32 C
Mysore
Monday, June 21, 2021
Home All News ಗ್ರಾ.ಪಂ.ಅಧ್ಯಕ್ಷೆ ಆಯ್ಕೆ ನೆನೆಗುದಿಗೆ…ಅಭಿವೃದ್ದಿ ಕಾಣದೆ ಸಿಂಧುವಳ್ಳಿ ಗ್ರಾಮ ಸೊರಗಿದೆ…

ಗ್ರಾ.ಪಂ.ಅಧ್ಯಕ್ಷೆ ಆಯ್ಕೆ ನೆನೆಗುದಿಗೆ…ಅಭಿವೃದ್ದಿ ಕಾಣದೆ ಸಿಂಧುವಳ್ಳಿ ಗ್ರಾಮ ಸೊರಗಿದೆ…

ಗ್ರಾಮಪಂಚಾಯ್ತಿ ಅಧ್ಯಕ್ಷೆ ಆಯ್ಕೆ ಪ್ರಕ್ರಿಯೆ ನೆನೆಗುದಿಗೆ ಬಿದ್ದ ಕಾರಣ ಕಳೆದ ನಾಲ್ಕು ತಿಂಗಳಿಂದ ಅಭಿವೃದ್ದಿ ಕಾಣದ ನಂಜನಗೂಡು ತಾಲೂಕು ಸಿಂಧುವಳ್ಳಿ ಗ್ರಾಮ ಅನಾಥವಾಗಿದೆ.
ಕಳೆದ ಏಳೆಂಟು ತಿಂಗಳಿಂದ ಸಂಬಳವಿಲ್ಲದೆ ಗ್ರಾಮಪಂಚಾಯ್ತಿ ಸಿಬ್ಬಂದಿಗಳು ಹೈರಾಣರಾಗಿದ್ದಾರೆ.ಕೊರೊನಾದಿಂದ ಗ್ರಾಮಪಂಚಾಯ್ತಿ ವ್ಯಾಪ್ತಿಯ ನಾಲ್ಕು ಗ್ರಾಮಗಳು ತತ್ತರಿಸಿದ್ದರೂ ಸ್ಪಂದಿಸುವವರೇ ಇಲ್ಲವಾದಂತಾಗಿದೆ.
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿ ವರ್ತನೆಗೆ ಸಿಂಧುವಳ್ಳಿ ಗ್ರಾಮಪಂಚಾಯ್ತಿ ಕಾರ್ಯಾಲಯ ಅನಾಥವಾಗಿದೆ.
ಶೀಘ್ರದಲ್ಲಿ ಅಧ್ಯಕ್ಷರ ಆಯ್ಕೆ ಗೊಂದಲ ಪರಿಹರಿಸಿ ಸಿಬ್ಬಂದಿಗಳು ಹಾಗೂ ಗ್ರಾಮದ ಅಭಿವೃದ್ದಿಗೆ ಒತ್ತು ನೀಡುವಂತೆ ಆಗ್ರಹ ಹೆಚ್ಚಾಗಿದೆ.
ನ್ಯಾಯಾಲಯ ಮೆಟ್ಟಿಲೇರಿದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಇನ್ನೂ ಕಾಲವೇ ಕೂಡಿಬಂದಿಲ್ಲದಂತಾಗಿದೆ.ಸಮಸ್ಯೆ ಬಗೆಹರಿಸುವಂತೆ ಸಂಭಂಧ ಪಟ್ಟ ಅಧಿಕಾರಿಗಳಿಗೆ ನ್ಯಾಯಾಲಯವೇ ಸೂಚನೆ ನೀಡಿದರೂ ಕ್ಯಾರೆ ಎನ್ನದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷಿಸುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.ಫೆಬ್ರವರಿಯಲ್ಲಿ ಸಿಂಧುವಳ್ಳಿ ಗ್ರಾ.ಪಂ.ಅಧ್ಯಕ್ಷರ ಚುನಾವಣೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾಗಿ ಬಿಜೆಪಿ ಬೆಂಬಲಿತ ರೇವಮ್ಮ ಹಾಗೂ ಕಾಂಗ್ರೆಸ್ ಬೆಂಬಲಿತ ಲತಾ ಬಸಪ್ಪ ಸ್ಪರ್ಧಿಸಿದ್ದರು.
೧೫ ಸದಸ್ಯರ
ನ್ನೊಳಗೊಂಡ ಸಿಂಧುವಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನದ ಚುನಾವಣೆ ವೇಳೆ ಲತಾ ಬಸಪ್ಪ
೭ ಮತ ಪಡೆದರೆ. ರೇವಮ್ಮ೮ ಮತ ಪಡೆದಿದ್ದರು.
ಈ ಪೈಕಿ ರೇವಮ್ಮ ಮತ ಅಸಿಂಧುವಾಗಿತ್ತು.ಗುರಿತಿನ ಠಸ್ಸೆ ಹೊಡೆಯುವ ಬದಲು ರೇವಮ್ಮ ಹೆಬ್ಬೆಟ್ಟಿನ ಗುರುತು ಹಾಕಿದ್ದರು.ಸಹಜವಾಗೇ ರೇವಮ್ಮ ಮತವನ್ನ ಚುನಾವಣಾಧಿಕಾರಿಗಳು ಅಸಿಂಧು ಎಂದು ಘೋಷಿಸಿದ್ದರು.
ಅಂತಿಮವಾಗಿ ಇಬ್ಬರಿಗೂ ತಲಾ ೭ ಮತ ಬಂದಿತ್ತು.
ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಲಾಟರಿ ಮೂಲಕ ಲತಾ ಬಸಪ್ಪ ಅಧ್ಯಕ್ಷೆಯಾಗಿ ಆಯ್ಕೆಯಾದರು.
ಲತಾ ಬಸಪ್ಪ ಆಯ್ಕೆ ಪ್ರಶ್ನಿಸಿ ರೇವಮ್ನ ನ್ಯಾಯಾಲಯದ ಮೊರೆ ಹೋದರು.ಅಧ್ಯಕ್ಷ ಸ್ಥಾನ ಆಯ್ಕೆಗೆ
ತಡೆಯಾಜ್ಞೆ ನೀಡಿದ ನ್ಯಾಯಾಲಯ ನಂತರ ತೆರುವುಗೊಳಿಸಿತು.
ಶೀಘ್ರದಲ್ಲಿ ಅಧ್ಯಕ್ಷರನ್ನ ಆಯ್ಕೆ ಮಾಡುವಂತೆ ಸಂಭಂಧಪಟ್ಟ ಅಧಿಕಾರಿಗಳಿಗದ ಸೂಚನೆ ನೀಡಿತ್ತು.
ನ್ಯಾಯಾಲಯದ ಆದೇಶವಿದ್ದರೂ ಅಧ್ಯಕ್ಷ ಆಯ್ಕೆ ಮಾಡದ ಅಧಿಕಾರಿಗಳು ನಿರ್ಲಕ್ಷ್ಯತೆ ವಹಿಸಿದ್ದಾರೆ.
ಅಧ್ಯಕ್ಷನಿಲ್ಲದೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಭಿವೃದ್ದಿ ಕೆಲಸಗಳಿಗೆ ಬ್ರೇಕ್ ಬಿದ್ದಿದೆ.
ಸಂಬಳವಿಲ್ಲದ ಗ್ರಾಮ ಪಂಚಾಯ್ತಿ ಸಿಬ್ಬಂದಿಗಳು ಹೈರಾಣರಾಗಿದ್ದಾರೆ.ಕೊರೊನಾ ಬಗ್ಗೆ ಕಿಂಚತ್ತೂ ಕೆಲಸಗಳು ನಡೆದಿಲ್ಲ.
ಇನ್ನಾದ್ರೂ ಸಿಂಧುವಳ್ಳಿ ಗ್ರಾ.ಪಂ.ಅಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆಯುವುದೇ…?
ಗ್ರಾಮದ ಅಭಿವೃದ್ದಿ ಕೆಲಸಗಳು ಸಾಗುವುದೇ…?
ಕೊರೊನಾ ಕಪಿಮುಷ್ಟಿಯಲ್ಲಿ ಸಿಲುಕಿರುವ ಸಿಂಧುವಳ್ಳಿ ಗ್ರಾಮಕ್ಕೆ ಆಶಾಕಿರಣ ಮೂಡುವುದೇ…? ಎಂಬ ಪ್ರಶ್ನೆಗಳು ಮೂಡಿದೆ.ಸಿಬ್ಬಂದಿಗಳಂತೂ ಸಂಬಳವಿಲ್ಲದೆ ಸಮಸ್ಯೆಗೆ ಸಿಲುಕಿದ್ದಾರೆ. ಅನಾಥವಾದ ಸಿಂಧುವಳ್ಳಿ ಗ್ರಾಮಪಂಚಾಯ್ತಿಗೆ ಎಂದಿನಂತೆ ಕಾರ್ಯನಿರ್ವಹಿಸುವ ಸುಯೋಗ ಬರಬೇಕಿದೆ…

LEAVE A REPLY

Please enter your comment!
Please enter your name here

- Advertisment -

Most Popular

ಕತ್ತು ಕುಯ್ದುಕೊಂಡು ಮಾನಸಿಕ ಅಸ್ವಸ್ಥ ಆತ್ಮಹತ್ಯೆ…

ಮಾನಸಿಕ ಅಸ್ವಸ್ಥನೊಬ್ಬ ಕತ್ತುಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆ ತಿ. ನರಸೀಪುರ ತಾಲ್ಲೂಕಿನ ಕನ್ನಳ್ಳಿ ಮೋಳೆ ಗ್ರಾಮದಲ್ಲಿ ನಡೆದಿದೆ.ಶಿವಣ್ಣ (42) ಮೃತ ದುರ್ದೈವಿ.ಗ್ರಾಮದಲ್ಲಿದ್ದ...

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ…

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ಯಾಕನೂರು ಗ್ರಾಮದಲ್ಲಿ ನಡೆದಿದೆ.ಕಾವ್ಯ(೨೧)ಮೃತ ದುರ್ದೈವಿಯಾಗಿದ್ದಾರೆ.ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಒಂದೂವರೆ ವರ್ಷದ...

ಶಿಕ್ಷಕರಿಗೆ ಲಸಿಕಾ ಅಭಿಯಾನ…ಸಾಮಾಜಿಕ ಅಂತರ ಮಾಯ…

ಹುಣಸೂರಿನ ಶಿಕ್ಷಕರ ಭವನದಲ್ಲಿ ಶಿಕ್ಷಕರಿಗಾಗಿ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.ನೂರಾರು ಶಿಕ್ಷಕರು ಲಸಿಕೆ ಪಡೆಯಲು ಸೇರಿದ್ದರು.ಆದರೆ ಸ್ಥಳದಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು.ವಿದ್ಯಾವಂತ ಶಿಕ್ಷಕರೇ ಹೀಗೆ ವರ್ತಿಸಿದರೆ...

ನಂಜನಗೂಡು ತಾಲೂಕಿನ ಅರಿಯೂರು ಗ್ರಾಮ ಸೀಲ್ ಡೌನ್…ಮೂರ್ನಾಲ್ಕು ದಿನದಲ್ಲಿ 35 ಪಾಸಿಟಿವ್ ಕೇಸ್…

ಮೂರ್ನಾಲ್ಕು ದಿನದಲ್ಲಿ 35 ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನಲೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಅರಿಯೂರು ಗ್ರಾಮ ಸೀಲ್ ಡೌನ್ ಮಾಡಲಾಗಿದೆ.ತಾಲೂಕು ಆಡಳಿತದಿಂದ ನಿರ್ಧಾರ...

Recent Comments