32 C
Mysore
Wednesday, September 22, 2021
Home All News ರೋಹಿಣಿ ಸಿಂಧೂರಿ ವಿರುದ್ದ ನಾಳೆ ಏಕಾಂಗಿ ಪ್ರತಿಭಟನೆಗೆ ಸಾ.ರಾ.ಮಹೇಶ್ ನಿರ್ಧಾರ…

ರೋಹಿಣಿ ಸಿಂಧೂರಿ ವಿರುದ್ದ ನಾಳೆ ಏಕಾಂಗಿ ಪ್ರತಿಭಟನೆಗೆ ಸಾ.ರಾ.ಮಹೇಶ್ ನಿರ್ಧಾರ…

ಮೈಸೂರಿನ ದಟ್ಟಗಳ್ಳಿಯಲ್ಲಿ ಸಾ.ರಾ.ಕಲ್ಯಾಣ ಮಂಟಪ ರಾಜಾ ಕಾಲುವೆ ಮೇಲೆ ನಿರ್ಮಾಣವಾಗಿದೆ ಎಂದು ಆರೋಪಿಸಿರುವ ರೋಹಿಣಿ ಸಿಂಧೂರಿ ವಿರುದ್ದ ಶಾಸಕ ಸಾ.ರಾ.ಮಹೇಶ್ ನಾಳೆ ಏಕಾಂಗಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.ಪ್ರಾದೇಶಿಕ ಆಯುಕ್ತರಿಗೆ ಈ ಬಗ್ಗೆ ಪತ್ರ ಬರೆದಿದ್ದಾರೆ.ಇ-ಚಾನೆಲ್ ಒಂದರಲ್ಲಿ ರೋಹಿಣಿ ಸಿಂಧೂರಿ ಇಂತಹ ಹೇಳಿಕೆ ಕೊಟ್ಟಿದ್ದಾರೆ.ಹಾಗೊಮ್ಮೆ ಸಾ.ರಾ.ಚೌಲ್ಟ್ರಿ ರಾಜಾಕಾಲುವೆ ಮೇಲೆ ನಿರ್ಮಾಣವಾಗಿದ್ದಲ್ಲಿ ಸರ್ಕಾರದ ವಶಕ್ಕೆ ಪಡೆಯುವಂತೆ ತಿಳಿಸಿದ್ದಾರೆ.ಅಲ್ಲದೆ ರಾಜಾಕಾಲುವೆ ಮೇಲೆ ನಿರ್ಮಿಸಿರುವುದು ಸತ್ಯವೇ ಆಗಿದ್ದಲ್ಲಿ ಸಾರ್ವಜನಿಕ ಜೀವನದಿಂದ ನಿವೃತ್ತಿ ಘೋಷಿಸುವುದಾಗಿ ಉಲ್ಲೇಖಿಸಿದ್ದಾರೆ.ರೋಹಿಣಿ ಸಿಂಧೂರಿ ಆರೋಪ ಸುಳ್ಳಾಗಿದ್ದಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ…

ಒಟ್ಟಾರೆ ರೋಹಿಣಿ ಸಿಂಧೂರಿv/sಸಾ.ರಾ.ಮಹೇಶ್ ಫೈಟ್ ಗೆ ಇನ್ನೂ ಅಂತ್ಯ ಕಾಣಬೇಕಿದೆ.ರೋಹಿಣಿ ಸಿಂಧೂರಿ ವರ್ಗಾವಣೆ ಆದರೂ ಸಾ.ರಾ.ವಿರುದ್ದ ಮಾಡಿರುವ ಆರೋಪ ಶಾಸಕರನ್ನ ಕೆರಳಿಸಿದೆ.ಖುದ್ದು ಸಾ.ರಾ.ಮಹೇಶ್ ರವರೇ ತನಿಖೆ ಮಾಡುವಂತೆ ಮನವಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ…

LEAVE A REPLY

Please enter your comment!
Please enter your name here

- Advertisment -

Most Popular

ಮೊರಾರ್ಜಿ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಕೋವಿಡ್..! ಚಾಮರಾಜನಗರ ಜಿಲ್ಲೆ‌ ಯಳಂದೂರಿನ ಆದರ್ಶ ಶಾಲೆಯ ಬಳಿಕ ಹನೂರಿನ ಮೊರಾರ್ಜಿ ವಸತಿ ಶಾಲೆಯ...

ಇಂದು ಅರಮನೆಗೆ ಎಂಟ್ರಿ ನೀಡಲಿರುವ ಗಜಪಡೆ…

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನಲೆಅಂಬಾವಿಲಾಸ ಅರಮನೆಯಂಗಳಕ್ಕೆ ಇಂದು ಗಜಪಡೆ ಪ್ರವೇಶ ಪಡೆಯಲಿದೆ.ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಎಂಟು ಆನೆಗಳು ಅರಮನೆಗೆ ಪ್ರವೇಶಿಸಲಿವೆ.ಮೈಸೂರಿನ ಅಶೋಕಪುರಂನ...

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ…ಗಜಪಯಣ ಆರಂಭ…

ವಿಶ್ವವಿಖ್ಯಾತ ಜಂಬೂಸವಾರಿಯ ಗಜ ಪಯಣ ಆರಂಭವಾಗಿದೆ.ನಾಗರಹೊಳೆ ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಲಾಗಿದೆ.ಅಭಿಮನ್ಯು ನೇತೃತ್ವದ 8 ಆನೆಗಳ ತಂಡ ಮೈಸೂರಿನತ್ತ ಪ್ರಯಾಣ ಬೆಳಸಲಿದೆ.ಗಜಪಡೆಗೆ ಸಾಂಪ್ರದಾಯಿಕ ಪೂಜೆ...

ನೆಲಸಮಗೊಂಡ ಶಕ್ತಿ ಮಹಾದೇವಿ ದೇವಾಲಯಕ್ಕೆ ಪ್ರತಾಪ್ ಸಿಂಹ ಭೇಟಿ…ಗ್ರಾಮಸ್ಥರಿಗೆ ಸಂಸದರ ಅಭಯ…

ಇತ್ತೀಚೆಗೆ ನೆಲಸಮಗೊಂಡ ನಂಜನಗೂಡಿನ ಹುಚ್ಚಗಣಿ ಗ್ರಾಮದ ಶಕ್ತಿ ಮಹಾದೇವಿ ದೇವಾಲಯಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಪರಿಶೀಲನೆ ನಡೆಸಿದರು.ದೇವಾಲಯ ನೆಲಸಮಗೊಳಿಸಿರುವ ಸ್ಥಳಕ್ಕೆ ಭೇಟಿ...

Recent Comments