ನಗರ ಪಾಲಿಕೆ ಸದಸ್ಯತ್ವ ರದ್ದು ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಮೇಯರ್ ಆಗಿದ್ದ ರುಕ್ಮಿಣಿ ಮಾದೇಗೌಡ ಅವರ ಮೇಲ್ಮನವಿ ಅರ್ಜಿ ವಿಚಾರಣೆಯನ್ನ ಸುಪ್ರೀಂಕೋರ್ಟ್ ಜೂನ್ 28ಕ್ಕೆ ಮುಂದೂಡಿದೆ.
ಪಾಲಿಕೆ ಚುನಾವಣೆ ವೇಳೆ ಬಹಿರಂಗಪಡಿಸಿದ ಆಸ್ತಿಯ ಮಾಹಿತಿಯಲ್ಲಿ ಆಗಿರುವ ದೋಷಕ್ಕೆ ಸಂಬಂಧಿಸಿದಂತೆ ಈ ಹಿಂದೆ ರುಕ್ಮಿಣಿ ಮಾದೇಗೌಡ ಅವರ ನಗರ ಪಾಲಿಕೆ ಸದಸ್ಯತ್ವ ರದ್ದು ಮಾಡಿ, ಪರಾಜಿತ ಅಭ್ಯರ್ಥಿಗೆ ಸದಸ್ಯತ್ವ ನೀಡುವಂತೆ ಜಿಲ್ಲಾ ನ್ಯಾಯಾಲಯ ಆದೇಶ ನೀಡಿತ್ತು.ಇದಾದ ಬಳಿಕ ರುಕ್ಮಿಣಿ ಮಾದೇಗೌಡ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದರು. ಹೈಕೋರ್ಟ್ ಮರುಚುನಾವಣೆಗೆ ಆದೇಶಿಸಿತ್ತು. ಈಗ ತಮ್ಮ ಪರವಾಗಿ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ರುಕ್ಮಿಣಿ ಮಾದೇಗೌಡ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ನಗರಸಭೆ ಸದಸ್ಯತ್ವ ರದ್ದು ಆದೇಶವನ್ನು ರದ್ದುಪಡಿಸುವಂತೆ ಕೋರಿದ್ದರು.
ಈ ಕುರಿತು
ಸುಪ್ರೀಂಕೋರ್ಟ್ ವಿಚಾರಣೆಯನ್ನು ಮುಂದೂಡಿ ಆದೇಶ ಹೊರಡಿಸಿದೆ. ನನ್ನ ಹೆಸರಲ್ಲಿ ಯಾವುದೇ ಆಸ್ತಿ ಇರಲಿಲ್ಲ. ಹೀಗಾಗಿ ಚುನಾವಣೆ ಸಂದರ್ಭದಲ್ಲಿ ಪತಿಯ ಆಸ್ತಿಯನ್ನು ನನ್ನ ಆಸ್ತಿ ಅಂತ ಘೋಷಣೆ ಮಾಡಿಕೊಂಡಿದ್ದೆ. ಅವರ ಹೆಸರಲ್ಲಿ ಎಷ್ಟು ಆಸ್ತಿ ಇದೆ ಎಂಬುದು ನನಗೆ ಗೊತ್ತಿರಲಿಲ್ಲ. ಇದು ನನಗೆ ಗೊತ್ತಿಲ್ಲದೇ ಆಗಿರುವಂತಹ ತಪ್ಪು ಎಂದಿದ್ದರು ರುಕ್ಮಿಣಿ ಮಾದೇಗೌಡ…