
Home All News ಮೇಲುಕೋಟೆ ವೈರಮುಡಿ ಉತ್ಸವಕ್ಕೆ ಕ್ಷಣಗಣನೆ…ಪಾಲಿಸಬೇಕಾದ ನಿಯಮಗಳಿವು…

ಮೇಲುಕೋಟೆ ವೈರಮುಡಿ ಉತ್ಸವಕ್ಕೆ ಕ್ಷಣಗಣನೆ…ಪಾಲಿಸಬೇಕಾದ ನಿಯಮಗಳಿವು…

ನಾಳೆ ಮೇಲುಕೋಟೆ ಉತ್ಸವ ನಡೆಯಲಿದೆ.ಉತ್ಸವದಲ್ಲಿ ಪಾಲ್ಗೊಳ್ಳುವರು ಹಲವು ನಿಯಮಗಳನ್ನ ಪಾಲಿಸಬೇಕಿದೆ. ಉತ್ಸವದಲ್ಲಿ ಕಟ್ಟು ನಿಟ್ಟಾಗಿ ಕೊರೋನಾ ನಿಯಮಗಳ ಪಾಲನೆಗೆ ಕಠಿಣ ಕ್ರಮಗಳನ್ನ ರೂಪಿಸಲಾಗಿದೆ.
ಕೊರೋನಾ ಅಟ್ಟಹಾಸ ಹಿನ್ನೆಲೆಯಲ್ಲಿ ಕಳೆದ ವರ್ಷ ವಿಶ್ವ ವಿಖ್ಯಾತ ಮೇಲುಕೋಟೆ ವೈರಮುಡಿ ಉತ್ಸವ ರದ್ದಾಗಿತ್ತು. ಈ ಬಾರಿಯೂ ಕೊರೋನಾ ಕರಿ ನೆರಳು ಮೇಲುಕೋಟೆ ವೈರಮುಡಿ ಉತ್ಸವದ ಮೇಲೆ ಆವರಿಸಿದೆ. ಕೊರೋನಾ ಆತಂಕದ ನಡುವೆಯೂ ಈ ಬಾರಿ ಮೇಲುಕೋಟೆ ವಿಶ್ವ ವಿಖ್ಯಾತ ವೈರಮುಡಿ ಉತ್ಸವವನ್ನ ಸರಳ ಹಾಗೂ ಸಾಂಪ್ರದಾಯಿಕವಾಗಿ, ಕೊರೋನಾ ನಿಯಮಗಳ ಪಾಲನೆ ಜೊತೆಗೆ ಆಚರಿಸಲು ನಿರ್ಧರಿಸಲಾಗಿದೆ.
ಹೊರಗಿನ ಭಕ್ತರಿಗೆ ಪ್ರವೇಶ ನಿಷೇಧ ಹೇರಲಾಗಿದೆ.
ಪ್ರತಿ ವರ್ಷ ವಿಶ್ವ ವಿಖ್ಯಾತ ಮೇಲುಕೋಟೆ ವೈರಮುಡಿ ಉತ್ಸವ ನೋಡಲು ದೇಶದ ನಾನಾ ರಾಜ್ಯಗಳು ಸೇರಿದಂತೆ ವಿದೇಶಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದರು. ಆದರೆ ಈ ಬಾರಿ ಮೇಲುಕೋಟೆ ವೈರಮುಡಿ ಉತ್ಸವದಲ್ಲಿ ವಿದೇಶಿಗರು, ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯ ಭಕ್ತರ ಆಗಮನವನ್ನ ನಿರ್ಬಂಧಿಸಲಾಗಿದೆ. ಮಂಡ್ಯ ಜಿಲ್ಲೆಯ ಭಕ್ತರಿಗೆ ಮಾತ್ರ ವೈರಮುಡಿ ಉತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಉತ್ಸವದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ತಮ್ಮ ಯಾವುದಾದರೊಂದು ಗುರುತಿನ ಚೀಟಿ ತರಲೇಬೇಕಿದೆ. ಇನ್ನು ದೇವಾಲಯದ ಒಳಗೆ 200 ಮಂದಿ ಹಾಗೂ ಹೊರಭಾಗದಲ್ಲಿ 2 ಸಾವಿರ ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಬ್ಬರಿಗೂ ಕೊವಿಡ್ ಟೆಸ್ಟ್ ಕಡ್ಡಾಯವಾಗಿದೆ. ಮಾಸ್ಕ್ ಧಾರಣೆ ಹಾಗೂ ಸಾಮಾಜಿಕ ಅಂತರವನ್ನ ಕಡ್ಡಾಯವಾಗಿ ಪಾಲಿಸಬೇಕಿದೆ. ಹೊರಗಿನ ಭಕ್ತರ ಅನುಕೂಲಕ್ಕಾಗಿ ಮಂಡ್ಯ ಡಿಸಿ ಫೇಸ್ಬುಕ್ ಪೇಜ್ ನಲ್ಲಿ ವೈರಮುಡಿ ಉತ್ಸವದ ನೇರ ಪ್ರಸಾರ ಕೂಡ ಮಾಡಲಾಗುತ್ತಿದೆ.
ರಾತ್ರಿ 12ರವರೆಗೆ ಮಾತ್ರ ಉತ್ಸವಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಈ ವರ್ಷ ತಡರಾತ್ರಿ 12ರವರೆಗೆ ಮಾತ್ರ ವೈರಮುಡಿ ಉತ್ಸವ ನಡೆಸಲಾಗುತ್ತದೆ. ಉತ್ಸವಕ್ಕಾಗಿ ಈಗಾಗಲೇ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಬೆಟ್ಟದ ಯೋಗನರಸಿಂಹಸ್ವಾಮಿ ದೇಗಲು, ಚಲುವನಾರಾಯಣ ಸ್ವಾಮಿ ದೇವಸ್ಥಾನ, ರಾಜಬೀದಿಗಳು ಬಣ್ಣ ಬಣ್ಣದ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಕಟ್ಟು ನಿಟ್ಟಿನ ಕೊವಿಡ್ ನಿಯಮ ಪಾಲನೆಗೆ ಹಾಗೂ ಮುಂಜಾಗ್ರತ ಕ್ರಮವಾಗಿ ಪೊಲೀಸ್ ಇಲಾಖೆ ಕೂಡ ಸನ್ನದ್ಧವಾಗಿದೆ. ಭದ್ರತೆಗಾಗಿ ಬ್ಯಾರಿಕೇಡ್ ಗಳನ್ನ ಅಳವಡಿಸಲಾಗಿದೆ. ವೈರಮುಡಿ ಉತ್ಸವದ ಕರ್ತವ್ಯಕ್ಕಾಗಿ 650ಕ್ಕೂ ಹೆಚ್ಚು ಪೋಲಿಸ್ ಸಿಬ್ಬಂದಿಗಳು ಹಾಗೂ ಅಧಿಕಾರಿಗಳನ್ನ ನಿಯೋಜಿಸಲಾಗಿದೆ. 4 DYSP, 16 CPI, 31 PSI, 100 ASI, 432 ಪೇದೆಗಳನ್ನ ನೇಮಿಸಲಾಗಿದ್ದು ಹೆಚ್ಚುವರಿಯಾಗಿ 2 KSRP, 9ಡಿಎಆರ್, 2 ತುರ್ತು ನಿಗಾ ಘಟಕಗಳನ್ನ ನಿಯೋಜಿಸಲಾಗಿದೆ. ಕೊರೋನ ಆತಂಕದ ನಡುವೆಯೂ ವೈರಮುಡಿ ಉತ್ಸವಕ್ಕೆ ಜಿಲ್ಲಾಡಳಿತ ಸಜ್ಜಾಗಿದೆ..

LEAVE A REPLY

Please enter your comment!
Please enter your name here

- Advertisment -

Most Popular

ಕತ್ತು ಕುಯ್ದುಕೊಂಡು ಮಾನಸಿಕ ಅಸ್ವಸ್ಥ ಆತ್ಮಹತ್ಯೆ…

ಮಾನಸಿಕ ಅಸ್ವಸ್ಥನೊಬ್ಬ ಕತ್ತುಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆ ತಿ. ನರಸೀಪುರ ತಾಲ್ಲೂಕಿನ ಕನ್ನಳ್ಳಿ ಮೋಳೆ ಗ್ರಾಮದಲ್ಲಿ ನಡೆದಿದೆ.ಶಿವಣ್ಣ (42) ಮೃತ ದುರ್ದೈವಿ.ಗ್ರಾಮದಲ್ಲಿದ್ದ...

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ…

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ಯಾಕನೂರು ಗ್ರಾಮದಲ್ಲಿ ನಡೆದಿದೆ.ಕಾವ್ಯ(೨೧)ಮೃತ ದುರ್ದೈವಿಯಾಗಿದ್ದಾರೆ.ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಒಂದೂವರೆ ವರ್ಷದ...

ಶಿಕ್ಷಕರಿಗೆ ಲಸಿಕಾ ಅಭಿಯಾನ…ಸಾಮಾಜಿಕ ಅಂತರ ಮಾಯ…

ಹುಣಸೂರಿನ ಶಿಕ್ಷಕರ ಭವನದಲ್ಲಿ ಶಿಕ್ಷಕರಿಗಾಗಿ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.ನೂರಾರು ಶಿಕ್ಷಕರು ಲಸಿಕೆ ಪಡೆಯಲು ಸೇರಿದ್ದರು.ಆದರೆ ಸ್ಥಳದಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು.ವಿದ್ಯಾವಂತ ಶಿಕ್ಷಕರೇ ಹೀಗೆ ವರ್ತಿಸಿದರೆ...

ನಂಜನಗೂಡು ತಾಲೂಕಿನ ಅರಿಯೂರು ಗ್ರಾಮ ಸೀಲ್ ಡೌನ್…ಮೂರ್ನಾಲ್ಕು ದಿನದಲ್ಲಿ 35 ಪಾಸಿಟಿವ್ ಕೇಸ್…

ಮೂರ್ನಾಲ್ಕು ದಿನದಲ್ಲಿ 35 ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನಲೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಅರಿಯೂರು ಗ್ರಾಮ ಸೀಲ್ ಡೌನ್ ಮಾಡಲಾಗಿದೆ.ತಾಲೂಕು ಆಡಳಿತದಿಂದ ನಿರ್ಧಾರ...

Recent Comments