32 C
Mysore
Wednesday, August 4, 2021
Home All News ಕಪಿಲಾ ನದಿ ಸ್ವಚ್ಛತಾಕಾರ್ಯ…ನದಿಗೆ ಇಳಿದು ಕ್ಲೀನ್ ಮಾಡಿದ ತಹಸೀಲ್ದಾರ್ ಮೋಹನಕುಮಾರಿ…

ಕಪಿಲಾ ನದಿ ಸ್ವಚ್ಛತಾಕಾರ್ಯ…ನದಿಗೆ ಇಳಿದು ಕ್ಲೀನ್ ಮಾಡಿದ ತಹಸೀಲ್ದಾರ್ ಮೋಹನಕುಮಾರಿ…


ಕೊರೊನಾ ಒತ್ತಡದಲ್ಲಿ ನದಿ ಸ್ವಚ್ಛತೆಗೆ ನಂಜನಗೂಡು ತಾಲೂಕು ಆಡಳಿತ ಆಧ್ಯತೆ ನೀಡಿದೆ.ಕಪಿಲಾ ನದಿ ಸ್ವಚ್ಛತಾಕಾರ್ಯ ಭರದಿಂದ ಸಾಗಿದೆ.ನಂಜನಗೂಡು ತಹಸೀಲ್ದಾರ್ ಮೋಹನಕುಮಾರಿ ಖುದ್ದು ನದಿಗೆ ಇಳಿದು ಸ್ವಚ್ಛಗೊಳಿಸುವ ಮೂಲಕ ಚಾಲನೆ ಕೊಟ್ಟಿದ್ದಾರೆ.ಕೈಗಳಿಗೆ ಗ್ಲೌಸ್ ಧರಿಸಿ ಸ್ವಚ್ಛತೆಗೆ ಇಳಿದ ತಹಸೀಲ್ದಾರ್ ಇತರ ಅಧಿಕಾರಿಗಳಿಗೆ ಮಾದರಿ ಆಗಿದ್ದಾರೆ.ತಾಲೂಕು ಆಡಳಿತಕ್ಕೆ ಪೌರಕಾರ್ಮಿಕರು ಹಾಗೂ ಕೆಲವು ಸಂಘಸಂಸ್ಥೆಗಳು ಸಾಥ್ ನೀಡಿವೆ.
ಕಪಿಲಾನದಿ ದಂಡೆ ಹಾಗೂ ನದಿಪಾತ್ರದಲ್ಲಿ ಸ್ವಚ್ಛತೆಗೆ ಅಧಿಕಾರಿಗಳು ಮುಂದಾಗಿದ್ದಾರೆ.
ಮಳೆಗಾಲದಲ್ಲಿ ನದಿತುಂಬಿ ಹರಿಯುವ ಹಿನ್ನಲೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.ನದಿಯಲ್ಲಿ ಮಿಂದೇಳುವ ಭಕ್ತರು ಬಟ್ಟೆಗಳನ್ನ ಬಿಟ್ಟುಹೋಗುವ ಪದ್ದತಿಯನ್ನ ಅನುಸರಿಸುತ್ತಿದ್ದಾರೆ.ಇದರಿಂದ ನದಿ ನೀರು ಕಲುಷಿತವಾಗುತ್ತಿದೆ ಅಲ್ಲದೆ ಜಲಚರಗಳಿಗೂ ಇದು ಕಂಟಕವಾಗಲಿದೆ.ಈ ಹಿನ್ನಲೆ ಸ್ವಚ್ಛಗೊಳಿಸಲಾಗುತ್ತಿದೆ ಎಂದು ತಹಸೀಲ್ದಾರ್ ಮೋಹನಕುಮಾರಿ ತಿಳಿಸಿದ್ದಾರೆ.ನದಿಯಲ್ಲಿ ಬಟ್ಟೆ ಬಿಡುವುದರಿಂದ ಒಳ್ಳೆಯದಾಗಲ್ಲ,ನದಿಯನ್ನ ಸ್ವಚ್ಛವಾಗಿಟ್ಟುಕೊಂಡರೆ ಒಳ್ಳೆಯದಾಗಲಿದೆ ಎಂಬ ಕಾನ್ಸೆಪ್ಟ್ ಮೂಲಕ ಕಾರ್ಯ ಆರಂಭವಾಗಿದೆ.ಎರಡು ದಿನಗಳ ಕಾಲ ನಡೆಯುವ ಸ್ವಚ್ಛತಾ ಕಾರ್ಯಕ್ಕೆ ಜೆಸಿಬಿ ಯಂತ್ರ ಬಳಸಿಕೊಳ್ಳಲಾಗಿದೆ.ಕೊರೊನಾ ನಡುವೆ ನದಿ ಸ್ವಚ್ಛತೆಗೆ ಆಧ್ಯತೆ ನೀಡಿದ ತಹಸೀಲ್ದಾರ್ ಮೋಹನಕುಮಾರ್ ಮೆಚ್ಚುಗೆಗೂ ಪಾತ್ರರಾಗಿದ್ದಾರೆ…

LEAVE A REPLY

Please enter your comment!
Please enter your name here

- Advertisment -

Most Popular

ಮನೆಗಳ್ಳನ ಬಂಧನ…48,500/- ನಗದು ವಶ…

ಸರಗೂರು ಪೊಲೀಸರು ಕಾರ್ಯಾಚರಣೆ ನಡೆಸಿಮೈಸೂರು:ಮನೆಯ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಬಂಧಸಿದ್ದಾರೆ.ಸರಗೂರು ತಾಲೂಕಿನ ಕುಂದೂರು ಗ್ರಾಮದ ನಿವಾಸಿ ಮಾದೇಗೌಡ ಬಂಧಿತ ಆರೋಪಿಯಾಗಿದ್ದಾನೆ.ಬಂಧಿತನಿಂದ 48,500...

ವಿ.ವಿ.ಪುರಂ ಪೊಲೀಸರ ಕಾರ್ಯಾಚರಣೆ ಬೈಕ್ ಕಳ್ಳರ ಬಂಧನ…9 ಬೈಕ್ ವಶ…

ವಿವಿ ಪುರಂ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಮೂವರು ಬೈಕ್ ಕಳ್ಳರ ಬಂಧನವಾಗಿದೆ.ಬಂಧಿತರಿಂದ 5.32 ಲಕ್ಷ ಮೌಲ್ಯದ 9 ಬೈಕ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.ಎರಡು ಪ್ರತ್ಯೇಕ...

ಸಿ.ಸಿ.ಬಿ.ಪೊಲೀಸರ ಕಾರ್ಯಾಚರಣೆ…4 ಕುಖ್ಯಾತ ಸರಗಳ್ಳರ ಬಂಧನ…

ಸಿಸಿಬಿ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ನಾಲ್ವರು ಕುಖ್ಯಾತ ಸರಗಳ್ಳರ ಬಂಧನವಾಗಿದೆ.ಆರೋಪಿಗಳಿಂದ 5,80,000 ರೂ ಮೌಲ್ಯದ ಚಿನ್ನಾಭರಣ ಹಾಗೂ 2 ದ್ವಿಚಕ್ರವಾಹನಗಳ ವಶಪಡಿಸಿಕೊಳ್ಳಲಾಗಿದೆ.ಶಾಂತಿನಗರದ ಅಯಾಜ್...

ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ನಗದು ಚಿನ್ನ ದರೋಡೆ…

ಮನೆಗೆ ನುಗ್ಗಿ ಮಾಲೀಕರಿಗೆ ಹಲ್ಲೆ ನಡೆಸಿ ನಗದು ಸೇರಿದಂತೆ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಹುಣಸೂರು ಪಟ್ಟಣದಲ್ಲಿ ನಡೆದಿದೆ.ಸುಮನ್ ಫಂಕ್ಷನ್ ಹಾಲ್ ನ...

Recent Comments