32 C
Mysore
Wednesday, September 22, 2021
Home All News ಕೆನರಾ ಬ್ಯಾಂಕ್ ಅಧಿಕಾರಿಗಳ ಎಡವಟ್ಟು…ಬೀದಿಗೆ ಬಿದ್ದ ವೃದ್ದ ದಂಪತಿ…ಜಿಲ್ಲಾಧಿಕಾರಿಗಳನ್ನೇ ದಾರಿ ತಪ್ಪಿಸಿದ್ರಾ…?

ಕೆನರಾ ಬ್ಯಾಂಕ್ ಅಧಿಕಾರಿಗಳ ಎಡವಟ್ಟು…ಬೀದಿಗೆ ಬಿದ್ದ ವೃದ್ದ ದಂಪತಿ…ಜಿಲ್ಲಾಧಿಕಾರಿಗಳನ್ನೇ ದಾರಿ ತಪ್ಪಿಸಿದ್ರಾ…?

ಕೆನರಾ ಬ್ಯಾಂಕ್ ಅಧಿಕಾರಿಗಳು ಮಾಡಿದ ಎಡವಟ್ಟಿಗೆ ವೃದ್ದ ದಂಪತಿ ಬೀದಿಗೆ ಬಿದ್ದಂತಾಗಿದೆ.ನಂಜನಗೂಡಿನಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು ಕಳೆದ ನಾಲ್ಕು ತಿಂಗಳಿಂದ ವೃದ್ದ ದಂಪತಿ ತಮ್ಮ ಮನೆಯ ಹೊಸಲಿನ ಬಳಿ ಸಮಯ ಕಳೆಯುತ್ತಿದ್ದಾರೆ.ಸಾಲ ವಸೂಲಾತಿ ನಿಯಮವನ್ನ ಉಲ್ಲಂಘಿಸಿ ವೃದ್ದ ದಂಪತಿಗೆ ಟಾರ್ಚರ್ ಕೊಟ್ಟು ಅವರ ಆಸ್ತಿಯನ್ನ ಬಲವಂತವಾಗಿ ಸ್ವಾಧೀನಕ್ಕೆ ಪಡೆದಿದ್ದಾರೆ.ಸ್ವಂತ ಸೂರಿದ್ದರೂ ವೃದ್ದ ದಂಪತಿಗೀಗ ಆಶ್ರಯವಿಲ್ಲದಂತಾಗಿದೆ.

ನಂಜನಗೂಡಿನ ಶ್ರೀಕಂಠಪುರ ಬಡಾವಣೆಯ ನಿವಾಸಿ ಲಿಂಗರಾಜು ದಂಪತಿಗೆ ಇಂತಹ ಸಂಕಷ್ಟ ಎದುರಾಗಿದೆ.ಜಿಲ್ಲಾಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿದ ಕೆನರಾ ಬ್ಯಾಂಕ್ ಅಧಿಕಾರಿಗಳು ಲಿಂಗರಾಜು ರವರಿಗೆ ಸೇರಿದ ಆಸ್ತಿಯನ್ನ ಮುಟ್ಟುಗೋಲು ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಬ್ಯಾಂಕ್ ಅಧಿಕಾರಿಗಳು ನೀಡಿದ ಮಾಹಿತಿ ಅನ್ವಯ ಜಿಲ್ಲಾಧಿಕಾರಿಗಳು ಮಾಡಿದ ಆದೇಶದಿಂದ ವೃದ್ದ ದಂಪತಿಯೀಗ ಬೀದಿಗೆ ಬಿದ್ದಂತಾಗಿದೆ.

ದಾರಿಯಲ್ಲಿ ಕಾಫಿ ಟೀ ಮಾರುವ ಕಾಯಕದಿಂದ ಜೀವನ ಸಾಗಿಸುತ್ತಿರುವ ಲಿಂಗರಾಜು ರವರು 2003 ರಲ್ಲಿ ನಂಜನಗೂಡಿನ ಎಂ.ಜಿ.ರಸ್ತೆಯಲ್ಲಿರುವ ಕೆನರಾಬ್ಯಾಂಕ್ ನಲ್ಲಿ ಮನೆ ನಿರ್ಮಾಣಕ್ಕಾಗಿ 1,40,000/- ರೂ ಅಡಮಾನ ಸಾಲ ಪಡೆದಿದ್ದಾರೆ.ತಮ್ಮ ಸಾಲಕ್ಕಾಗಿ ಶ್ರೀಕಂಠಪುರದ ತಮ್ಮ ಮನೆಯನ್ನ ಮಾರ್ಟ್ಗೇಜ್ ಮಾಡಿದ್ದಾರೆ.12 ವರ್ಷದ ಸುಧೀರ್ಘ ಸಾಲ ಪಡೆದ ಲಿಂಗರಾಜು ಒಂದು ವರ್ಷದಲ್ಲಿ ಸುಮಾರು 40 ಸಾವಿರ ಹಿಂದಿರುಗಿಸಿದ್ದಾರೆ.ನಂತರ ವೈಯುಕ್ತಿಕ ಕಾರಣದಿಂದ ಸಾಲ ತೀರಿಸಲು ಆಶಕ್ತರಾಗಿದ್ದಾರೆ.ಈ ವೇಳೆ ಬ್ಯಾಂಕ್ ಅಧಿಕಾರಿಗಳು ನಿಯಮಾನುಸಾರ ಸಾಲ ವಸೂಲಿ ಮಾಡಬೇಕಿತ್ತು.ಅವಧಿ ಮುಗಿದರೂ ಅಂದ್ರೆ 12 ವರ್ಷಗಳ ನಂತರವೂ ಸಾಲ ವಸೂಲಿಗೆ ಬ್ಯಾಂಕ್ ನವರು ಪ್ರಯತ್ನವೇ ಮಾಡಿಲ್ಲ.ಒಂದು ನೋಟೀಸ್ ಸಹ ಜಾರಿ ಮಾಡಿಲ್ಲ.ಸಾಲ ಪಡೆದ ದಿನಾಂಕದಿಂದ 15 ವರ್ಷಗಳ ನಂತರ ಜ್ಞಾನೋದಯವಾಗಿ ಸಾಲ ವಸೂಲಿಗೆ ಮುಂದಾಗಿದ್ದಾರೆ.ನಿಯಮಾನುಸಾರ 12 ವರ್ಷದ ಒಳಗೆ ಸಾಲ ವಸೂಲಾತಿ ಪ್ರಕ್ರಿಯೆ ನಡೆಯಬೇಕು.ಆದರೆ ಬ್ಯಾಂಕ್ ಅಧಿಕಾರಿಗಳು 2018 ರಲ್ಲಿ ವಸೂಲಾತಿ ಪ್ರಕ್ರಿಯೆಗೆ ಮುಂದಾಗಿದ್ದಾರೆ.ಸರ್ ಫೇಸ್ ಕಾಯಿದೆ ಸೆಕ್ಷನ್ 36 ರ ಅನ್ವಯ(Limitation act 1963) ಬ್ಯಾಂಕ್ ನವರಿಗೆ 12 ವರ್ಷ ಮುಗಿದರೆ ಸಾಲ ವಸೂಲಾತಿಗೆ ಹಕ್ಕು ಇರುವುದಿಲ್ಲ.ಆದರೆ ಬ್ಯಾಂಕ್ ಅಧಿಕಾರಿಗಳು 2013 ರಲ್ಲಿ ಸಾಲ ಪಡೆದಂತೆ ದಾಖಲೆ ಸೃಷ್ಟಿಸಿದ್ದಾರೆ.ಮತ್ತೊಬ್ಬರು ಪಡೆದ ಸಾಲದ ದಾಖಲೆಗಳನ್ನ ಲಿಂಗರಾಜು ರವರ ದಾಖಲೆಗೆ ಸೇರ್ಪಡಿಸಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ.ಲಿಂಗರಾಜು ಸಾಲ ಪಡೆದಿದ್ದು 1,40,000/- ಆದರೆ ದಾಖಲೆಗಳಲ್ಲಿ 1,60,000/- ನಮೂದಾಗಿದೆ.ಲಿಂಗರಾಜು ರವರ ಸಾಲದ ಖಾತೆ ನಂಬರ್ ಸಹ ಬದಲಾಗಿದೆ.2018 ರಲ್ಲಿ ಪತ್ರಿಕೆಗಳಲ್ಲಿ ನೋಟೀಸ್ ಪ್ರಕಟಣೆ ಹೊರಡಿಸಿ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೂ ಸುಳ್ಳು ದಾಖಲೆಗಳನ್ನ ಒದಗಿಸಿ ಆಸ್ತಿಯನ್ನ ಭೌತಿಕವಾಗಿ ವಶಪಡಿಸಿಕೊಳ್ಳುವ ಹುನ್ನಾರ ನಡೆಸಿ ಯಶಸ್ವಿಯಾಗಿದ್ದಾರೆ.ಬ್ಯಾಂಕ್ ಅಧಿಕಾರಿಗಳು ಒದಗಿಸಿದ ದಾಖಲೆಗಳನ್ನ ಪರಿಶೀಲಿಸದ ಅಂದಿನ ಜಿಲ್ಲಾಧಿಕಾರಿಗಳು 2019 ರಲ್ಲಿ ಸ್ವತ್ತನ್ನ ಬಲಪ್ರಯೋಗ ಬಳಸಿ ವಶಪಡಿಸಿಕೊಳ್ಳುವಂತೆ ಆದೇಶ ಹೊರಡಿಸಿದ್ದಾರೆ.ಮಾರ್ಚ್ 2019 ರಲ್ಲಿ ಜಿಲ್ಲಾಧಿಕಾರಿಗಳ ಆದೇಶವಾಗಿದೆ.ಜಿಲ್ಲಾಧಿಕಾರಿಗಳ ಆದೇಶವನ್ನ ಪ್ರಶ್ನಿಸಿ ತಮಗಾದ ಅನ್ಯಾಯವನ್ನ ಸರಿಪಡಿಸುವಂತೆ ಲಿಂಗರಾಜು ಪ್ರಾದೇಶಿಕ ಆಯುಕ್ತರ ಮೊರೆ ಹೋಗಿದ್ದಾರೆ.ಪ್ರಾದೇಶಿಕ ಆಯುಕ್ತರೂ ಸಹ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.ಆದರೆ ಜಿಲ್ಲಾಧಿಕಾರಿಗಳ ಆದೇಶವನ್ನ ಪಡೆದ ಬ್ಯಾಂಕ್ ಅಧಿಕಾರಿಗಳು ಆದೇಶವಾದ ಎರಡು ವರ್ಷಗಳ ನಂತರ ಬಲವಂತವಾಗಿ ಲಿಂಗರಾಜು ರವರ ಮನೆಯನ್ನ ತಮ್ಮ ಸ್ವಾಧೀನಕ್ಕೆ ಪಡೆದಿದ್ದಾರೆ.ಸರ್ ಫೇಸ್ ಕಾಯಿದೆಯನ್ನ ಉಲ್ಲಂಘಿಸಿರುವ ಬ್ಯಾಂಕ್ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಂಡು ತಮ್ಮ ಆಸ್ತಿಯನ್ನ ಬಿಟ್ಟುಕೊಡಬೇಕೆಂದು ಲಿಂಗರಾಜು ಮನವಿ ಮಾಡಿದ್ದಾರೆ.2013 ರಲ್ಲಿ ತಾನು ಯಾವುದೇ ಸಾಲ ಪಡೆಯದಿದ್ದರೂ ನಕಲಿ ದಾಖಲೆ ಸೃಷ್ಟಿಸಿ ತಮ್ಮ‌ಆಸ್ತಿಯನ್ನ ಮುಟ್ಟುಗೋಲು ಹಾಕಿಕೊಂಡಿದ್ದಾರೆಂದು ಲಿಂಗರಾಜು ಆರೋಪಿಸಿದ್ದಾರೆ.ಸ್ವಂತಮನೆ ಇದ್ದರೂ ಸಧ್ಯ ಸೂರಿಲ್ಲದಂತಾಗಿದೆ ಲಿಂಗರಾಜು ಪರಿಸ್ಥಿತಿ.ಸಂಭಂಧಪಟ್ಟ ಅಧಿಕಾರಿಗಳು ಮಧ್ಯ ಪ್ರವೇಶಿಸಿ ದಾಖಲೆಗಳನ್ನ ಪರಿಶೀಲಿಸಿ ಲಿಂಗರಾಜು ರವರಿಗೆ ನ್ಯಾಯ ಕೊಡಿಸುವರೇ…?

LEAVE A REPLY

Please enter your comment!
Please enter your name here

- Advertisment -

Most Popular

ಮೊರಾರ್ಜಿ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಕೋವಿಡ್..! ಚಾಮರಾಜನಗರ ಜಿಲ್ಲೆ‌ ಯಳಂದೂರಿನ ಆದರ್ಶ ಶಾಲೆಯ ಬಳಿಕ ಹನೂರಿನ ಮೊರಾರ್ಜಿ ವಸತಿ ಶಾಲೆಯ...

ಇಂದು ಅರಮನೆಗೆ ಎಂಟ್ರಿ ನೀಡಲಿರುವ ಗಜಪಡೆ…

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನಲೆಅಂಬಾವಿಲಾಸ ಅರಮನೆಯಂಗಳಕ್ಕೆ ಇಂದು ಗಜಪಡೆ ಪ್ರವೇಶ ಪಡೆಯಲಿದೆ.ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಎಂಟು ಆನೆಗಳು ಅರಮನೆಗೆ ಪ್ರವೇಶಿಸಲಿವೆ.ಮೈಸೂರಿನ ಅಶೋಕಪುರಂನ...

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ…ಗಜಪಯಣ ಆರಂಭ…

ವಿಶ್ವವಿಖ್ಯಾತ ಜಂಬೂಸವಾರಿಯ ಗಜ ಪಯಣ ಆರಂಭವಾಗಿದೆ.ನಾಗರಹೊಳೆ ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಲಾಗಿದೆ.ಅಭಿಮನ್ಯು ನೇತೃತ್ವದ 8 ಆನೆಗಳ ತಂಡ ಮೈಸೂರಿನತ್ತ ಪ್ರಯಾಣ ಬೆಳಸಲಿದೆ.ಗಜಪಡೆಗೆ ಸಾಂಪ್ರದಾಯಿಕ ಪೂಜೆ...

ನೆಲಸಮಗೊಂಡ ಶಕ್ತಿ ಮಹಾದೇವಿ ದೇವಾಲಯಕ್ಕೆ ಪ್ರತಾಪ್ ಸಿಂಹ ಭೇಟಿ…ಗ್ರಾಮಸ್ಥರಿಗೆ ಸಂಸದರ ಅಭಯ…

ಇತ್ತೀಚೆಗೆ ನೆಲಸಮಗೊಂಡ ನಂಜನಗೂಡಿನ ಹುಚ್ಚಗಣಿ ಗ್ರಾಮದ ಶಕ್ತಿ ಮಹಾದೇವಿ ದೇವಾಲಯಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಪರಿಶೀಲನೆ ನಡೆಸಿದರು.ದೇವಾಲಯ ನೆಲಸಮಗೊಳಿಸಿರುವ ಸ್ಥಳಕ್ಕೆ ಭೇಟಿ...

Recent Comments