32 C
Mysore
Monday, June 21, 2021
Home Devotional ನಂಜನಗೂಡು ದೇವಾಲಯದ ಪರ ಐತಿಹಾಸಿಕ ತೀರ್ಪು…25 ವರ್ಷಗಳ ಹೋರಾಟಕ್ಕೆ ಸಂದ ಜಯ…

ನಂಜನಗೂಡು ದೇವಾಲಯದ ಪರ ಐತಿಹಾಸಿಕ ತೀರ್ಪು…25 ವರ್ಷಗಳ ಹೋರಾಟಕ್ಕೆ ಸಂದ ಜಯ…

ದಕ್ಷಿಣಕಾಶಿ ನಂಜನಗೂಡು ಶ್ರೀಕಂಠೇಶ್ವರನ ದೇವಾಲಯದ ಪರ ಐತಿಹಾಸಿಕ ತೀರ್ಪು ಹೊರಬಿದ್ದಿದೆ.
ಟಿ.ನರಸೀಪುರ ಸಿವಿಲ್ ನ್ಯಾಯಾಲಯದಿಂದ ಐತಿಹಾಸಿಕ ತೀರ್ಪು ಪ್ರಕಟವಾಗಿದೆ.
25 ವರ್ಷಗಳ ವಾದವಿವಾದಕ್ಕೆ ಅಂತಿಮ ತೆರೆ ಎಳೆಯಲಾಗಿದೆ.
ಹರಕೆ ಮುಡಿ ಕೂದಲು ಸಂಪೂರ್ಣ ದೇವಾಲಯದ ಹಕ್ಕು ಎಂದು ಟಿ.ನರಸೀಪುರ ಸಿವಿಲ್ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದೆ.25 ವರ್ಷಗಳ ಕಾನೂನಾತ್ಮಕ ಹೋರಾಟಕ್ಕೆ ಸಂದ ಜಯ ಇದಾಗಿದೆ.
ನಂಜನಗೂಡು ದೇವಾಲಯ ಹಾಗೂ ನಯನ ಕ್ಷತ್ರಿಯ ಸಂಘದ ನಡುವೆ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿತ್ತು.
ಮುಡಿ ಕೂದಲು ತೆಗೆಯುವ ಹಾಗೂ ಮುಡಿ ಕೂದಲಿನ ಸಂಪೂರ್ಣ ಹಕ್ಕು ತಮ್ಮದೇ ಎಂದು ನಯನ ಕ್ಷತ್ರಿಯ ಸಂಘ ದಾವೆ ಹೂಡಿತ್ತು.
ಮುಡಿ ಕೂದಲಿನ‌ ಸಂಪೂರ್ಣ ಹಕ್ಕು ದೇವಾಲಯಕ್ಕೇ ಸೇರಿದ್ದೆಂದು ಆಡಳಿತ ಮಂಡಳಿ ಪ್ರತಿಪಾದಿಸಿತ್ತು.ಈ ಹಿಂದೆ ಸಿವಿಲ್ ನ್ಯಾಯಾಲಯದಲ್ಲಿ ತೀರ್ಪು ದೇವಾಲಯದ ಪರ ಬಂದಿದ್ದರೂ ನಯನ ಕ್ಷತ್ರಿಯ ಸಂಘದವರು
ಹೈಕೋರ್ಟ್ ಮೆಟ್ಟಿಲನ್ನ ಹತ್ತಿದ್ದರು.ಹೈಕೋರ್ಟ್ ನಿಂದ ವ್ಯಾಜ್ಯ ಮತ್ತೆ ಟಿ.ನರಸೀಪುರ ನ್ಯಾಯಾಲಯಕ್ಕೆ ಬಂದಿತ್ತು. ಎರಡೂ ಕಡೆ ವಾದವಿವಾದ ಆಲಿಸಿದ ನ್ಯಾಯಾಲಯ ಅಂತಿಮ ತೀರ್ಪು ಪ್ರಕಟಿಸಿದೆ.ನಯನ ಕ್ಷತ್ರಿಯ ಸಂಘಕ್ಕೆ ಮುಡಿ ಕೂದಲು ತೆಗೆಯುವ ಸೇವೆಯಿಂದ ವರ್ಷಕ್ಕೆ ಬರುತ್ತಿದ್ದ ಲಕ್ಷಾಂತರ ಆದಾಯಕ್ಕೆ ಕತ್ತರಿ ಬಿದ್ದಿದೆ.25 ವರ್ಷಗಳ ಹೋರಾಟದ ನಂತರ ಶ್ರೀಕಂಠೇಶ್ವರನ ದೇವಾಲಯದ ಪರ ಸಿವಿಲ್ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಇನ್ಮುಂದೆ ಮುಡಿ ಕೂದಲಿನ ಸಂಪೂರ್ಣ ಹಕ್ಕು ದೇವಾಲಯದ್ದಾಗಿದೆ.
ಮುಡಿ ಕೂದಲು ತೆಗೆಯುವ ಕಾರ್ಯ ಮಾತ್ರ ನಯನ ಕ್ಷತ್ರಿಯ ಸಂಘದ ಪಾಲಿಗೆ ಬಂದಿದೆ.ಈಗಾಗಲೇ ಹುಂಡಿ ಸಂಗ್ರಹದಲ್ಲಿ ಕೋಟಿ ಹಣ ಬಾಚುತ್ತಿರುವ ನಂಜನಗೂಡು ದೇವಸ್ಥಾನಕ್ಕೆ ಮುಡಿ ಕೂದಲಿನ ಸಂಪೂರ್ಣ ಹಕ್ಕಿನಿಂದ ಮತ್ತಷ್ಟು ಆದಾಯ ಹೆಚ್ಚಳವಾಗಲಿದೆ…

LEAVE A REPLY

Please enter your comment!
Please enter your name here

- Advertisment -

Most Popular

ಕತ್ತು ಕುಯ್ದುಕೊಂಡು ಮಾನಸಿಕ ಅಸ್ವಸ್ಥ ಆತ್ಮಹತ್ಯೆ…

ಮಾನಸಿಕ ಅಸ್ವಸ್ಥನೊಬ್ಬ ಕತ್ತುಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆ ತಿ. ನರಸೀಪುರ ತಾಲ್ಲೂಕಿನ ಕನ್ನಳ್ಳಿ ಮೋಳೆ ಗ್ರಾಮದಲ್ಲಿ ನಡೆದಿದೆ.ಶಿವಣ್ಣ (42) ಮೃತ ದುರ್ದೈವಿ.ಗ್ರಾಮದಲ್ಲಿದ್ದ...

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ…

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ಯಾಕನೂರು ಗ್ರಾಮದಲ್ಲಿ ನಡೆದಿದೆ.ಕಾವ್ಯ(೨೧)ಮೃತ ದುರ್ದೈವಿಯಾಗಿದ್ದಾರೆ.ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಒಂದೂವರೆ ವರ್ಷದ...

ಶಿಕ್ಷಕರಿಗೆ ಲಸಿಕಾ ಅಭಿಯಾನ…ಸಾಮಾಜಿಕ ಅಂತರ ಮಾಯ…

ಹುಣಸೂರಿನ ಶಿಕ್ಷಕರ ಭವನದಲ್ಲಿ ಶಿಕ್ಷಕರಿಗಾಗಿ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.ನೂರಾರು ಶಿಕ್ಷಕರು ಲಸಿಕೆ ಪಡೆಯಲು ಸೇರಿದ್ದರು.ಆದರೆ ಸ್ಥಳದಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು.ವಿದ್ಯಾವಂತ ಶಿಕ್ಷಕರೇ ಹೀಗೆ ವರ್ತಿಸಿದರೆ...

ನಂಜನಗೂಡು ತಾಲೂಕಿನ ಅರಿಯೂರು ಗ್ರಾಮ ಸೀಲ್ ಡೌನ್…ಮೂರ್ನಾಲ್ಕು ದಿನದಲ್ಲಿ 35 ಪಾಸಿಟಿವ್ ಕೇಸ್…

ಮೂರ್ನಾಲ್ಕು ದಿನದಲ್ಲಿ 35 ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನಲೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಅರಿಯೂರು ಗ್ರಾಮ ಸೀಲ್ ಡೌನ್ ಮಾಡಲಾಗಿದೆ.ತಾಲೂಕು ಆಡಳಿತದಿಂದ ನಿರ್ಧಾರ...

Recent Comments