32 C
Mysore
Monday, June 21, 2021
Home All News ಮರಕ್ಕೆ ಕಾರು ಡಿಕ್ಕಿ... ಸಿ.ಆರ್.ಪಿ.ಎಫ್.ಯೋಧ ಸಾವು

ಮರಕ್ಕೆ ಕಾರು ಡಿಕ್ಕಿ… ಸಿ.ಆರ್.ಪಿ.ಎಫ್.ಯೋಧ ಸಾವು

 

ಮದ್ಯರಾತ್ರಿಯಲ್ಲಿ ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿ ಹೊಡೆದು ಪರಿಣಾಮ ಸಿ.ಆರ್.ಪಿ.ಎಫ್.ಯೋಧ ಸ್ಥಳದಲ್ಲೇ ಮೃತಪಟ್ಟ ಘಟನೆ ಮೈಸೂರು-ಬಂಟ್ವಾಳ ಹೆದ್ದಾರಿಯ ಹುಣಸೂರು ತಾಲೂಕಿನ ಅರಸುಕಲ್ಲಹಳ್ಳಿ ಬಳಿ ಶುಕ್ರವಾರ ಮದ್ಯರಾತ್ರಿ ನಡೆದಿದೆ.
ಮೂಲತ: ಪಿರಿಯಾಪಟ್ಟಣ ತಾಲೂಕಿನ ಗೊರಳ್ಳಿಯ ಅಣ್ಣಯ್ಯ ಶೆಟ್ಟಿ (೩೫) ಮೃತ ದುರ್ದೈವಿಯಾಗಿದ್ದಾರೆ. ಸಿ.ಆರ್.ಪಿ.ಎಫ್.ಯೋಧನಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ.
ಪ್ರಸ್ತುತ ಮಹರಾಷ್ಟ್ರದ ನಕ್ಸಲ್ ಏರಿಯಾದ ಗಡ್ಸರ್‌ನಲ್ಲಿ ೧೪ವರ್ಷಗಳಿಂದ ಯೋಧರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು ಎರಡು ದಿನಗಳ ಹಿಂದಷ್ಟೆ ರಜೆ ಮೇಲೆ ಊರಿಗೆ ಬಂದಿದ್ದರು. ಗುರುವಾರ ಮೈಸೂರಿನಲ್ಲಿ ಕೆಲಸ ಮುಗಿಸಿಕೊಂಡು ತಮ್ಮ ಕಾರಿನಲ್ಲಿ ರಾತ್ರಿ ಊರಿಗೆ ತೆರಳುತ್ತಿದ್ದ ವೇಳೆ ತಾಲೂಕಿನ ಕಲ್ಲಹಳ್ಳಿ ಗೇಟ್‌ ಬಳಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ. ಶುಕ್ರವಾರ ಮುಂಜಾನೆ ವಿಷಯ ತಿಳಿದ ಗ್ರಾಮಾಂತರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸ್ವಗ್ರಾಮ ಗೊರಳ್ಳಿಯಲ್ಲಿ ಯೋಧನ ಅಂತ್ಯಕ್ರಿಯೆ ನೆರವೇರಿದೆ..

LEAVE A REPLY

Please enter your comment!
Please enter your name here

- Advertisment -

Most Popular

ಕತ್ತು ಕುಯ್ದುಕೊಂಡು ಮಾನಸಿಕ ಅಸ್ವಸ್ಥ ಆತ್ಮಹತ್ಯೆ…

ಮಾನಸಿಕ ಅಸ್ವಸ್ಥನೊಬ್ಬ ಕತ್ತುಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆ ತಿ. ನರಸೀಪುರ ತಾಲ್ಲೂಕಿನ ಕನ್ನಳ್ಳಿ ಮೋಳೆ ಗ್ರಾಮದಲ್ಲಿ ನಡೆದಿದೆ.ಶಿವಣ್ಣ (42) ಮೃತ ದುರ್ದೈವಿ.ಗ್ರಾಮದಲ್ಲಿದ್ದ...

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ…

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ಯಾಕನೂರು ಗ್ರಾಮದಲ್ಲಿ ನಡೆದಿದೆ.ಕಾವ್ಯ(೨೧)ಮೃತ ದುರ್ದೈವಿಯಾಗಿದ್ದಾರೆ.ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಒಂದೂವರೆ ವರ್ಷದ...

ಶಿಕ್ಷಕರಿಗೆ ಲಸಿಕಾ ಅಭಿಯಾನ…ಸಾಮಾಜಿಕ ಅಂತರ ಮಾಯ…

ಹುಣಸೂರಿನ ಶಿಕ್ಷಕರ ಭವನದಲ್ಲಿ ಶಿಕ್ಷಕರಿಗಾಗಿ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.ನೂರಾರು ಶಿಕ್ಷಕರು ಲಸಿಕೆ ಪಡೆಯಲು ಸೇರಿದ್ದರು.ಆದರೆ ಸ್ಥಳದಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು.ವಿದ್ಯಾವಂತ ಶಿಕ್ಷಕರೇ ಹೀಗೆ ವರ್ತಿಸಿದರೆ...

ನಂಜನಗೂಡು ತಾಲೂಕಿನ ಅರಿಯೂರು ಗ್ರಾಮ ಸೀಲ್ ಡೌನ್…ಮೂರ್ನಾಲ್ಕು ದಿನದಲ್ಲಿ 35 ಪಾಸಿಟಿವ್ ಕೇಸ್…

ಮೂರ್ನಾಲ್ಕು ದಿನದಲ್ಲಿ 35 ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನಲೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಅರಿಯೂರು ಗ್ರಾಮ ಸೀಲ್ ಡೌನ್ ಮಾಡಲಾಗಿದೆ.ತಾಲೂಕು ಆಡಳಿತದಿಂದ ನಿರ್ಧಾರ...

Recent Comments