ರಾಜ್ಯದಲ್ಲಿ ಸಂಪೂರ್ಣ ಆಡಳಿತ ಕುಸಿದಿದೆ ಇದಕ್ಕೆ ಮೈಸೂರಿನಲ್ಲಿ ನಡೆದ ಅಧಿಕಾರಿಗಳ ಗಲಾಟೆಯೇ ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ಧಾಳಿ ನಡೆಸಿದ್ದಾರೆ.ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಮೈಸೂರಿನಂತಹ ಜಿಲ್ಲೆಯ ಆಡಳಿತವೇ ಕುಸಿದ ಮೇಲೆ ಬೇರೆ ಜಿಲ್ಲೆಯ ಸ್ಥಿತಿ ಹೇಗಿರಬೇಡಾ? ಎಂದು ಪ್ರಶ್ನಿಸಿದರು.
ಈ ಸರ್ಕಾರ ಕುಸಿದಿರುವುದಕ್ಕೆ ಮೈಸೂರಿನ ಘಟನೆ ಪ್ರತಿಬಿಂಬದ ರೀತಿ ಕಾಣುತ್ತಿದೆ.ಸಚಿವರು ಹಾಗೂ ಸಿಎಂ ನಡುವೆ ಸಮನ್ವಯತೆ ಇಲ್ಲ.
ಸಿಎಂ ಅಲ್ಲಿ ಇಲ್ಲಿ ಸಭೆ ಮಾಡಿಕೊಂಡು ಓಡಾಡುತ್ತಿದ್ದಾರೆ.
ಸಚಿವರು ಏನು ಮಾಡುತ್ತಿದ್ದಾರೆ ನಿಮಗೇ ಗೊತ್ತಿದೆ ಎಂದು ವ್ಯಂಗ್ಯವಾಡಿದರು.
ಮುಖ್ಯಮಂತ್ರಿ ಯಾಗಿ ಯಡಿಯೂರಪ್ಪ ಮುಂದುವರೆಯುತ್ತಾರೋ ಇಲ್ಲವೋ ಎಂಬುದು ನನಗೆ ಸಂಬಂಧಿಸದ ವಿಚಾರ.
ನಿನ್ನೆ ಮೊನ್ನೆ ಮಠಕ್ಕೆ ಬಂದವರನ್ನು ಕೇಳಿದರೆ ಗೊತ್ತಾಗಬಹುದು ಎಂದು ಜಾರಿಕೊಂಡರು.
ಸತ್ತವರ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ ವಿಚಾರಕ್ಕೆ ವ್ಯಂಗ್ಯವಾಡಿದ ಡಿ.ಕೆ.ಶಿವಕುಮಾರ್
ಅಮ್ಮನವರು ಪಟ್ಟಕ್ಕೆ ಬರುವುದರೊಳಗೆ, ಐನೋರು ಚಟ್ಟಕ್ಕೆ ಹೋಗುವ ರೀತಿ ಆಗುತ್ತದೆ.ಲಕ್ಷ ಪರಿಹಾರ ಕೊಡುವುದಕ್ಕಿಂತ, ಖಾಸಗಿ ಆಸ್ಪತ್ರೆಗೆ ಕಟ್ಟಿರುವ ಬಿಲ್ ನ್ನು ವಾಪಸ್ಸು ಕೊಡಿಸಿ.
ಇದು ನಮ್ಮ ಆಗ್ರಹ ಎಂದು ತಮ್ಮ ಅಭಿಪ್ರಾಯ ತಿಳಿಸಿದರು…