32 C
Mysore
Wednesday, September 22, 2021
Home All News ಮೈಸೂರಿನಲ್ಲಿ ರಾಜಾಕಾಲುವೇನೇ ಇಲ್ಲ..ರೋಹಿಣಿ ಸಿಂಧೂರಿ ಆರೋಪಕ್ಕೆ ಸಾ.ರಾ.ಮಹೇಶ್ …ತಿರುಗೇಟು

ಮೈಸೂರಿನಲ್ಲಿ ರಾಜಾಕಾಲುವೇನೇ ಇಲ್ಲ..ರೋಹಿಣಿ ಸಿಂಧೂರಿ ಆರೋಪಕ್ಕೆ ಸಾ.ರಾ.ಮಹೇಶ್ …ತಿರುಗೇಟು

ಸಾ.ರಾ.ಕನ್ವೆನ್ಷನ್ ಹಾಲ್ ರಾಜಾಕಾಲುವೆ ಮೇಲೆ ನಿರ್ಮಾಣವಾಗಿದೆ ಎಂಬ ರೋಹಿಣಿ ಸಿಂಧೂರಿ ಆರೋಪಕ್ಕೆ ಸಾ.ರಾ.ಮಹೇಶ್ ಇಂದು ಟಾಂಗ್ ಕೊಟ್ಟಿದ್ದಾರೆ.ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಸಾ.ರಾ.ಮಹೇಶ್ ನಿರ್ಗಮಿತ ಜಿಲ್ಲಾಧಿಕಾರಿ ವಿರುದ್ದ ಆರೋಪದ ಸುರಿಮಳೆ ಸುರಿಸಿದರು.
ಸಾಮಾಜಿಕ ಕಾರ್ಯಕರ್ತನನ್ನು ಮನೆಗೆ ಕರೆಸಿಕೊಂಡು ಕೆಲವು ಪತ್ರ ಪಡೆದಿದ್ದಾರೆ.
ಒಟ್ಟು ನಾಲ್ಕು ವಿಚಾರದಲ್ಲಿ ಆರೋಪ ಮಾಡಲಾಗಿದೆ.
ಅದರಲ್ಲಿ ಎರಡು ನೇರವಾಗಿ ನನಗೆ ಸಂಬಂಧಪಟ್ಟ ವಿಚಾರವಾಗಿದೆ.
ಆಯುಕ್ತರಿಗೆ 5 ರಂದು ಪತ್ರ ಬರೆದಿದ್ದಾರೆ.
ಪತ್ರ ಹೋಗಬೇಕಾದರೆ ಎಡಿಸಿ ಟಪಾಲಿನಲ್ಲಿ ಸಹಿ ಆಗಬೇಕು.
ಇದು ಕಡತ ಮನೆಗೆ ತರಿಸಿಕೊಂಡು ಸಹಿ ಮಾಡಿರುವುದು.
ಲಿಂಗಾಬುದಿ ಕೆರೆ ಬಳಿ ಅಕ್ರಮ ವಿಚಾರಕ್ಕೆ ಸಂಭಂಧಿಸಿದಂತೆ
ನನ್ನ ಪತ್ನಿ ಹೆಸರಲ್ಲಿ ಎರಡು ಎಕರೆ ಅಲ್ಲ ನಾಲ್ಕು ಎಕರೆ ಇದೆ.
ಇದನ್ನು 30 ವರ್ಷದ ಹಿಂದೆ ಖರೀದಿ ಮಾಡಿದ್ದೆ.
ಅರಣ್ಯ ಇಲಾಖೆಯವರೇ ಗಡಿ ನಿಗದಿ ಮಾಡಿದ್ದಾರೆ.
ಉಳಿಕೆ ಜಾಗದಲ್ಲಿ ತೆಂಗು ಮತ್ತು ಅಡಿಕೆ ಬೆಳೆದಿದ್ದೇನೆ.
ಇದಕ್ಕೆ ಕಮರ್ಷಿಯಲ್ ಬದಲಾವಣೆಗೆ ಫೀಸು ಕಟ್ಟಿದ್ದೇನೆ.
ಮೈಸೂರಿನಲ್ಲಿ ರಾಜ ಕಾಲುವೇನೇ ಇಲ್ಲ
ಇರುವುದು ನೀರು ಹರಿಯುವ ಹಳ್ಳಗಳು.
ದಿಶಾಂಕ್ ಆ್ಯಪ್ ಮೂಲಕ ತಪ್ಪು ಮಾಹಿತಿ ಡೆದು
ನೀಚ ಕೆಲಸಕ್ಕೆ ಇಳಿದಿದ್ದಾರೆ.
ಇದಕ್ಕೆ ಸಾಮಾಜಿಕ ಜಾಲತಾಣ ಬಳಸಿಕೊಳ್ಳುತ್ತಿದ್ದೀರಾ..? ಎಂದು ಕಿಡಿಕಾರಿದರು.
ಗೋಮಾಳ ಒತ್ತುವರಿ ಆರೋಪ ವಿಚಾರಕ್ಕೆ ಸಂಭಂಧಿಸಿದಂತೆ ಪ್ರತಿಕ್ರಿಯಿಸಿದ ಸಾ.ರಾ.ಮಹೇಶ್ ಸರ್ಕಾರಿ ದಾಖಲೆ ನೋಡಿದರೆ ಗೊತ್ತಾಗುತ್ತದೆ.
ನನಗೆ ಮಾಧ್ಯಮದಲ್ಲಿ ಬಿಡುಗಡೆ ಮಾಡಿದಾಗ ನೋವಾಯಿತು.
ಸಾ.ರಾ. ಕಲ್ಯಾಣಮಂಟಪದ ಜಾಗದ ವಿಚಾರ ಸಂಭಂಧಪಟ್ಟಂತೆ
20 ವರ್ಷದ ಹಿಂದೆ ಖರೀದಿ ಮಾಡಿರುವುದು.
ಕೆ ಜೆ ಕೊಪ್ಪಲಿನವರ ಆಸ್ತಿ ಅದು.
ಎಲ್ಲವನ್ನೂ ನಿಯಮಬದ್ದವಾಗಿ ಮಾಡಿದ್ದೇನೆ.
ಖಾತೆ, ಕಂದಾಯ, ಭೂ ಪರಿವರ್ತನೆ, ಪ್ಲ್ಯಾನ್ ಎಲ್ಲವೂ ನಿಯಮಬದ್ದವಾಗಿದೆ.
ಮೈಸೂರಿನ ಬಹುತೇಕ ಕಟ್ಟಡಗಳಿಗೆ ಸಿ ಆರ್ ಇಲ್ಲ
ಆದರೆ ನನ್ನ ಕಲ್ಯಾಣಮಂಟಪಕ್ಕೆ ಸಿ ಆರ್ ಸಹಾ ಪಡೆದಿದ್ದೇನೆ.
ನಾನು ಅಂದು ಪಡೆದಿದ್ದ ನಕ್ಷೆಯಂತೆ ಕಲ್ಯಾಣಮಂಟಪ ಕಟ್ಟಿದ್ದೇನೆ.
2003ರಲ್ಲಿ ಪಡೆದ ಪ್ಲ್ಯಾನ್ ತೋರಿಸಿದ ಸಾ ರಾ ಮಹೇಶ್ ಮಾಧ್ಯಮದವರಿಗೆ ಮಾಹಿತಿ ನೀಡಿದರು.
6 ಸಾವಿರ ಅಡಿ ರಿಂಗ್ ರಸ್ತೆಗೆ ಬಿಟ್ಟುಕೊಟ್ಟು ಪರಿಹಾರ ಸಹಾ ಪಡೆದಿಲ್ಲ.
ಲಿಂಗಾಬುದಿ ಕೆರೆ ಬಳಿ ಯಾವುದೇ ಕಟ್ಟಡ ಕಟ್ಟಿಲ್ಲ ಅಲ್ಲಿ ಖಾಲಿ ಜಾಗ ಇದೆ. ಕರ್ನಾಟಕ ಸರ್ಕಾರದ 2018ರ ಕಾಯ್ದೆ ಪ್ರಕಾರ 30 ಮೀಟರ್ ಬಪರ್ ಝೋನ್
30 ಮೀಟರ್‌ನಲ್ಲಿ ಯಾವುದೇ ಮನೆ ವಾಣಿಜ್ಯ ಚಟುವಟಿಕೆಗೆ ಅವಕಾಶವಿಲ್ಲ.
ಹಲಸೂರು ಕೆರೆಗೆ ಮಾತ್ರ 60 ಮೀಟರ್
ಉಳಿದ ಎಲ್ಲಾ ಕಡೆ 30 ಮೀಟರ್ ಅನ್ವಯದಂತೆ
ನ್ಯಾಯಾಲಯ ತೀರ್ಪು ನೀಡಿದೆ.
ಅಂದರೆ ನಿರ್ಗಮಿತ ಜಿಲ್ಲಾಧಿಕಾರಿ ಇದನ್ನು ಓದಿಲ್ವಾ ?
ಐಎಎಸ್ ಓದಿಲ್ವಾ ? ಗೊತ್ತಿದ್ದು ತೊಂದರೆ ಕೊಡಲು ಇವೆಲ್ಲಾ ಮಾಡಿದ್ರಾ ?ಎಂದು ಪ್ರಶ್ನಿಸಿದರು.

ಶ್ರೀಮತಿ ರೋಹಿಣಿ ಸಿಂಧೂರಿ ಅಂತಾ ನಾವು ಕರೆಯುತ್ತೇವೆ
ತಮ್ಮ ಪತಿಯ ಆಸ್ತಿ ಮಾಹಿತಿ ಎಲ್ಲಿ ?
ಪತಿಯ ಆಸ್ತಿ ಮಾಹಿತಿ ಸರ್ಕಾರಕ್ಕೆ ಕೊಡಬೇಕು ಅನ್ನೋ ಸಾಮಾನ್ಯ ಜ್ಞಾನ ಇಲ್ಲವಾ ? ನೀವು
ಬೇರೆಯಾಗಿ ವಾಸವಾಗಿದ್ದರೆ ಸರಿ.
ಸರ್ಕಾರಿ ನೌಕರರು ಅನ್ನೋದನ್ನು ಮರೆತು ವರ್ತಿಸಿದ್ದಾರೆ.
ಸರ್ಕಾರಿ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ.
ಸಂವೇದನಾಶೀಲ ಇಲ್ಲದ ಅಧಿಕಾರಿ
ಕರ್ತವ್ಯಲೋಪ ಮುಚ್ಚಿಕೊಳ್ಳಲು ಈ ರೀತಿ ಹೇಳಿಕೆ ನೀಡಿದ್ದಾರೆ.
ರಾಜ್ಯದ ಜನರು ಇದನ್ನು ಗಮನಿಸಬೇಕು.
ನಾನು ರಾಜಕಾಲುವೆ ಅಥವಾ ಹಳ್ಳದ ಮೇಲೆ ಕಟ್ಟಿದ್ದರೆ ರಾಜ್ಯಪಾಲರಿಗೆ ನೀಡುವೆ.
ಸಾರ್ವಜನಿಕ ಜೀವನದಿಂದ ನಿವೃತ್ತಿ ಪಡೆಯುವೆ.
ನೀವು ಸರ್ಕಾರಿ ಐಎಎಸ್ ಹುದ್ದೆಗೆ ರಾಜೀನಾಮೆ ಕೊಡ್ತೀರಾ ? ಎಂದು ಪ್ರಶ್ನಿಸಿದರು.
ಈ ರೀತಿಯ ಅಧಿಕಾರಿಯನ್ನು ನಾನು ಜೀವನದಲ್ಲಿ ನೋಡಿಲ್ಲ.
ಅಧಿಕಾರ ದುರುಪಯೋಗ, ಪಟ್ಟಭದ್ರಾಹಿತಾಸಕ್ತಿ,
ಕೆಲವು ಸಾಮಾಜಿಕ ಜಾಲತಾಣ ಬಳಸಿಕೊಂಡು ಈ ರೀತಿ ಕೃತ್ಯವೆಸಗಿರುವುದು ಸರಿಯಲ್ಲ.
ರಾಜ್ಯದ ಜನರು ಈ ಬಗ್ಗೆ ತೀರ್ಮಾನ ಮಾಡಬೇಕು.
ಸಾ.ರಾ. ಕಲ್ಯಾಣಮಂಟಪ ರಾಜಕಾಲುವೆ ಮೇಲೆ ನಿರ್ಮಾಣ ವಿಚಾರಕ್ಕೆ ಸಂಭಂಧಿಸಿದಂತೆ
ತಾಲ್ಲೂಕು ಭೂಮಾಪಕರು, ಎಸಿ ತಹಶೀಲ್ದಾರ್ ಭೂದಾಖಲೆಗಳ ಜಂಟಿ ನಿರ್ದೇಶಕರಿಂದ ವರದಿ ನೀಡಲಾಗಿದೆ.
ಅಧಿಕಾರಿಗಳಿಂದ ಇಂದಿನ ಮ್ಯಾಪ್ ಬಿಡುಗಡೆ ಆಗಿದೆ.
ಸರ್ವೇ ಮಾಡಿ ಅಧಿಕಾರಿಗಳು ಹೊಸ ಮ್ಯಾಪ್ ಬಿಡುಗಡೆ ಮಾಡಿದ್ದಾರೆ.
ಇದಕ್ಕೆ ಇಂದಿನ ಜಿಲ್ಲಾಧಿಕಾರಿ ಸಹಾ ಸಹಿ ಮಾಡಿದ್ದಾರೆ.
ಸಾರಾ ಕಲ್ಯಾಣ ಮಂಟಪ ಹಳ್ಳದ ಮೇಲೆ ನಿರ್ಮಾಣವಾಗಿಲ್ಲ.
ಹಳ್ಳದ ಯಾವುದೇ ಜಾಗ ಒತ್ತುವರಿ ಮಾಡಿಕೊಂಡಿಲ್ಲ.
ಎಲ್ಲಾ ಕಡೆ 70 ರಿಂದ 74 ಮೀಟರ್ ಅಂತರವಿದೆ ಎಂದು
ವರದಿ ಓದಿ ಹೇಳಿದ ಸಾ.ರಾ. ತಮ್ಮ ದಾಖಲೆಗಳ ಸಮೇತ ಸಮರ್ಥಿಸಿಕೊಂಡಿದ್ದಾರೆ…

LEAVE A REPLY

Please enter your comment!
Please enter your name here

- Advertisment -

Most Popular

ಮೊರಾರ್ಜಿ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಕೋವಿಡ್..! ಚಾಮರಾಜನಗರ ಜಿಲ್ಲೆ‌ ಯಳಂದೂರಿನ ಆದರ್ಶ ಶಾಲೆಯ ಬಳಿಕ ಹನೂರಿನ ಮೊರಾರ್ಜಿ ವಸತಿ ಶಾಲೆಯ...

ಇಂದು ಅರಮನೆಗೆ ಎಂಟ್ರಿ ನೀಡಲಿರುವ ಗಜಪಡೆ…

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನಲೆಅಂಬಾವಿಲಾಸ ಅರಮನೆಯಂಗಳಕ್ಕೆ ಇಂದು ಗಜಪಡೆ ಪ್ರವೇಶ ಪಡೆಯಲಿದೆ.ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಎಂಟು ಆನೆಗಳು ಅರಮನೆಗೆ ಪ್ರವೇಶಿಸಲಿವೆ.ಮೈಸೂರಿನ ಅಶೋಕಪುರಂನ...

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ…ಗಜಪಯಣ ಆರಂಭ…

ವಿಶ್ವವಿಖ್ಯಾತ ಜಂಬೂಸವಾರಿಯ ಗಜ ಪಯಣ ಆರಂಭವಾಗಿದೆ.ನಾಗರಹೊಳೆ ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಲಾಗಿದೆ.ಅಭಿಮನ್ಯು ನೇತೃತ್ವದ 8 ಆನೆಗಳ ತಂಡ ಮೈಸೂರಿನತ್ತ ಪ್ರಯಾಣ ಬೆಳಸಲಿದೆ.ಗಜಪಡೆಗೆ ಸಾಂಪ್ರದಾಯಿಕ ಪೂಜೆ...

ನೆಲಸಮಗೊಂಡ ಶಕ್ತಿ ಮಹಾದೇವಿ ದೇವಾಲಯಕ್ಕೆ ಪ್ರತಾಪ್ ಸಿಂಹ ಭೇಟಿ…ಗ್ರಾಮಸ್ಥರಿಗೆ ಸಂಸದರ ಅಭಯ…

ಇತ್ತೀಚೆಗೆ ನೆಲಸಮಗೊಂಡ ನಂಜನಗೂಡಿನ ಹುಚ್ಚಗಣಿ ಗ್ರಾಮದ ಶಕ್ತಿ ಮಹಾದೇವಿ ದೇವಾಲಯಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಪರಿಶೀಲನೆ ನಡೆಸಿದರು.ದೇವಾಲಯ ನೆಲಸಮಗೊಳಿಸಿರುವ ಸ್ಥಳಕ್ಕೆ ಭೇಟಿ...

Recent Comments