32 C
Mysore
Tuesday, November 30, 2021
Home All News ಜಿಲ್ಲಾಧಿಕಾರಿ ಬಗಾದಿ ಗೌತಮ್ ಭೇಟಿ ಮಾಡಿದ ವಿಶ್ವನಾಥ್…ರೋಹಿಣಿ ಸಿಂಧೂರಿ ಪರ ಭರ್ಜರಿ ಬ್ಯಾಟಿಂಗ್…

ಜಿಲ್ಲಾಧಿಕಾರಿ ಬಗಾದಿ ಗೌತಮ್ ಭೇಟಿ ಮಾಡಿದ ವಿಶ್ವನಾಥ್…ರೋಹಿಣಿ ಸಿಂಧೂರಿ ಪರ ಭರ್ಜರಿ ಬ್ಯಾಟಿಂಗ್…

ನೂತನ ಜಿಲ್ಲಾಧಿಕಾರಿ ಬಗಾದಿ ಗೌತಮ್ ರನ್ನ ಎಂಎಲ್ಸಿ ವಿಶ್ವನಾಥ್ ಇಂದು ಅವರ ಕಚೇರುಯಲ್ಲಿ ಭೇಟಿ ಮಾಡಿದರು.
ಜಿಲ್ಲಾಧಿಕಾರಿ ಜೊತೆ ಕೆಲಕಾಲ ಮಾತುಕತೆ ನಡೆಸಿದರು.
ಹಿಂದಿನ ಜಿಲ್ಲಾಧಿಕಾರಿ ಮಾಡಿರುವ ಭೂ ಅಕ್ರಮ ಆದೇಶದ ಜಾರಿಗೆ ತರುಂತೆ ಮನವಿ ಮಾಡಿದರು.
ಭೂಗಳ್ಳ ದಂಧೆಯ ಬಗ್ಗೆ ಆರ್.ಟಿ.ಐ ಕಾರ್ಯಕರ್ತರು ಸಲ್ಲಿಸಿರುವ ದೂರನ್ನು ಗಂಭೀರವಾಗಿ ಪರಿಗಣಿಸುವಂತೆ ಮನವಿ ಮಾಡಿದರು.

ಪ್ರಧಾನಿ ಮೋದಿ ಸೇರಿದಂತೆ ಎಲ್ಲರೂ ಕೊರೋನ ವಿರುದ್ದ ಹೋರಾಡುತ್ತಿದ್ದಾರೆ.
ಆದ್ರೆ ಮೈಸೂರಿನಲ್ಲಿ ಕೊರೋನ ಓಡಿಸಿ ಅಂದ್ರೆ ಐಎಎಸ್ ಅಧಿಕಾರಿಯನ್ನ ಓಡಿಸಿದ್ದಾರೆ.
ಕೊರೊನಾ ಓಡಿಸುತ್ತಿದ್ದ ಅಧಿಕಾರಿಯನ್ನೇ ಓಡಿಸಿಬಿಟ್ರಲ್ಲ ಎಂದು ವ್ಯಂಗ್ಯವಾಡಿದರು.
ಶಿಲ್ಪನಾಗ್‌ ಹೆಗಲ
ಮೇಲೆ ಬಂದೂಕು ಇಟ್ಟು ಸಿಂಧೂರಿಗೆ ಹೊಡೆಯುತ್ತಿದ್ದಾರೆ ಅಂತ ಹಿಂದೆಯೇ ಹೇಳಿದ್ದೆ.ಹಾಸನದಿಂದ‌ ಬಂದು ಇಲ್ಲಿ ರೋಹಿಣಿ ವಿರುದ್ದ ಆರೋಪ ಮಾಡ್ತಾರೆ ಅಂದ್ರೆ ಏನು ಅರ್ಥ.ಸಿಂಧೂರಿ ಶಿಲ್ಪನಾಗ್ ಇಬ್ಬರೂ ಒಳ್ಳೆಯ ಅಧಿಕಾರಿಗಳು.
ನಮ್ಮ ಸ್ವಾರ್ಥಕ್ಕಾಗಿ ಇಬ್ಬರನ್ನೂ ಹೊರಕ್ಕೆ ಹಾಕಿಸ್ತೀವಿ ಅಂದ್ರೆ ಹೇಗೆ.ನಿಮಗೆ ಯಾಕೆ ಹೆದರಿಕೆ, ಅವರ ಕೆಲಸವನ್ನ‌ ಮಾಡಲು ಬಿಡಿ.ಸಾ.ರಾ.ಮಹೇಶ್, ರಾಜೀವ್ ಇಬ್ಬರೂ ಬ್ಯುಸಿನೆಸ್ ಪಾಲುದಾರರು ಎಂಬುದು ನಿಜ*
ಇವರಿಬ್ಬರು ಯಾವ್ ಇಂಡಸ್ಟ್ರೀ‌ ಇಟ್ಟಿದ್ದಾರೆ..? ಎಷ್ಟು ಜನರಿಗೆ‌ ಕೆಲಸ ಕೊಟ್ಟಿದ್ದಾರೆ ಹೇಳಿ ಎಂದು ಪ್ರಶ್ನಿಸಿದರು.
ರಿಯಲ್ ಎಸ್ಟೇಟೇ ಒಂದು ಇಂಡಸ್ಟ್ರಿ.
ಇವರಿಬ್ಬರು ಹಿಂದೆ ಹೇಗಿದ್ರು ಈಗ ಹೇಗಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

ಸಿಂಧೂರಿ ಮೈಸೂರು ಸುತ್ತಮುತ್ತ ಭೂ ಅಕ್ರಮ ಬಯಲಿಗೆಳೆದಿದ್ದಾರೆ.
ವರ್ಗಾವಣೆಗೂ ಮುನ್ನ ನಾಲ್ಕು ಆದೇಶ ಹೊರಡಿಸಿದ್ದಾರೆ.
ಇದರ ಬಗ್ಗೆ ಕ್ರಮ ಆಗಬೇಕು, ನಾಲ್ಕು ಆದೇಶಗಳನ್ನೂ ಜಾರಿಗೊಳಿಸುವಂತೆ ಮನವಿ ಮಾಡಿದ್ದೇನೆ.
ವಿಜಯ್ ಭಾಸ್ಕರ್ ವರದಿ ಪಾಲಿಸುವಂತೆ ಹೇಳಿದ್ದೇನೆ.
ಮೈಸೂರು ಭೂ ಅಕ್ರಮದ ಬಗ್ಗೆ ರೋಹಿಣಿ ಸಿಂಧೂರಿಯನ್ನ ತನಿಖಾಧಿಕಾರಿಯನ್ನಾಗಿ ನೇಮಕ ಮಾಡಬೇಕು.
ರೋಹಿಣಿ ಸಿಂಧೂರಿ ನೇಮಿಸುವಂತೆ ನಾಡಿದ್ದು ಸಿಎಸ್ ಭೇಟಿಯಾಗಲಿದ್ದೇನೆ ಎಂದು ನಿರ್ಗಮಿತ ಜಿಲ್ಲಾಧಿಕಾರಿ ಪರ ಹೆಚ್.ವಿಶ್ವನಾಥ್ ಬೆಂಬಲಕ್ಕೆ ನಿಂತರು…

LEAVE A REPLY

Please enter your comment!
Please enter your name here

- Advertisment -

Most Popular

ಗ್ರಾಮಲೆಕ್ಕಾಧಿಕಾರಿಗಳ ಸಂಘದ ಹಂಗಾಮಿ ಜಿಲ್ಲಾಧ್ಯಕ್ಷರಾಗಿ ಎಂ.ನಾಗೇಶ್ ಕುಮಾರ್ ನೇಮಕ…

ಮೈಸೂರು ಜಿಲ್ಲೆ ಗ್ರಾಮಲೆಕ್ಕಾಧಿಕಾರಿಗಳ ಸಂಘಕ್ಕೆ ಹಂಗಾಮಿ ಅಧ್ಯಕ್ಷರಾಗಿ ಮೈಸೂರು ತಾಲೂಕು ಕಚೇರಿಯ ಗ್ರಾಮಲೆಕ್ಕಾಧಿಕಾರಿ ಎಂ.ನಾಗೇಶ್ ಕುಮಾರ್ ನೇಮಕವಾಗಿದ್ದಾರೆ.ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಬಿ.ದೊಡ್ಡಬಸಪ್ಪ ರೆಡ್ಡಿ...

ಜಮೀನಿನಲ್ಲಿ ಹಂದಿ ಕಳೇಬರ ಪತ್ತೆ…ಹುಲಿ ಬೇಟೆ ಶಂಕೆ…ಸ್ಥಳೀಯರಲ್ಲಿ ಆತಂಕ…

ಜಮೀನೊಂದರಲ್ಲಿ ಹಂದಿಯ ಕಳೇಬರ ಪತ್ತೆಯಾಗಿದೆ.ಹುಲಿ ಬೇಟೆಯಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಿಂದ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.ಹಂದಿಯ ಕಳೇಬರದ ಬಳಿ ಹುಲಿಯ ಹೆಜ್ಜೆ ಗುರುತುಗಳು...

ಅಣ್ಣನಿಂದಲೇ ತಂಗಿ ಮೇಲೆ ಅತ್ಯಾಚಾರ…ಸಾಂಸ್ಕೃತಿಕ ನಗರಿಯಲ್ಲಿ ಮತ್ತೊಂದು ಹೇಯ ಕೃತ್ಯ…

ಸಾಂಸ್ಕೃತಿಕ ನಗರಿಯಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹೇಯ ಕೃತ್ಯ ನಡೆದಿದೆ.ಸ್ವಂತ ತಂಗಿಯ ಮೇಲೇ ಅತ್ಯಾಚಾರವೆಸಗಿದ ಪಾಪಿ ಅಣ್ಣ ಪೊಲೀಸರ...

ಖಾಲಿ ಪತ್ರಕ್ಕೆ ಮೃತ ವ್ಯಕ್ತಿಯ ಹೆಬ್ಬೆಟ್ಟಿನ ಮುದ್ರೆ ಒತ್ತಿಸಿಕೊಂಡ ಕಿಲಾಡಿಗಳು…ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಸಿನಮೀಯ ದೃಶ್ಯ…

ಆಸ್ತಿ ಕಬಳಿಸಲು ಮೃತ ವ್ಯಕ್ತಿಯ ಹೆಬ್ಬೆಟ್ಟಿನ ಗುರುತನ್ನ ಪಡೆಯುವ ಸನ್ನಿವೇಶಗಳನ್ಮ ಸಿನಿಮಾಗಳಲ್ಲಿ ನೋಡಿದ್ದೇವೆ.ಆದ್ರೆ ನಿಜ ಜೀವನದಲ್ಲೂ ಅಂತಹ ಒಂದು ಪ್ರಕರಣ ನಡೆದಿರುವ ವೀಡಿಯೋ ಇದೀಗ...

Recent Comments