32 C
Mysore
Wednesday, September 22, 2021
Home All News ಬೈಕ್ ಖರೀದಿಗೆ ಗ್ರೀನ್ ಸಿಗ್ನಲ್ ನೀಡದ ಪೋಷಕರು…ಟೆಕ್ಕಿ ಆತ್ಮಹತ್ಯೆ…

ಬೈಕ್ ಖರೀದಿಗೆ ಗ್ರೀನ್ ಸಿಗ್ನಲ್ ನೀಡದ ಪೋಷಕರು…ಟೆಕ್ಕಿ ಆತ್ಮಹತ್ಯೆ…

ಬೈಕ್ ಖರೀದಿಸುವ ವಿಚಾರಕ್ಕೆ ಪೋಷಕರು ಒಮ್ಮತ ನೀಡದ ಹಿನ್ನಲೆ ಸಾಫ್ಟ್ ವೇರ್ ಇಂಜಿನಿಯರ್ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಕುವೆಂಪುನಗರದಲ್ಲಿ ನಡೆದಿದೆ.ಮೈಸೂರಿನ ಕುವೆಂಪುನಗರದ ನಿವಾಸಿ ಅಜಯ್ (25) ನೇಣಿಗೆ ಶರಣಾದ ದುರ್ದೈವಿ.ಬೆಂಗಳೂರಿನ ಕಂಪನಿಯೊಂದರಲ್ಲಿ ಸಾಫ್‌ವೇರ್‌ ಎಂಜಿನಿಯರ್ ಆಗಿದ್ದ ಅಜಯ್ ಕೊರೊನಾ ಹಿನ್ನಲೆ ಕೆಲ ತಿಂಗಳಿಂದ ವರ್ಕ್‌ ಫ್ರಂ ಹೋಂ ನಲ್ಲಿದ್ದರು. ಮನೆಯಿಂದಲೇ ತಮ್ಮ ಕಾರ್ಯನಿರ್ವಹಿಸುತ್ತಿದ್ದರು.ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಖರೀದಿಸಬೇಕು ಎಂದು ತಮ್ಮ ತಾಯಿ, ತಂದೆ ಜತೆ ಪ್ರಸ್ತಾಪಿಸಿದ್ದಾರೆ.
ಆದರೆ ಪೋಷಕರು ಸದ್ಯಕ್ಕೆ ಬೇಡ ಕೆಲ ದಿನಗಳ ನಂತರ ಖರೀದಿಸುವಂತೆ ಸಲಹೆ ನೀಡಿದ್ದಾರೆ.ಇದರಿಂದ ಬೇಸತ್ತ ಅಜಯ್‌ ರಾತ್ರಿ ಊಟ ಮುಗಿಸಿ ತಾಯಿ, ತಂದೆ ಹೊರಗೆ ವಾಕಿಂಗ್‌ ಹೋಗಿದ್ದಾಗ ಮನೆಯಲ್ಲಿ ಬಾಗಿಲು ಹಾಕಿಕೊಂಡು ನೇಣು ಹಾಕಿಕೊಂಡಿದ್ದಾರೆ. ಕುವೆಂಪುನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ…

LEAVE A REPLY

Please enter your comment!
Please enter your name here

- Advertisment -

Most Popular

ಮೊರಾರ್ಜಿ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಕೋವಿಡ್..! ಚಾಮರಾಜನಗರ ಜಿಲ್ಲೆ‌ ಯಳಂದೂರಿನ ಆದರ್ಶ ಶಾಲೆಯ ಬಳಿಕ ಹನೂರಿನ ಮೊರಾರ್ಜಿ ವಸತಿ ಶಾಲೆಯ...

ಇಂದು ಅರಮನೆಗೆ ಎಂಟ್ರಿ ನೀಡಲಿರುವ ಗಜಪಡೆ…

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನಲೆಅಂಬಾವಿಲಾಸ ಅರಮನೆಯಂಗಳಕ್ಕೆ ಇಂದು ಗಜಪಡೆ ಪ್ರವೇಶ ಪಡೆಯಲಿದೆ.ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಎಂಟು ಆನೆಗಳು ಅರಮನೆಗೆ ಪ್ರವೇಶಿಸಲಿವೆ.ಮೈಸೂರಿನ ಅಶೋಕಪುರಂನ...

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ…ಗಜಪಯಣ ಆರಂಭ…

ವಿಶ್ವವಿಖ್ಯಾತ ಜಂಬೂಸವಾರಿಯ ಗಜ ಪಯಣ ಆರಂಭವಾಗಿದೆ.ನಾಗರಹೊಳೆ ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಲಾಗಿದೆ.ಅಭಿಮನ್ಯು ನೇತೃತ್ವದ 8 ಆನೆಗಳ ತಂಡ ಮೈಸೂರಿನತ್ತ ಪ್ರಯಾಣ ಬೆಳಸಲಿದೆ.ಗಜಪಡೆಗೆ ಸಾಂಪ್ರದಾಯಿಕ ಪೂಜೆ...

ನೆಲಸಮಗೊಂಡ ಶಕ್ತಿ ಮಹಾದೇವಿ ದೇವಾಲಯಕ್ಕೆ ಪ್ರತಾಪ್ ಸಿಂಹ ಭೇಟಿ…ಗ್ರಾಮಸ್ಥರಿಗೆ ಸಂಸದರ ಅಭಯ…

ಇತ್ತೀಚೆಗೆ ನೆಲಸಮಗೊಂಡ ನಂಜನಗೂಡಿನ ಹುಚ್ಚಗಣಿ ಗ್ರಾಮದ ಶಕ್ತಿ ಮಹಾದೇವಿ ದೇವಾಲಯಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಪರಿಶೀಲನೆ ನಡೆಸಿದರು.ದೇವಾಲಯ ನೆಲಸಮಗೊಳಿಸಿರುವ ಸ್ಥಳಕ್ಕೆ ಭೇಟಿ...

Recent Comments