ಸಂಸದ ಪ್ರತಾಪ್ ಸಿಂಹ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಟ್ವೀಟ್ ವಾರ್ ಮುಂದುವರೆದಿದೆ.ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರದಲ್ಲಿ ಸಿದ್ದರಾಮಯ್ಯ ರವರ ಟ್ವೀಟ್ ಗೆ ಪ್ರತಾಪ್ ಸಿಂಹ ಟಾಂಗ್ ಕೊಡುತ್ತಾ ಬಂದಿದ್ದಾರೆ.ಸಿದ್ದರಾಮಯ್ಯ ಸಹ ಟ್ವೀಟ್ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ.
ಸಂಸದ ಪ್ರತಾಪ್ ಸಿಂಹಗೆ ರಾಜಕೀಯವಾಗಿ ಇನ್ನೂ ಪ್ರಬುದ್ಧತೆ ಬಂದಿಲ್ಲ. ಮೊದಲು ರೋಹಿಣಿ ಸಿಂಧೂರಿ ಪರ ಇದ್ದವರು ಯಾರು.? ಈಗ ಅವರು ತಮ್ಮ ನಿಲುವು ಬದಲಿಸಿದ್ದು ಏಕೆ.?
ಸ್ವಾರ್ಥಕ್ಕಾಗಿ ತಮ್ಮ ನಿಲುವುಗಳನ್ನು ಬದಲಾವಣೆ ಮಾಡಿಕೊಳ್ಳುವವರು ಅಪ್ರಬುದ್ಧ ರಾಜಕಾರಣಿಗಳು ಎಂದು ಪ್ರತಾಪ್ ಸಿಂಹ ಗೆ ಕಾಲೆಳೆದಿದ್ದಾರೆ. ಸಿದ್ದರಾಮಯ್ಯ ಅಭಿಪ್ರಾಯಕ್ಕೆ
ಟ್ವೀಟ್ಟರ್ ನಲ್ಲಿ ಸಂಸದ ಪ್ರತಾಪ್ ಸಿಂಹ ಟಾಂಗ್ ಕೊಟ್ಟಿದ್ದಾರೆ.
ಸರ್, ಮೈಸೂರು ಜನರ ಜೀವ ಕಾಪಾಡುವ ಸ್ವಾರ್ಥದಿಂದ ಮಾತಾಡಿದ್ದೇನೆ ಅಷ್ಟೇ,
ಅದು ವೈಯ್ಯಕ್ತಿಕವಲ್ಲ.
ಅಂಕಿ-ಅಂಶ ನೋಡಿ ಸಾರ್..!
ಕೊರೋನಾ ಪಾಸಿಟಿವಿಟಿ ರೇಟ್ ನಲ್ಲಿ ಮೈಸೂರು ನಂಬರ್-1 ಆಗಿರುವುದು.
ಟಾಪ್ ನಲ್ಲಿ ಇರುವುದು ನಮಗೆ ಶೋಭೆ ತರುತ್ತದೆಯೇ ಹೇಳಿ ಸಾರ್.? ಎಂದು ಉತ್ತರಿಸಿದ್ದಾರೆ…

