32 C
Mysore
Wednesday, August 4, 2021
Home All News ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ…

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ…

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ಯಾಕನೂರು ಗ್ರಾಮದಲ್ಲಿ ನಡೆದಿದೆ.ಕಾವ್ಯ(೨೧)ಮೃತ ದುರ್ದೈವಿಯಾಗಿದ್ದಾರೆ.
ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಒಂದೂವರೆ ವರ್ಷದ ಹಿಂದೆ ಯಾಕನೂರು ಗ್ರಾಮದ ಸುರೇಶ್ ಜೊತೆ ವಿವಾಹ ನೆರವೇರಿತ್ತು.ದಂಪತಿ ನಡುವೆ ಅನ್ಯೋನ್ಯತೆಯೂ ಇತ್ತು.ಆದರೆ ಸಣ್ಣಪುಟ್ಟ ವಿಚಾರಗಳಿಗೆ ಅತ್ತೆ ಜೊತೆ ಕಲಹ ಶುರುವಾಗಿತ್ತು.ಪ್ರತಿ ಹಂತದಲ್ಲೂ ಅತ್ತೆಯಿಂದ ಮಾನಸಿಕವಾಗಿ ಕಿರುಕುಳವಾಗುತ್ತಿತ್ತು.
ನನ್ನ ಮಗನಿಂದ ದೂರ ಮಾಡಿದ್ದೀಯೆಂದು ಅತ್ತೆ ಪುಟ್ಟಮಾದಮ್ಮ ಆರೋಪಿಸಿ ನಿಂದಿಸುತ್ತಾ ಕಿರುಕುಳ ನೀಡುತ್ತಿದ್ದಳು.ಅನ್ಯೋನ್ಯ ಸಂಸಾರಕ್ಕೆ ಅತ್ತೆ ಬೆಂಕಿ ಹಚ್ಚಿದ್ದಳು. ಗಂಡ ಸುರೇಶ್ ಸಹ ತಾಯಿಗೆ ಸಾಥ್ ಕೊಟ್ಟಿದ್ದ.
ಅತ್ತೆ ಕಿರುಕುಳಕ್ಕೆ ಬೇಸತ್ತ ಕಾವ್ಯ ೩ ದಿನಗಳ ಹಿಂದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಕಾವ್ಯಾಳನ್ನ
ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಕಾವ್ಯ ಸಾವನ್ನಪ್ಪಿದ್ದಾರೆ.
ಕಾವ್ಯ ಪೋಷಕರು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ.
ಗಂಡ ಸುರೇಶ್,ಅತ್ತೆ ಪುಟ್ಟಮಾದಮ್ಮ ಮೇಲೆ ಪ್ರಕರಣ ದಾಖಲಾಗಿದೆ.
ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

LEAVE A REPLY

Please enter your comment!
Please enter your name here

- Advertisment -

Most Popular

ಮನೆಗಳ್ಳನ ಬಂಧನ…48,500/- ನಗದು ವಶ…

ಸರಗೂರು ಪೊಲೀಸರು ಕಾರ್ಯಾಚರಣೆ ನಡೆಸಿಮೈಸೂರು:ಮನೆಯ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಬಂಧಸಿದ್ದಾರೆ.ಸರಗೂರು ತಾಲೂಕಿನ ಕುಂದೂರು ಗ್ರಾಮದ ನಿವಾಸಿ ಮಾದೇಗೌಡ ಬಂಧಿತ ಆರೋಪಿಯಾಗಿದ್ದಾನೆ.ಬಂಧಿತನಿಂದ 48,500...

ವಿ.ವಿ.ಪುರಂ ಪೊಲೀಸರ ಕಾರ್ಯಾಚರಣೆ ಬೈಕ್ ಕಳ್ಳರ ಬಂಧನ…9 ಬೈಕ್ ವಶ…

ವಿವಿ ಪುರಂ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಮೂವರು ಬೈಕ್ ಕಳ್ಳರ ಬಂಧನವಾಗಿದೆ.ಬಂಧಿತರಿಂದ 5.32 ಲಕ್ಷ ಮೌಲ್ಯದ 9 ಬೈಕ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.ಎರಡು ಪ್ರತ್ಯೇಕ...

ಸಿ.ಸಿ.ಬಿ.ಪೊಲೀಸರ ಕಾರ್ಯಾಚರಣೆ…4 ಕುಖ್ಯಾತ ಸರಗಳ್ಳರ ಬಂಧನ…

ಸಿಸಿಬಿ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ನಾಲ್ವರು ಕುಖ್ಯಾತ ಸರಗಳ್ಳರ ಬಂಧನವಾಗಿದೆ.ಆರೋಪಿಗಳಿಂದ 5,80,000 ರೂ ಮೌಲ್ಯದ ಚಿನ್ನಾಭರಣ ಹಾಗೂ 2 ದ್ವಿಚಕ್ರವಾಹನಗಳ ವಶಪಡಿಸಿಕೊಳ್ಳಲಾಗಿದೆ.ಶಾಂತಿನಗರದ ಅಯಾಜ್...

ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ನಗದು ಚಿನ್ನ ದರೋಡೆ…

ಮನೆಗೆ ನುಗ್ಗಿ ಮಾಲೀಕರಿಗೆ ಹಲ್ಲೆ ನಡೆಸಿ ನಗದು ಸೇರಿದಂತೆ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಹುಣಸೂರು ಪಟ್ಟಣದಲ್ಲಿ ನಡೆದಿದೆ.ಸುಮನ್ ಫಂಕ್ಷನ್ ಹಾಲ್ ನ...

Recent Comments